ಅತ್ಯಂತ ಜನಪ್ರಿಯ ಐಪಿಎಲ್ ಟೂರ್ನಿ ಇದೇ ಮೊದಲ ಬಾರಿ ವೀಕ್ಷಕರ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡಿದ್ದು, ಪ್ರಾಯೋಜಕತ್ವದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ಹೌದು, ಐಪಿಎಲ್ ಟೂರ್ನಿಯ ಜನಪ್ರಿಯತೆಯಿಂದ ಹಿಗ್ಗಿದ ಬಿಸಿಸಿಐ 8 ತಂಡಗಳಿದ್ದ ಟೂರ್ನಿಯನ್ನು 10 ತಂಡಗಳಿಗೆ ಹೆಚ್ಚಿಸಿದೆ. ಅಲ್ಲದೇ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಖಾಲಿ ಮೈದಾನದಲ್ಲಿ ಪಂದ್ಯಗಳು ನಡೆಯುತ್ತಿವೆ. ಆದರೂ ಟೀವಿ ವೀಕ್ಷಕರ ಸಂಖ್ಯೆ ಕುಸಿದಿರುವುದು ಅಚ್ಚರಿ ಮೂಡಿಸಿದೆ.

ಈ ಬಾರಿ ಐಪಿಎಲ್ ಟೀವಿ ವೀಕ್ಷಕರ ಸಂಖ್ಯೆ ಶೇ.30ರಿಂದ 40ರಷ್ಟು ಕುಸಿದಿದೆ. ವೀಕ್ಷಕರು ಮೈದಾನಕ್ಕೆ ಬರದೇ ಇರುವ ಸ್ಥಿತಿಯಲ್ಲಿ ಟಿವಿ ವೀಕ್ಷಕರ ಸಂಖ್ಯೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ವಿಶ್ವಾಸ ಹುಸಿಯಾಗಿದ್ದು, ಅಚ್ಚರಿ ಮೂಡಿಸಿದೆ.






