ಕಳೆದ ತಿಂಗಳು ಬಿಡುಗಡೆಯಾಗಿದ್ದ ದಿ ಕಾಶ್ಮೀರಿ ಫೈಲ್ಸ್ ಚಿತ್ರ ದೇಶದಲ್ಲಿ ಸಾಕಷ್ಟು ವಾದ-ವಿವಾದವನ್ನು ಹುಟ್ಟುಹಾಕಿತ್ತು. ಈ ಮಧ್ಯೆ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಪ್ರದರ್ಶನವನ್ನು ಸಿಂಗಪುರದಲ್ಲಿ ನಿಷೇಧಿಸಿದ್ದ ವಿಚಾರ ದೊಡ್ಡ ಸುದ್ದಿಯಾಗಿತ್ತು.
ಇದೀಗ ತಿರುವನಂತಪುರ ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಕುರಿತು ಟ್ವೀಟ್ ಮಾಡಿದ್ದು, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗು ನಟ ಅನುಪಮ್ ಖೇರ್ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದೆ.
ʻನೋಡಿ ಭಾರತ ಸರ್ಕಾರದ ಆಡಳಿತ ಪಕ್ಷ ಪ್ರೋತ್ಸಾಹಿಸಿದ ಚಿತ್ರವನ್ನ ಸಿಂಗಪುರದಲ್ಲಿ ನಿಷೇಧಿಸಿದ್ದಾರೆ ಎಂದು ಟ್ವೀಟ್ ಮಾಡಿ ಚಿತ್ರ ತಂಡದ ಕಾಲೆಳಿದಿದ್ದಾರೆ.
ಇದಕ್ಕೆ ಪ್ರತಿಯಾಗಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ʻಕಿಚಾಯಿಸುವುದನ್ನು ಬಂದ್ ಮಾಡಿ ಕಾಶ್ಮೀರಿ ಪಂಡಿತರ ಬಗ್ಗೆ ಅಪಹಾಸ್ಯ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.
ಮುಂದುವರೆದು ನಿಮ್ಮ ದಿವಂಗತ ಪತ್ನಿ ಸುನಂದಾ ಪುಷ್ಕರ್ ಕೂ ಡ ಕಾಶ್ಮೀರಿ ಪಂಡಿತರ ಕುಟುಂಬದವರು ದಯವಿಟ್ಟು ಈ ಕೂಡಲೇ ಈ ಟ್ವೀಟನ್ನು ಡಿಲೀಟ್ ಮಾಡಿ ಎಂದು ನಿರ್ದೇಶಕ ಅಗ್ನಿಹೋತ್ರಿ ಜೊತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ನಟ ಅನುಪಮ್ ಖೇರ್, ಹಿಂದೂಗಳ ಹತ್ಯೆ ವಿಚಾರದಲ್ಲಿ ನಿಮ್ಮ ನಿರ್ದಯತೆ ಒಂದು ದೊಡ್ಡ ದುರಂತ, ಕನಿಷ್ಠ ನಿಮ್ಮ ಪತ್ನಿ ಸಾವಿಗಾರದು ಮರುಗುತ್ತೀರಿ ಎಂದುಕೊಂಡಿದ್ದೇವು, ನೀವು ಮಾಡುತ್ತಿರುವುದು ಯಾವುದೇ ಕಾರಣಕ್ಕು ಸರಿಯಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಉದ್ರಿಕ್ತರಾದ ಶಶಿ ನನ್ನ ಪತ್ನಿಯನ್ನು ಈ ವಿಚಾರದಲ್ಲಿ ಎಳೆದು ತರಬೇಡಿ ನಿಮ್ಮಗಿಂತ ಚೆನ್ನಾಗಿ ನಾನು ಅವಳನ್ನು ಬಲ್ಲೆ ಅವಳು ತನ್ನ ಹಿಂದೂ ಹಾಗು ಮುಸ್ಲಿಂ ಸ್ನೇಹಿತರೊಂದಿಗೆ ಅವಿನಾಭಾವ ಸಂಬಂದವನ್ನು ಹೊಂದಿದ್ದಳು ದ್ವೇಷ ಹರಡುವುದಕ್ಕಿಂತ ಸಾಮರಸ್ಯವನ್ನ ಹೆಚ್ಚು ನಂಬಿದ್ದಳು ಎಂದು ತಿರುಗೇಟು ನೀಡಿದ್ದಾರೆ.













