• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಉದ್ಯೋಗ ಸಿಗದೆ ಬೇಸತ್ತ 40 ಕೋಟಿಗೂ ಅಧಿಕ ಭಾರತೀಯರು : ಸವೀಕ್ಷೆ ಬಿಚ್ಚಿಟ್ಟ ಮೋದಿ ಸರ್ಕಾರದ ದುರಾಡಳಿತ!

ಪ್ರತಿಧ್ವನಿ by ಪ್ರತಿಧ್ವನಿ
April 26, 2022
in ದೇಶ
0
ಉದ್ಯೋಗ ಸಿಗದೆ ಬೇಸತ್ತ 40 ಕೋಟಿಗೂ ಅಧಿಕ ಭಾರತೀಯರು : ಸವೀಕ್ಷೆ ಬಿಚ್ಚಿಟ್ಟ ಮೋದಿ ಸರ್ಕಾರದ ದುರಾಡಳಿತ!
Share on WhatsAppShare on FacebookShare on Telegram

ದುಡಿಯುವ ಸಾಮರ್ಥ್ಯ ಇರುವ 90 ಕೋಟಿ ಭಾರತೀಯರಲ್ಲಿ ಅರ್ಧದಷ್ಟು ಮಂದಿ ಉದ್ಯೋಗ ಹುಡುಕುವುದನ್ನು ನಿಲ್ಲಿಸಿದ್ದಾರೆ ಎಂದು ಮುಂಬೈನ ಖಾಸಗಿ ಸಂಶೋಧನಾ ಸಂಸ್ಥೆಯಾದ ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈವೇಟ್‌’ ತನ್ನ ಹೊಸ ವರದಿಯಲ್ಲಿ ತಿಳಿಸಿದೆ.

ADVERTISEMENT

ಭಾರತದ ಒಟ್ಟು 1.3 ಶತಕೋಟಿ ಜನಸಂಖ್ಯೆಯಲ್ಲಿ, 90 ಮಿಲಿಯನ್ ಜನರು ಕಾನೂನಿನ ಪ್ರಕಾರ ವಯಸ್ಕರಾಗಿದ್ದು ಕೆಲಸ ಮಾಡುವ ಸಾಮರ್ಥ್ಯ ಉಳ್ಳವರು.  ಅಂದರೆ ಒಟ್ಟು ಜನಸಂಖ್ಯೆಯ 40-50% . ಆದರೆ ಈ 90 ಕೋಟಿ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಪ್ರಸ್ತುತ ಉದ್ಯೋಗ ಹುಡುಕಲು ಆಸಕ್ತಿ ಹೊಂದಿಲ್ಲ ಎಂದು ವರದಿಯಾಗಿದೆ.  ಈ ಸಂಖ್ಯೆಯು ಯುನೈಟೆಡ್ ಸ್ಟೇಟ್ಸ್ ಮತ್ತು ರಷ್ಯಾದ ಜನಸಂಖ್ಯೆಗಿಂತ ಹೆಚ್ಚಾಗಿದೆ.  ಅಲ್ಲದೆ 2011-2016ರಲ್ಲಿ  46% ರಷ್ಟಿದ್ದ ಒಟ್ಟು ಉದ್ಯೋಗಿಗಳ ಸಂಖ್ಯೆ ಈಗ 40% ಕ್ಕೆ ಇಳಿದಿದೆ ಎಂದೂ ವರದಿಯು ತಿಳಿಸಿದೆ.

ಜನರಿಗೆ ಸಮರ್ಪಕ, ಗುಣಮಟ್ಟದ ಉದ್ಯೋಗ ದೊರೆಯದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ವರದಿಯು ಹೇಳಿದೆ.  ಇದು ಭಾರತ ಮಾತ್ರವಲ್ಲದೆ ವಿಶ್ವ ಆರ್ಥಿಕತೆಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಇಷ್ಟು ಮಾತ್ರವಲ್ಲದೆ ಭಾರತವು ಕಡಿಮೆ ಮಹಿಳಾ ಭಾಗವಹಿಸುವಿಕೆಯ ಪ್ರಮಾಣವನ್ನು ಹೊಂದಿರುವ ದೇಶವಾಗಿದೆ.  ಮಹಿಳೆಯರ ಉದ್ಯೋಗದ ಪ್ರಮಾಣವು 2004-05 ರಲ್ಲಿ 28% ರಷ್ಟಿದ್ದರೆ 2011-12 ರಲ್ಲಿ 21.7% ಕ್ಕೆ ಇಳಿದಿತ್ತು.  ಪ್ರಸ್ತುತ ಈ ಅನುಪಾತ ಕೇವಲ 19%.  ಇದು ನೆರೆಯ ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕಿಂತಲೂ ಕಡಿಮೆ.  ಈ ಕುಸಿವಿಕೆಗೆ ಗುಣಮಟ್ಟದ ಕೆಲಸ, ವೇತನದ ಅಂತರ, ಭದ್ರತೆ ಹೀಗೆ ನಾನಾ ಕಾರಣಗಳಿವೆ ಎಂದು ಹೇಳಲಾಗಿದೆ.

ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆಯೊಂದಿಗೆ ಆಡಳಿತಕ್ಕೆ ಬಂದ ಮೋದಿಯವರು ವಾರ್ಷಿಕ ಜಿಡಿಪಿ ಬೆಳವಣಿಗೆ ಶೇಕಡಾ 8ರಿಂದ ಶೇಕಡಾ 8.5 ರಷ್ಟನ್ನು ಈಗ  ಸಾಧಿಸಲೇಬೇಕಾಗಿದೆ. ಅಗಾಧ ಯುವಶಕ್ತಿಯನ್ನು ಹೊಂದಿರುವ ಈ ದೇಶಕ್ಕೆ ಸಮರ್ಪಕ ಉದ್ಯೋಗ ನೀತಿಯೊಂದನ್ನು ರೂಪಿಸದಿದ್ದರೆ ಅತ್ಯಂತ ದೊಡ್ಡ ಪ್ರಮಾಣದ ಆರ್ಥಿಕ ಹೊಡೆತವನ್ನು ಎದುರಿಸಬೇಕಾಗಿಬರಬಹುದು. ನೋಟ್‌ಬ್ಯಾನ್, ಜಿಎಸ್ಟಿ, ಕೊರೋನಾ ಹಾವಳಿಯಿಂದ ಈಗಾಗಲೇ ಅಪಾರ ಆರ್ಥಿಕ ನಷ್ಟ, ಉದ್ಯೋಗ ನಷ್ಟ ಅನುಭವಿಸಿರುವ ಭಾರತ ಯುವಜನತೆ ಉದ್ಯೋಗದಿಂದಲೂ ವಿಮುಖವಾಗುವ ಪರಿಸ್ಥಿತಿ ತಂದಿಟ್ಟುಕೊಂಡರೆ ಶ್ರೀಲಂಕಾದ ಸ್ಥಿತಿ ಭಾರತದಲ್ಲೂ ಉಂಟಾಗಬಹುದು.

Tags: BJPCongress PartyCovid 19ಉದ್ಯೋಗನರೇಂದ್ರ ಮೋದಿಬಿಜೆಪಿಭಾರತೀಯರು
Previous Post

ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ಪಕ್ಷ ಸಂಘಟನೆ : ಮಾಜಿ ಸಿಎಂ ಜಗದೀಶ ಶೆಟ್ಟರ್

Next Post

ಗೃಹ ಸಚಿವರನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ AAP ನಿಯೋಗ

Related Posts

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..
Top Story

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

by ಪ್ರತಿಧ್ವನಿ
April 16, 2026
0

ನವದೆಹಲಿ :  ಕೇಂದ್ರ ಸರ್ಕಾರ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಲಾಗಿದೆ. ವಿಪಕ್ಷಗಳ ಗದ್ದಲ ಹಾಗೂ ಕೋಲಾಹಲದ ನಡುವೆಯೇ ಕೇಂದ್ರ ಸಚಿವ ಅರ್ಜುನ್‌...

Read moreDetails
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
Next Post
ಗೃಹ ಸಚಿವರನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ AAP ನಿಯೋಗ

ಗೃಹ ಸಚಿವರನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ AAP ನಿಯೋಗ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!