• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸಹಾಯಕ ಪ್ರಾಧ್ಯಾಪಕರ ಪರೀಕ್ಷಾ ಅಕ್ರಮ : ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು

ಪ್ರತಿಧ್ವನಿ by ಪ್ರತಿಧ್ವನಿ
May 9, 2022
in ಕರ್ನಾಟಕ
0
ಸಹಾಯಕ ಪ್ರಾಧ್ಯಾಪಕರ ಪರೀಕ್ಷಾ ಅಕ್ರಮ : ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು
Share on WhatsAppShare on FacebookShare on Telegram

ಕಾಲೇಜು ಶಿಕ್ಷಣ ಇಲಾಖೆಯ 1242 ಸಹಾಯಕ ಪ್ರಾಧ್ಯಾಪಕರ ಪರೀಕ್ಷಾ ಅಕ್ರಮವನ್ನು ನ್ಯಾಯಾಂಗ ತನಿಖೆಗೆ ಸರ್ಕಾರ ವಹಿಸಬೇಕು ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಒತ್ತಾಯಿಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ,ಮಾತನಾಡಿದ ಅವರು, ಉನ್ನತ ಶಿಕ್ಷಣ ಇಲಾಖೆಯ ಎಲ್ಲ ನೇಮಕಾತಿಗಳನ್ನು ಜನ ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಬಹಳ ವಿಷಾದದ ಸಂಗತಿ. 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅಕ್ಟೋಬರ್ ನಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿ, ಪರೀಕ್ಷೆ ನಡೆಸಲು ಅಧಿಸೂಚನೆ ನೀಡಿದ ನಂತರ 2 ಬಾರಿ ಅದು ಮುಂದೂಡಲ್ಪಡುತ್ತದೆ. ನಂತರ 30 ಸಾವಿರಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಮಾ.12,13,14,15ರಂದು ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳಾ ಅತಿಥಿ ಉಪನ್ಯಾಸಕಿ ಹಾಗೂ ರಿಜಿಸ್ಟ್ರಾರ್ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಪರೀಕ್ಷೆಯಲ್ಲೂ ಓಎಂಆರ್ ಪತ್ರಿಕೆಗಳನ್ನು ತಿದ್ದಿ ಅಖ್ರಮ ಮಾಡಿದ್ದು, ಇದು ಪಿಎಸ್ ಐ ಅಕ್ರಮಕ್ಕೆ ಸಾಮ್ಯತೆ ಹೊಂದಿದೆ ಎಂದು ಹೇಳಿದ್ದಾರೆ.

ಒಂದೊಂದು ಹುದ್ದೆಗೆ 1 ಕೋಟಿಯಷ್ಟು ಲಂಚ ಪಡೆದಿರುವ ಪ್ರಬಲ ಆರೋಪ ಕೇಳಿಬರುತ್ತಿದೆ. ಇವರು ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಿ.ಪ್ರದೀಪ್ ಎಂಬ ಐಎಎಸ್ ಅಧಿಕಾರಿಯವರನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆ. ನಂತರ ಬೊಮ್ಮಾಯಿ ಅವರು ಬಂದ ನಂತರ ಬೇರೆಯವರನ್ನು ಆಪ್ತಸಹಾಯಕರನ್ನಾಗಿ ತೆಗೆದುಕೊಳ್ಳಲಾಗಿದೆ. ಪ್ರದೀಪ್ ಅವರು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದು, ಇವರು ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ್ ನಾರಾಯಣ ಅವರ ಸಂಬಂಧಿಗಳಾಗಿದ್ದಾರೆ. ಇವರನ್ನು ಆಪ್ತಸಹಾಯಕರನ್ನಾಗಿ ನೇಮಕಗೊಂಡ ನಂತರ ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರನ್ನಾಗಿ ಅವರನ್ನೇ ಮುಂದುವರಿಸುತ್ತಾರೆ ಎಂದು ಹೇಳಿದ್ದಾರೆ.

ಇಂದಿನ ಎಲ್ಲ ಆರೋಪಗಳಲ್ಲಿ ಈ ಇಲಾಖೆಯ ಮೇಲಿನ ಅಪನಂಬಿಕೆ ಹೆಚ್ಚಾಗಿರುವುದರಿಂದ ಅವರ ಹೆಸರು ಪ್ರಸ್ತಾಪ ಮಾಡಬೇಕಾಗಿದೆ. ಕಾಲೇಜು ಶಿಕ್ಷಣ ಇಲಾಖೆಯನ್ನು ಆಯುಕ್ತಾಲಯವನ್ನಾಗಿ ಪರಿವರ್ತಿಸಿ ತಾಂತ್ರಿಕ ಇಲಾಖೆಯನ್ನು ಇವರ ಅಡಿಗೆ ತೆಗೆದುಕೊಂಡು ಬರುತ್ತಾರೆ. ಇಂಜಿನಿಯರಿಂಗ್ ಕಾಲೇಜುಗಳ ಸೀಟ್ ಮಾನ್ಯತೆಗಳೆಲ್ಲವೂ, ಪಾಲಿಟೆಕ್ನಿಕ್  ಈ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತದೆ.

1242 ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಹಗರಣವಾಗಿರುವ ಸಂದರ್ಭದಲ್ಲಿ, ರಾಜ್ಯದ 3800ಕ್ಕೂ ಹೆಚ್ಚು ಸರ್ಕಾರಿ ಕಾಲೇಜುಗಳ ಪೈಕಿ 430ಕ್ಕೂ ಹೆಚ್ಚು ಪ್ರಾಂಶುಪಾಲರ ಹುದ್ದೆ ಖಾಲಿ ಇದೆ. ಆ ಹುದ್ದೆ ತುಂಬಲು 310 ಹುದ್ದೆಗಳಿಗೆ ಆರ್ಥಿಕ ಇಲಾಖೆಯಿಂದ ತುಂಬಲು ಆರ್ಥಿಕ ಇಳಾಖೆಯಿಂದ ಅನುಮೋದನೆ ಪಡೆದು ಅದರಲ್ಲೂ ಅಕ್ರಮ ಮಾಡಲು ಉನ್ನತ ಶಿಕ್ಷಣ ಸಚಿವರು ಕಾಲೇಜು ಶಿಕ್ಷಣ ಇಲಾಖೆ ಮೂಲಕ ಅಕ್ರಮ ಎಸಗುವ ಪ್ರಯತ್ನ ಮಾಡಿದ್ದಾರೆ. ಆದರೆ ಬೇರೆ ಕಾರಣಕ್ಕೆ ಈ ಹುದ್ದೆ ನೇಮಕಾತಿಗೆ ಅರ್ಜಿ ಕರೆದಿಲ್ಲ ಎಂದು ಆರೋಪಿಸಿದ್ದಾರೆ.

ಒಂದೆಡೆ ಸಹಾಯಕ ಪ್ರಾದ್ಯಾಪಕರ ಹುದ್ದೆ ಅಕ್ರಮ ಹಾಗೂ ಪ್ರಾಂಶುಪಾಲರ ಹುದ್ದೆಯಲ್ಲಿ ಮಾಡಲು ಹೊರಟಿರುವ ಅಕ್ರಮ ಇವೆರಡು ತನಿಖೆಗೆ ಒಳಪಡಿಸಬೇಕು ಎಂದು ಪಕ್ಷದ ಪರವಾಗಿ ಸರ್ಕಾರವನ್ನು ಒತ್ತಾಯಿಸುತ್ತೇನೆ. ಸಚಿವ ಅಸ್ವತ್ಥ್ ನಾರಾಯಣ ಅವರು ಸಾಕಷ್ಟು ಸಬೂಬುಗಳನ್ನು ಕೊಡಬಹುದು. 1242 ಹುದ್ದೆಗೆ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದು, ಆಗಿರುವ ಅಕ್ರಮ, ಇಬ್ಬರ ಬಂಧನವಾಗಿರುವುದಕ್ಕೆ ಕಾರಣ ಇದೆಲ್ಲದರ ವಿಚಾರ ತನಿಖೆ ನಡೆಯದೇ ಸತ್ಯಾಂಶ ಹೊರಬರುವುದಿಲ್ಲ.

ಈ ಎರಡು ನೇಮಕಾತಿ ಪ್ರಕರಣಗಳಲ್ಲಿ ಉನ್ನತ ಶಿಕ್ಷಣ ಸಚಿವರು ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಭಾಗಿಯಾಗಿದ್ದು, ಸರ್ಕಾರ ಕೂಡಲೇ ಈ ವಿಚಾರವಾಗಿ ತನಿಖೆ ನಡೆಸಬೇಕು. ಅವರು ಯಾವ ತನಿಖೆ ಮಾಡುತ್ತಾರೋ ಮುಖ್ಯಮಂತ್ರಿಗಳು ನಿರ್ಧರಿಸಲಿ, ಆದರೆ ಪಿ.ಎಚ್ಡಿ, ಎಂ ಫಿಲ್, ನೆಟ್, ಸ್ಲೆಟ್ ಅರ್ಹತೆ ಪಡೆದು ಉದ್ಯೋಗದ ಆಕಾಂಕ್ಷೆಯೊಂದಿಗೆ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ಮೋಸ ಮಾಡುವ ಪ್ರಕ್ರಿಯೆಗೆ ಸರ್ಕಾರ ಅವಕಾಶ ನೀಡಬಾರದು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಕಳೆದ ಒಂದು ವಾರದ ಹಿಂದೆ ಕಾಲೇಜು ಶಿಕ್ಷಣ ಇಲಾಖೆಯಿಂದ ಒಂದು ಪ್ರಕಟಣೆ ನೀಡಿದ್ದು, ಯಾರೆಲ್ಲಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರು, ನಿಯೋಜನೆ ಮೇರೆಗೆ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ವಾಪಸ್ ಕರೆಸಿಕೊಂಳ್ಲುತ್ತೇವೆ ಎಂದು ಹೇಳಿದೆ. ಆದರೆ ಭಗವಾನ್ ಎಂಬ ಉಪನ್ಯಾಸಕರು ಎಂ.ಎಸ್ ಕಟ್ಟಡದಲ್ಲಿ ಸುಮಾರ್ 20 ವರ್ಷದಿಂದ ಇ ಗವರ್ನೆಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ವಿಧಾನ ಪರಿಷತ್ ಸಮಿತಿಯು ಇದು ಅಕ್ರಮವಾಗಿ ನಿಯೋಜಿಸಿದ್ದು, ಅವರನ್ನು ವಾಪಸ್ ಕರೆತರಬೇಕು ಎಂದು ವರದಿ ನೀಡಿದ್ದರೂ ಅವರನ್ನು ಅಲ್ಲೇ ಮುಂದುವರಿಸಲಾಗಿದೆ.

ಇನ್ನು ರಮೇಶ್ ರೆಡ್ಡಿ ಎಂಬ ಉಪನ್ಯಾಸಕರು ಕಾಲೇಜು ಶಿಕ್ಷಣ ಇಲಾಖೆಯ ಇ ಗವರ್ನೆನ್ಸ್ ನಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದು,  ಕಾಲೇಜು ಶಿಕ್ಷಣ ಇಲಾಖೆಯಲ್ಲಿ ನಡೆದಿರುವ, ನಡೆಯಬಹುದಾದ ಎಲ್ಲ ಅಕ್ರಮಗಳಿಗೆ ಇವರ ಪಾತ್ರವಿದೆ. ಹೀಗಾಗಿ ಈ ಇಬ್ಬರ ಹೆಸರು ಪ್ರಸ್ತಾಪ ಮಾಡುತ್ತಿದ್ದೇನೆ. ಈ ಎಲ್ಲದರ ಬಗ್ಗೆ ಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ರಾಜೀವ್ ಗಾಂಧಿ ವಿವಿಯ ರಿಜಿಸ್ಟ್ರಾರ್ ಆಗಿದ್ದ ಅಶೋಕ್ ಕುಮಾರ್ ಅವರಿಗೆ ಅವರದೇ ಆದ ಶಿಷ್ಯವರ್ಗವಿದೆ. ನಾಲ್ಕು ವಿವಿಯ ಉಪಕುಲಪತಿಗಳ ಆಯ್ಕೆ ಪ್ರಕ್ರಿಯೆ ವೇಳೆ 2 ಕೋಟಿ ರೂ. ಲಂಚವನ್ನು ನೀಡಿದ್ದರು. ಅವರು ಆಯ್ಕೆಯಾಗದಿದ್ದಾಗ ತಾವು ಮಾಡಿಕೊಂಡ ಸಾಲಕ್ಕೆ ಭಯಭೀತರಾಗಿ ಅವರು ಆತ್ಮಹತ್ಯೆಗೆ ಶರಣಾದರು. ಆ ದಿನ ನವೆಂಬರ್ 9, 2020ರಂದು ಕರ್ನಾಟಕ ರಾಜ್ಯಪಾಲರಿಗೆ ಈ ಪ್ರಕರಣವನ್ನು ಗಮನಕ್ಕೆ ತಂದಿದೆ.

ಅಶ್ವತ್ಥ್ ನಾರಾಯಣ ಅವರು ಉನ್ನತ ಶಿಕ್ಷಣ ಸಚಿವರಾಗಿರುವ ಸಂದರ್ಭದಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದ 9 ವಿವಿಗಳು ರಾಜ್ಯದಲ್ಲಿದ್ದು, ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿರುವ 1 ವಿವಿ, 13 ಡೀಮ್ಡ್ ವಿವಿಗಳು, ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ 29 ವಿವಿ, 17 ಖಾಸಗಿ ವಿವಿಗಳು ಇವರ ಅಡಿಯಲ್ಲಿ ಬರುತ್ತಿದೆ. ಇವರು 2019ರಿಂದ ಈ ಇಲಾಖೆ ಸಚಿವರಾಗಿದ್ದು, ಸುಮಾರು 45 ಉಪಕುಲಸಚಿವರ ನೇಮಕಾತಿಯಾಗಿದೆ. ನಾಮಕಾವಸ್ಥೆಗೆ ಆಯ್ಕೆ ಸಮಿತಿ ಮಾಡಿದ್ದು, ಇವರು ಮೂರು ಹೆಸರುಗಳನ್ನು ಶಿಫಾರಸ್ಸು ಮಾಡಿ ನಂತರ ಒಂದು ಹೆಸರನ್ನು ಅಂತಿಮ ಹೆಸರನ್ನು ರಾಜ್ಯಪಾಲರಿಗೆ ರನೃವಾನಿಸಬೇಕು. ಇವರು ಸಚಿವರಾದ ನಂತರ ಎಲ್ಲ ಕುಲಸಚಿವರ ಹುದ್ದೆಗಳನ್ನು ವ್ಯಾಪಾರಕ್ಕೆ ಇಟ್ಟಿದ್ದಾರೆ.

ಇದು ಸಾಮಾನ್ಯ ಜನ ಬೀದಿಯಲ್ಲಿ ನಿಂತು ಮಾತನಾಡುತ್ತಿರುವ ವಿಚಾರ. ಈ ಪರಿಸ್ಥಿತಿ ತಂದ ಕೀರ್ತಿ ಸಚಿವರದ್ದಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಅಶೋಕ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಇವರು ದಾಖಲೆ ಕೇಳುತ್ತಾರೆ. ಈ ಪ್ರಕರಣವನ್ನು ತನಿಖೆಗೆ ಒಳಪಡಿಸಿ ಅಶೋಕ್ ಕುಮಾರ್ ಅವರ ಖಾತೆಯಿಂದ ಯಾರಿಗೆ ಹಣ ಹೋಗಿದೆ ಎಂದು ನೋಡಿದರೆ ಸಚಿವರ ಕಚೇರಿಯಲ್ಲಿ ಕೆಲಸ ಮಾಡುವ ಎಲ್ಲರೂ ಹೆಸರು ಬಹಿರಂಗವಾಗುತ್ತದೆ. ಸಚಿವರ ಆಪ್ತಸಹಾಯಕರ ಖಾತೆಗೆ ದೊಡ್ಡ ಮಟ್ಟದಲ್ಲಿ ಹಣ ಸಂದಾಯವಾಗಿದೆ.  ನ್ಯಾಯಾಂಗ ತನಿಖೆ ಹೊರತಾಗಿ ಸತ್ಯಾಂಶ ಹೊರಬರುವುದಿಲ್ಲ ಎಂದು ಆರೋಪಿಸಿದ್ದಾರೆ.

ಹೀಗಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು, ನಂತರ ಅಶ್ವತ್ಥ್ ನಾರಾಯಣ ಅವರು ಸಚಿವರಾದ ನಂತರ ಎಲ್ಲೆಲ್ಲಿ ಕುಲಪತಿಗಳ ನೇಮಕವಾಗಿದೆ ಎಲ್ಲ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ.

ಕಿಯೋನಿಕ್ಸ್ ನಿಗಮ ಅಸ್ವತ್ಥ್ ನಾರಾಯಣ್ ಅವರ ವ್ಯಾಪ್ತಿಗೆ ಬರುತ್ತಿದ್ದು, ಇದರ ಉಪಯೋಗ ಮಾಡಿಕೊಂಡು ಖಾಗಿಯವರಿಗೆ ಗುತ್ತಿಗೆ ಕೊಡಿಸುವ ಕೆಲಸವಾಗುತ್ತಿದೆ. ಹೀಗಾಗಿ ಇವರು ಸಚಿವರಾದ ನಂತರ ಕಿಯೋನಿಕ್ಸ್ ನಲ್ಲಿ ನೀಡಲಾಗಿರುವ ಎಲ್ಲ ಗುತ್ತಿಗೆಗಳನ್ನು ತನಿಖೆಗೆಗೆ ಒಳಪಡಿಸಬೇಕಿದೆ. ಕಿಯೋನಿಕ್ಸ್ ನಲ್ಲಿ ನೇರ ಸಿಬ್ಬಂದಿಗಳು 45 ಮಾತ್ರ. ಆದರೆ ಒಂದು ಸಾವಿರ ರೂ.ಗಿಂತ ಮೇಲ್ಪಟ್ಟ ಗುತ್ತಿಗೆಗಳನ್ನು ಪಡೆದು ಖಾಸಗಿಯವರಿಗೆ ಹೊರಗುತ್ತಿಗೆ ನೀಡಲಾಗುತ್ತಿದೆ. ಈ ಎಲ್ಲ ಅವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು.

2019-20ನೇಸಾಲಿನಲ್ಲಿ ಪದವಿ ಕಾಲೋಜುಗಳಲ್ಲಿ 1,09,916 ಲ್ಯಾಪ್ ಟಾಪ್ ವಿತರಿಸಿದ್ದು, ನಂತರ 2020-21ನೇ ಸಾಲಿನಲ್ಲಿ 1,55,000 ಟ್ಯಾಬ್ಲೆಟ್ ವಿತರಿಸಿದ್ದು, ಇದರಲ್ಲೂ ಸಾಕಷ್ಟು ಅಕ್ರಮಗಳು ನಡೆದಿವೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಬಸವರಾಜ ರಾಯರೆಡ್ಡಿ ಅವರು ಉನ್ನತಶಿಕ್ಷಣ ಸಚಿವರಾಗಿದ್ದಾಗ ಬಿಜೆಪಿಯ ಮಿತ್ರರು ವಿಧಾನ ಪರಿಷತ್ ನಲ್ಲಿ ಚರ್ಚೆ ಮಾಡಿ ಲ್ಯಾಪ್ ಟಾಪ್ ದರದಲ್ಲಿ ವ್ಯಾತ್ಯಾಸ ಇದ್ದು ತನಿಖೆ ಮಾಡಬೇಕು ಎಂದರು. ಆದರೆ ಇಂದು ಇವರು ವಿತರಿಸಿರುವ ಲ್ಯಾಪ್ ಟಾಪ್ ಹಾಗೂ ಟ್ಯಾಬ್ಲೆಟ್ ಖರೀದಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ.

ಹೀಗೆ ಅಶ್ವತ್ಥ್ ನಾರಾಯಣ ಅವರು ಉನ್ನತಶಿಕ್ಷಣ ಇಲಾಖೆ ಸಚಿವರಾದ ನಂತರ ಹಲವು ಹಂತಗಳಲ್ಲಿ ಅವ್ಯವಹಾರ ಮಾಡಿ ಇಡೀ ಉನ್ನತ ಶಿಕ್,ಣ ಇಲಾಖೆಯನ್ನು ಕಲುಷಿತ ಮಾಡಿದ್ದಾರೆ. ಈ ಎಳ್ಲ ವಿಚಾರವಾಗಿ ತನಿಖೆ ಮಾಡಬೇಕು ಎಂದು ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.

Tags: BJPCongress PartyCovid 19ನರೇಂದ್ರ ಮೋದಿನ್ಯಾಯಾಂಗ ತನಿಖೆಪರೀಕ್ಷಾ ಅಕ್ರಮಬಿಜೆಪಿರಮೇಶ್ ಬಾಬುಸಹಾಯಕ ಪ್ರಾಧ್ಯಾಪಕ
Previous Post

ಗೋಧಿ ಬೆಲೆ ಹೆಚ್ಚಳ:  ಬ್ರೆಡ್‌, ಬಿಸ್ಕತ್ ಸೇರಿ ಬೇಕರಿ ತಿಂಡಿಗಳು ದುಬಾರಿ!

Next Post

ಗೃಹ ಸಚಿವ ಅಮಿತ್ ಶಾ ಬೇಟಿಗೂ ಮುನ್ನ ಶರಣಾದ ನಕ್ಸಲರು

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post
ಗೃಹ ಸಚಿವ ಅಮಿತ್ ಶಾ ಬೇಟಿಗೂ ಮುನ್ನ ಶರಣಾದ ನಕ್ಸಲರು

ಗೃಹ ಸಚಿವ ಅಮಿತ್ ಶಾ ಬೇಟಿಗೂ ಮುನ್ನ ಶರಣಾದ ನಕ್ಸಲರು

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada