ದೇಶದಲ್ಲಿ ದಿನದಿಂದ ದಿನಕ್ಕೆ ಬಸಿಲಿನ ಆರ್ಭಟ ಜಾಸ್ತಿಯಾಗುತ್ತಿದ್ದು ಈ ಮಧ್ಯೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ವಲ್ಪ ಜಾಸ್ತಿ ಎಂದೇ ಹೇಳಬಹುದು. ದೆಹಲಿಯಲ್ಲಿ ಇಂದು ತಾಪಮಾನ ಗರಿಷ್ಠ ಮಟ್ಟವನ್ನು ತಲುಪತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿಯಲ್ಲಿ ತಾಪಮಾನ 44ಡಿಗ್ರಿಗೆ ಏರಿಕೆಯಾಗಬಹುದು ಎಂದು ವರದಿಯಾಗಿದೆ. ಇದು ಈ ಹಿಂದೆಗಿಂತ ಎರಡರಷ್ಟು ಜಾಸ್ತಿಯಾಗಿದೆ ಎಂದು ಇಲಾಖೆ ತಿಳಿಸಿದೆ.
ಉತ್ತರ ಭಾರತದ ಹಲವೆಡೆ ಬಿಸಿಲಿನ ಆರ್ಭಟ ಹಾಗೂ ಬಿಸಿ ಗಾಳಿಯ ಹೊಡೆತ ಜೋರಾಗಿದ್ದು ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.













