ದಕ್ಷಿಣ ದೆಹಲಿ (South Delhi) ಮುನ್ಸಿಪಲ್ ಕಾರ್ಪೊರೇಷನ್ (SDMC) ಇಂದಿನಿಂದ ಮೇ 4 ರಿಂದ ಮೊದಲ ಹಂತದ ನೆಲಸಮ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಅತಿಕ್ರಮಣ ವಿರೋಧಿ ಅಭಿಯಾನವು ಮೇ 13 ರವರೆಗೆ ಮುಂದುವರಿಯುತ್ತದೆ ಎಂದು ಪಾಲಿಕೆಯ ಸ್ಥಾಯಿ ಸಮಿತಿಯ ಉಪಾಧ್ಯಕ್ಷ ರಾಜಪಾಲ್ ಸಿಂಗ್ ಬುಧವಾರ ತಿಳಿಸಿದ್ದಾರೆ. .
ತುಘಲಕಾಬಾದ್ನ ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ಪ್ರದೇಶದಲ್ಲಿ ನಾಗರಿಕ ಸಂಸ್ಥೆ ಬುಧವಾರ ಅತಿಕ್ರಮಣ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದೆ.
ಕಳೆದ ವಾರವೇ, ನಾಗರಿಕ ಸಂಸ್ಥೆಯು ಓಖ್ಲಾದಲ್ಲಿ ಕಾರ್ಯಾಚರಣೆ ನಡೆಸಲು ಪ್ರಯತ್ನಿಸಿತು ಆದರೆ ದೆಹಲಿ ಪೊಲೀಸರು ಸಹಾಯಕ್ಕೆ ಮತ್ತು ರಕ್ಷಣೆಗಾಗಿ ಪೊಲೀಸ್ ಸಿಬ್ಬಂದಿಯನ್ನು ಒದಗಿಸಲು ನಿರಾಕರಿಸಿದ್ದರಿಂದ ನೆಲಸಮ ಕಾರ್ಯಚರಣೆ ಅಲ್ಲಿಗೆ ನಿಂತು ಹೋಗಿತ್ತು. ರಂಜಾನ್ ತಿಂಗಳಲ್ಲಿ ಪರಿಸ್ಥಿತಿ “ಅತ್ಯಂತ ಸೂಕ್ಷ್ಮ”ವಾಗಿರುತತದೆ ಯಾವುದೇ ಕ್ರಮವು “ದೊಡ್ಡ ಕಾನೂನು-ಸುವ್ಯವಸ್ಥೆ ಸಮಸ್ಯೆ”ಗೆ ಕಾರಣವಾಗಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಓಖ್ಲಾ, ಮದನ್ಪುರ್ ಖಾದರ್, ಸರಿತಾ ವಿಹಾರ್, ಜೈತ್ಪುರ, ಲಜಪತ್ ನಗರ್, ಬದರ್ಪುರ, ಗ್ರೇಟರ್ ಕೈಲಾಶ್, ದ್ವಾರಕಾ ವಸಂತ್ ಕುಂಜ್, ವಿಕಾಸ್ ಪುರಿ, ಶಾಹೀನ್ ಬಾಗ್ ಇತ್ಯಾದಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಸರ್ಕಾರಿ ಜಮೀನುಗಳು, ರಸ್ತೆಗಳು ಮತ್ತು ಫುಟ್ಪಾತ್ಗಳ ಅತಿಕ್ರಮಣವನ್ನು ತೆಗೆದುಹಾಕಲು “ಒಂದು ತಿಂಗಳ ಅವಧಿಯ”ನೀಡಿ ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಎಸ್ಡಿಎಂಸಿ ಮೇಯರ್ ಹೇಳಿದರು..
ಕಳೆದ ತಿಂಗಳು, ಏಪ್ರಿಲ್ 16 ರಂದು ಎರಡು ಸಮುದಾಯಗಳ ನಡುವೆ ಹಿಂಸಾಚಾರಕ್ಕೆ ಸಾಕ್ಷಿಯಾದ ಜಹಾಂಗೀರ್ಪುರಿ ಪ್ರದೇಶದಲ್ಲಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಡೆಸಿದ ಅತಿಕ್ರಮಣ ವಿರೋಧಿ ಅಭಿಯಾನವು ವ್ಯಾಪಕ ಟೀಕೆಗೆ ಗುರಿಯಾಯಿತು. ಅಲ್ಲಿನ ಕ್ರಮವನ್ನು ನಿಲ್ಲಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಯಿತು.