ಸ್ಪಿನ್ನರ್ ಕುಲದೀಪ್ ಯಾದವ್ ಮಾರಕ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ವಿಕೆಟ್ ಗಳಿಂದ ಐಪಿಎಲ್ ಟಿ-20 ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವನ್ನು 9 ವಿಕೆಟ್ ಗೆ 146 ರನ್ ಗಳಿಗೆ ನಿಯಂತ್ರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಂದು ಓವರ್ ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು ಸುಲಭ ಜಯ ದಾಖಲಿಸಿತು.
ಮಧ್ಯಮ ವೇಗಿ ಉಮೇಶ್ ಯಾದವ್ (3 ವಿಕೆಟ್) ದಾಳಿ ನಡುವೆಯೂ ಡೆಲ್ಲಿ ತಂಡದ ಪರ ಡೇವಿಡ್ ವಾರ್ನರ್ (42 ರನ್, 26 ಎಸೆತ, 8 ಬೌಂಡರಿ), ಲಲಿತ್ ಯಾದವ್ (22), ರೋವ್ ಮನ್ ಪೊವೆಲ್ (ಅಜೇಯ 33 ರನ್, 16 ಎಸೆತ, 1 ಬೌಂಡರಿ, 3 ಸಿಕ್ಸರ್), ಅಕ್ಸರ್ ಪಟೇಲ್ (24) ತಂಡದ ಗೆಲುವಿಗೆ ಉತ್ತಮ ಕಾಣಿಕೆ ನೀಡಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕೆಕೆಆರ್ ಸ್ಪಿನ್ನರ್ ಕುಲದೀಪ್ ಯಾದವ್ (4) ಮತ್ತು ಮುಷ್ಫಿಕರ್ ರಹೀಂ (3) ಮಾರಕ ದಾಳಿಗೆ ತತ್ತರಿಸಿದ ಸಾಧಾರಣ ಮೊತ್ತಕ್ಕೆ ಕುಸಿಯಿತು.
ನಿತಿನ್ ರಾಣಾ 34 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ತಂಡವನ್ನು ಆಧರಿಸಿದರು. ನಾಯಕ ಶ‍್ರೇಯಸ್ ಅಯ್ಯರ್ (42) ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು.