ಭಾರತದ ಪ್ರಜಾತಂತ್ರ ವ್ಯವಸ್ಥೆ ತನ್ನನ್ನು ಆವರಿಸಿದ್ದ ಔದಾರ್ಯ ಮತ್ತು ಸಂಯಮದ ಪೊರೆಯನ್ನು ಹಂತಹಂತವಾಗಿ ಕಳಚಿಕೊಳ್ಳುತ್ತಿದೆ. ಆಡಳಿತಾರೂಢ ಸರ್ಕಾರಗಳು ಸಾಂವಿಧಾನಿಕ ನೈತಿಕತೆಯ ಎಲ್ಲೆ ಮೀರಿ ತಮ್ಮದೇ ಆದ ಸೈದ್ಧಾಂತಿಕ ನೆಲೆಯಲ್ಲಿ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿರುವುದನ್ನು ಕಂಡೂ ಕಾಣದಂತಿರುವ ಈ ದೇಶದ ಸಮೂಹ ಪ್ರಜ್ಞೆ ಕ್ರಮೇಣ ನಿಷ್ಕ್ರಿಯವಾದಂತೆ ತೋರುತ್ತಿದೆ. ಯಾವುದೇ ದೇಶದಲ್ಲಾದರೂ ಪ್ರಜಾಪ್ರಭುತ್ವದ ಸ್ವಾಸ್ಥ್ಯವನ್ನು ಕಾಪಾಡಲು ಸಾರ್ವಜನಿಕ ಜಾಗೃತಿ ಮತ್ತು ಜಾಗೃತ ಪ್ರಜ್ಞೆ ಮುಖ್ಯವಾಗುತ್ತದೆ. ಈ ಪ್ರಜ್ಞೆಯನ್ನು ಸದಾ ಜೀವಂತಿಕೆಯಿಂದಿರಿಸುವ ಸಲುವಾಗಿಯೇ ನಾಗರಿಕ ಸಮಾಜದ ಹಲವು ಸಂಘಟನೆಗಳು, ಸಂಸ್ಥೆಗಳು ಭೌದ್ಧಿಕ ಮತ್ತು ಭೌತಿಕ ಚಟುವಟಿಕೆಗಳನ್ನು ರೂಪಿಸುತ್ತಿರುತ್ತವೆ. ನಾಗರಿಕ ಹಕ್ಕುಗಳ ರಕ್ಷಣೆ ಮತ್ತು ಆರೋಗ್ಯಕರ ಸಮಾಜದ ನಿರ್ವಹಣೆ ಮೂಲತಃ ಆಡಳಿತ ವ್ಯವಸ್ಥೆಯ ಕರ್ತವ್ಯವೇ ಆದರೂ, ಒಂದು ಜಾಗೃತ ಸಮಾಜ ಈ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಿರುವುದನ್ನು ಇತಿಹಾಸದ ವಿಭಿನ್ನ ಕಾಲಘಟ್ಟಗಳಲ್ಲಿ ಗಮನಿಸಬಹುದು.
ಬಹುಸಂಖ್ಯಾವಾದದ ದಾಳಿಯಿಂದ ದಿಕ್ಕುತಪ್ಪುತ್ತಿರುವ ಭಾರತದ ರಾಜಕಾರಣದಲ್ಲಿ ಇಂದು ಈ ಸಾಮಾಜಿಕ ಜಾಗೃತಿ ಹೆಚ್ಚು ಅವಶ್ಯಕವಾಗಿದೆ. This is true for Roulette players https://tpashop.com/online-casino-book-of-ra-echtgeld-ohne-einzahlung/ as well. ಭಾರತ ಹೀಗಿರಲಿಲ್ಲ. ಬಹುತೇಕ ಮೂರು ದಶಕಗಳ ಕಾಲ ಒಂದೇ ರಾಜಕೀಯ ಪಕ್ಷದ ಆಡಳಿತದಲ್ಲಿದ್ದರೂ, ಈ ಆಡಳಿತದ ಲೋಪಗಳನ್ನು, ತಪ್ಪು ನಡೆಗಳನ್ನು ಮತ್ತು ಸಂವಿಧಾನ ವಿರೋಧಿ ಆಡಳಿತ ನೀತಿಗಳನ್ನು ಖಂಡಿಸುವ ಪ್ರಬಲ ಧ್ವನಿಗಳು ಶಾಸನ ಸಭೆಗಳಲ್ಲಿ ಸದ್ದುಮಾಡುತ್ತಿದ್ದವು. ದೇಶದ ಯಾವುದೇ ಮೂಲೆಯಲ್ಲಿ ಒಂದು ಸಣ್ಣ ಪ್ರಮಾಣದ ಅನ್ಯಾಯ, ದೌರ್ಜನ್ಯ ಸಂಭವಿಸಿದರೂ, ಅಧಿಕಾರಾರೂಢ ಸರ್ಕಾರದ ಉಸ್ತುವಾರಿ ಹೊತ್ತಿರುವವರು ಕೂಡಲೇ ಸ್ಪಂದಿಸುತ್ತಿದ್ದರು. ಒಂದು ಸಣ್ಣ ರೈಲು ಅಪಘಾತವಾಗಲೀ, ಮಹಿಳೆಯ ಮೇಲಿನ ಅತ್ಯಾಚಾರವಾಗಲೀ, ಜಾತಿ ದೌರ್ಜನ್ಯ ಅಥವಾ ಅಸ್ಪೃಶ್ಯತೆಯ ಆಚರಣೆಯಾಗಲೀ, ರಾಜ್ಯ ಸರ್ಕಾರಗಳಷ್ಟೇ ಅಲ್ಲದೆ ಕೇಂದ್ರ ಸರ್ಕಾರವೂ ಸಹ ಕೂಡಲೇ ಪ್ರತಿಕ್ರಯಿಸುತ್ತಿತ್ತು. ಪ್ರಧಾನಮಂತ್ರಿಯಾಗಲೀ, ಕೇಂದ್ರ ಗೃಹ ಸಚಿವರಾಗಲೀ ಇಂತಹ ಘಟನೆಗಳಿಗೆ ಕನಿಷ್ಠ ವಿಷಾದವನ್ನಾದರೂ ವ್ಯಕ್ತಪಡಿಸುವುದು ವಾಡಿಕೆಯಾಗಿತ್ತು. Read https://tpashop.com/where-is-seminole-hard-rock-casino/ all the information available on our site, including the terms and conditions. ಅಷ್ಟೇ ಅಲ್ಲದೆ ಇಂತಹ ಯಾವುದೇ ಘಟನೆಗಳು ಸಂಭವಿಸಿದರೂ ಕೂಡಲೇ ಕ್ರಮ ಜರುಗಿಸಿ, ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿತ್ತು. ರಾಜಕೀಯ ವಲಯದಲ್ಲಿ ಕೇಳಿಬರುವ ಭ್ರಷ್ಟಾಚಾರದ ಹಗರಣಗಳಲ್ಲಿ ಆರೋಪಿ ಶಾಸಕರ, ಸಂಸದರ, ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಲಾಗುತ್ತಿತ್ತು.
ಹಾಗೆಯೇ ದೇಶದ ಯಾವುದೇ ಮೂಲೆಯಲ್ಲಿ ಅವಕಾಶವಂಚಿತ ಜನಸಮುದಾಯಗಳು ತಮ್ಮ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸಿದರೆ, ಧರಣಿ ಮುಷ್ಕರದಲ್ಲಿ ತೊಡಗಿದರೆ, ಕೇಂದ್ರ ಸರ್ಕಾರಗಳು ಪರಿಹಾರೋಪಾಯ ಮಾರ್ಗಗಳನ್ನು ಸೂಚಿಸುವುದೇ ಅಲ್ಲದೆ, ತನ್ನದೇ ಆದ ನಿಯೋಗಗಳನ್ನು ಕಳುಹಿಸುವ ಮೂಲಕ ಕಾರ್ಮಿಕರ, ರೈತರ, ಮಹಿಳೆಯರ ಅಥವಾ ಮುಷ್ಕರನಿರತ ಯಾವುದೇ ಜನಸಮುದಾಯಗಳ ಆಗ್ರಹಗಳಿಗೆ ಕಿವಿಗೊಡುವುದು ಸಾಮಾನ್ಯವಾಗಿತ್ತು. ಭಾರತದಂತಹ ಬೃಹತ್ ದೇಶದಲ್ಲಿ ಆಡಳಿತ ವ್ಯವಸ್ಥೆ ಜನದನಿಗೆ ಕಿವಿಯಾಗಿ, ಜನಸಾಮಾನ್ಯರತ್ತ ಕಣ್ತೆರೆದು, ಸದಾ ಎಚ್ಚರದಿಂದಿರಬೇಕಾದ ನೈತಿಕ ಕರ್ತವ್ಯವನ್ನು ಕೇಂದ್ರ ಸರ್ಕಾರಗಳು ನಿರ್ವಹಿಸುತ್ತಿದ್ದವು. ಜನಸಮುದಾಯಗಳ ಅಥವಾ ಜನಸಮೂಹಗಳ ಆಗ್ರಹಗಳನ್ನು ಕಿವಿದೆರೆದು ಆಲಿಸುವ ಮತ್ತು ಜನರ ಸಂಕಷ್ಟಗಳನ್ನು ಕಣ್ತೆರೆದು ನೋಡುವ ವ್ಯವಧಾನ ಈ ರಾಜಕೀಯ ಪರಂಪರೆಯಲ್ಲಿ ಹಾಸುಹೊಕ್ಕಾಗಿತ್ತು. ದಮನಕಾರಿ ಕಾನೂನುಗಳ ಹೊರತಾಗಿಯೂ, ಆಳುವವರ ದರ್ಪ, ದಬ್ಬಾಳಿಕೆಯ ಹೊರತಾಗಿಯೂ , ಮಾನವೀಯ ಸ್ಪಂದನೆಯ ಒಂದು ಸಣ್ಣ ಎಳೆಯನ್ನು ಈ ಪ್ರಕ್ರಿಯೆಯಲ್ಲಿ ಕಾಣಬಹುದಿತ್ತು.
ನವಭಾರತ ಈ ಪರಂಪರೆಯಿಂದ ಬಹುದೂರ ಸಾಗಿದೆ. ದೇಶಾದ್ಯಂತ ಎಲ್ಲ ವಲಯಗಳಲ್ಲೂ ಕಾರ್ಮಿಕರು, ರೈತರು, ಮಹಿಳೆಯರು, ಕೂಲಿಕಾರರು, ಕೃಷಿ ಕಾರ್ಮಿಕರು ತಮ್ಮ ಬೇಡಿಕೆಗಳಿಗಾಗಿ ದಿನಗಟ್ಟಳೆ, ಮಾಸಗಟ್ಟಳೆ ಮುಷ್ಕರ ನಡೆಸಿದರೂ, ಅತ್ತ ತಿರುಗಿಯೂ ನೋಡದಂತಹ ಒಂದು ಆಡಳಿತ ವ್ಯವಸ್ಥೆಗೆ ಇಂದಿನ ಭಾರತ ಸಾಕ್ಷಿಯಾಗುತ್ತಿದೆ. ದೆಹಲಿಯ ಗಡಿಗಳಲ್ಲಿ ಒಂದು ವರ್ಷದ ಕಾಲ ನಡೆದ ರೈತ ಮುಷ್ಕರದತ್ತ ಒಮ್ಮೆಯೂ ಕಣ್ಣುಹಾಯಿಸದ ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವರು, ಈ ಹೊಸ ಪರಂಪರೆಯನ್ನು ಅಧಿಕೃತವಾಗಿಯೇ ದೃಢೀಕರಿಸಿದ್ದಾರೆ. ಈ ಪರಂಪರೆಯೇ ಎಲ್ಲ ರಾಜ್ಯ ಸರ್ಕಾರಗಳಿಗೂ ಹೊಸ ಮಾದರಿಯಾಗಿ ಪರಿಣಮಿಸಿದೆ. If you want to a casino that offers fair chances, more than different games, tons of bonuses and jackpots as well as great game graphics and sounds, then our casino is surely https://parkirpintar.com/can-you-make-money-playing-video-poker/ the one that suits your needs. ಜಾತಿ ಮತಗಳ ಅಸ್ಮಿತೆಗಳಿಗೆ ಕಟ್ಟುಬಿದ್ದು ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನೂ ಮರೆತಿರುವ ಬಹುಪಾಲು ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲೇ ನಡೆಯುವ ಹೋರಾಟಗಳತ್ತ ತಿರುಗಿಯೂ ನೋಡದಷ್ಟು ಅಸೂಕ್ಷ್ಮತೆಯನ್ನು ಬೆಳೆಸಿಕೊಂಡಿದ್ದಾರೆ. ಪ್ರತಿಭಟನಾ ನಿರತ ಜನಸಮೂಹವನ್ನು, ಶತ್ರು ಪಾಳಯದಂತೆ ಕಾಣುವ ಒಂದು ಮನಸ್ಥಿತಿ ಇಂದಿನ ಜನಪ್ರತಿನಿಧಿಗಳಲ್ಲಿ ಮನೆಮಾಡಿದೆ. ತಮ್ಮ ಜಾತಿ ಮತ್ತು ಮತಧರ್ಮಗಳ ಹಿತಾಸಕ್ತಿಗಳನ್ನೇ ಪ್ರಧಾನವಾಗಿ ಕಾಣುವ ಜನಪ್ರತಿನಿಧಿಗಳು, ಸರ್ಕಾರದ ವಿರುದ್ಧ ನಡೆಯುವ ಯಾವುದೇ ಜನಾಂದೋಲನ ಅಥವಾ ಹೋರಾಟವನ್ನು, ವಿರೋಧಿ ನೆಲೆಯಲ್ಲೇ ನೋಡುವ ಮೂಲಕ ಸಂಪೂರ್ಣವಾಗಿ ನಿರ್ಲಕ್ಷಿಸುವುದನ್ನು ಗಮನಿಸುತ್ತಲೇ ಇದ್ದೇವೆ.

ಈ ಬೆಳವಣಿಗೆಗಳಿಗೆ ಪೂರಕವಾಗಿ ಸಾರ್ವಜನಿಕ ಅಭಿಪ್ರಾಯ ರೂಪಿಸಬೇಕಾದ ಬೌದ್ಧಿಕ ವಲಯಗಳು ಆಡಳಿತ ವ್ಯವಸ್ಥೆಯೊಡನೆ ರಾಜಿ ಮಾಡಿಕೊಳ್ಳುವ ಮೂಲಕ ಅಥವಾ ಯಾವುದೋ ಒಂದು ಯೋಜನೆಯ ಫಲಾನುಭವಿಗಳಾಗುವ ಮೂಲಕ ತಮ್ಮ ಮೂಲ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಸರ್ಕಾರಿ ನೌಕರರು, ಶೈಕ್ಷಣಿಕ ವಲಯದ ಬೌದ್ಧಿಕ ಚಿಂತಕರು, ಸರ್ಕಾರದ ವಿರುದ್ಧ ಅಥವಾ ಆಡಳಿತ ವ್ಯವಸ್ಥೆಯ ಲೋಪದೋಷಗಳ ವಿರುದ್ಧ ಟೀಕೆ ವಿಮರ್ಶೆ ಮಾಡುವ ಸಾಂವಿಧಾನಿಕ ಹಕ್ಕುಗಲನ್ನು ಕೆಲವು ಸರ್ಕಾರಗಳು ಅಧಿಕೃತವಾಗಿಯೇ ಕಸಿದುಕೊಂಡಿವೆ. ತಮ್ಮ ವೃತ್ತಿಜೀವನದ ಮೆಟ್ಟಿಲುಗಳನ್ನೇರುವುದನ್ನೇ ಧ್ಯೇಯವಾಗಿರಿಸಿಕೊಂಡಿರುವ ಬೌದ್ಧಿಕ ವಲಯದ ಜ್ಞಾನಿಗಳು ಅನೇಕ ಸಂದರ್ಭಗಳಲ್ಲಿ ಕಣ್ಣೆದುರಿನ ಅನ್ಯಾಯಗಳಿಗೂ ಕುರುಡಾಗಿರುವುದನ್ನು ಕಾಣುತ್ತಿದ್ದೇವೆ. ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ಕುಟುಂಬ ಸದಸ್ಯರ ಮೇಲೂ ಸಹ ನಿರ್ಬಂಧಗಳನ್ನು ಹೇರಿದ್ದು, ಆಡಳಿತ ವ್ಯವಸ್ಥೆಯ ಲೋಪಗಳ ವಿರುದ್ಧ ದನಿಎತ್ತದಂತೆ ಮಾಡಿದೆ. ಸಂವಿಧಾನಬದ್ಧತೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳನ್ನು ವರ್ಗಾವಣೆಯ ಅಸ್ತ್ರದ ಮೂಲಕ ನಿಯಂತ್ರಿಸುವ ಕೌಶಲ್ಯವನ್ನು ಎಲ್ಲ ಸರ್ಕಾರಗಳೂ ರೂಢಿಸಿಕೊಂಡಿವೆ. ಇಲ್ಲಿಯೂ ಸಹ ಜನಪ್ರತಿನಿಧಿಗಳು ತಮ್ಮ ನೈತಿಕ ಎಲ್ಲೆಗಳನ್ನು ಮೀರಿ ಸ್ವಜನಪಕ್ಷಪಾತ ಮತ್ತು ಸ್ವಹಿತಾಸಕ್ತಿಯ ರಾಜಕಾರಣವನ್ನು ಎಗ್ಗಿಲ್ಲದೆ ನಡೆಸುತ್ತಲೇ ಇದ್ದಾರೆ. 1970-90ರ ಅವಧಿಯ ಬಾಲಿವುಡ್ ಮತ್ತು ಕನ್ನಡ ಸಿನಿಮಾಗಳಲ್ಲಿ ತೋರಿಸುತ್ತಿದ್ದ ರಾಜಕೀಯ ವಲಯದ, ಆಡಳಿತ ವ್ಯವಸ್ಥೆಯ ವಿಕೃತ ಮುಖಗಳು ಆ ಸಂದರ್ಭದಲ್ಲಿ ಅತಿರೇಕ ಎನಿಸುತ್ತಿದ್ದರೂ ಇಂದಿನ ಪರಿಸ್ಥಿತಿಯಲ್ಲಿ ವಾಸ್ತವ ಎನಿಸುವಂತಿದೆ.
ಇವೆಲ್ಲವನ್ನೂ ಗಮನಿಸುತ್ತಿರುವ ಬೃಹತ್ ಯುವ ಸಮುದಾಯ ಕೆಲವು ವಾಸ್ತವಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಸಾಮಾಜಿಕ-ಅರ್ಥಿಕ ನ್ಯಾಯ ಮತ್ತು ಸಮಾನತೆಗಾಗಿ, ಬದುಕುವ ಹಕ್ಕುಗಳಿಗಾಗಿ, ಜೀವನ ಮತ್ತು ಜೀವನೋಪಾಯಕ್ಕಾಗಿ, ನಿತ್ಯ ಬದುಕಿನ ಮೂಲ ಸೌಕರ್ಯಗಳಿಗಾಗಿ ಕಳೆದ ಐದಾರು ದಶಕಗಳಲ್ಲಿ ನಡೆದ ನೂರಾರು ಜನಾಂದೋಲನಗಳ ಫಲವನ್ನು ಇವತ್ತಿನ ಯುವ ಪೀಳಿಗೆ ಅನುಭೋಗಿಸುತ್ತಿದೆ. ಮೀಸಲಾತಿ ಮತ್ತಿತರ ಸಾಂವಿಧಾನಿಕ ಸವಲತ್ತುಗಳನ್ನು ಹೊರತುಪಡಿಸಿ ನೋಡಿದರೂ, ಶಾಲಾ ಮಕ್ಕಳ ಬಿಸಿಯೂಟದಿಂದ ಶಿಕ್ಷಣದ ಹಕ್ಕು ಕಾಪಾಡುವ ಆರ್‌ಟಿಇ ನಿಯಮಗಳವರೆಗೆ, ಪ್ರಾಥಮಿಕ ಶಿಕ್ಷಣದ ಸೌಲಭ್ಯಗಳಿಂದ ಉನ್ನತ ವ್ಯಾಸಂಗದ ವಿದ್ಯಾರ್ಥಿವೇತನದವರೆಗೆ, ಈ ದೇಶದ ಕಾರ್ಮಿಕರು, ದಲಿತ ಹಿಂದುಳಿದ ವರ್ಗಗಳು, ಮಹಿಳೆಯರು ಇಂದು ಹಲವು ಸಾಂವಿಧಾನಿಕ ಸೌಲಭ್ಯಗಳನ್ನು, ಕಾನೂನು ರಕ್ಷಣೆಯನ್ನು ಪಡೆದಿದ್ದರೆ ಅದರ ಹಿಂದೆ ನೂರಾರು ಜನಾಂದೋಲನಗಳಿವೆ, ಸಾವಿರಾರು ಜನರ ಹೋರಾಟದ ಪರಿಶ್ರಮ, ತ್ಯಾಗ, ಬಲಿದಾನಗಳಿವೆ. ಇಂತಹ ಬಹುತೇಕ ಸೌಕರ್ಯ, ಸೌಲಭ್ಯ, ಸವಲತ್ತುಗಳನ್ನು ಸಾಮಾನ್ಯ ಜನರಿಗೆ, ಅವಕಾಶವಂಚಿತರಿಗೆ ತಲುಪಿಸುವ ನಿಟ್ಟಿನಲ್ಲಿ ಭಾರತದ ನ್ಯಾಯಾಂಗವೂ ಮಹತ್ತರ ಪಾತ್ರ ವಹಿಸಿದೆ. ಹಾಗೆಯೇ ಶಾಸನ ಸಭೆಗಳಲ್ಲಿ ಆಡಳಿತ ಪಕ್ಷದ ಮತ್ತು ವಿರೋಧ ಪಕ್ಷಗಳ ನಾಯಕರನೇಕರು ಮಂಡಿಸಿದ ಅಭಿಪ್ರಾಯ, ನಡೆಸಿದ ವಾದ, ಪ್ರತಿವಾದ, ಹೋರಾಟಗಳೂ ಸಹ ಇಲ್ಲಿ ಸ್ಮರಣೀಯವಾಗುತ್ತವೆ.
ಏಳು ದಶಕಗಳ ಸಮಕಾಲೀನ ಇತಿಹಾಸದಲ್ಲಿ ರಾಮಮಂದಿರ ವಿವಾದವನ್ನೂ ಸೇರಿದಂತೆ, ಭಾರತ ಸಾವಿರಾರು ಪ್ರತಿರೋಧದ ಹೋರಾಟಗಳಿಗೆ ಸಾಕ್ಷಿಯಾಗಿದೆ. ಈ ಹಾದಿಯಲ್ಲಿ ನೂರಾರು ದಂಗೆಗಳು, ಗಲಭೆಗಳು, ಹೊಡೆದಾಟಗಳು ನಡೆದಿವೆ. ಪ್ರತಿಯೊಂದು ಘಟನೆಯ ಸಂದರ್ಭದಲ್ಲೂ ಸಾರ್ವಜನಿಕ ಆಸ್ತಿಪಾಸ್ತಿಯ ನಷ್ಟವಾಗಿದೆ. 1989-93ರ ಅವಧಿಯಲ್ಲಿ ನಡೆದ ಕೋಮು ಸಂಘರ್ಷಗಳಲ್ಲಿ ಅಲ್ಪಸಂಖ್ಯಾತರು ಸಾಮೂಹಿಕವಾಗಿ ಊರುಗಳನ್ನು ತೊರೆದು, ಹೊರವಲಯಗಳಲ್ಲಿ ನೆಲೆಗೊಂಡಿರುವುದೂ ಇದೆ. ಈ ಕೋಮು ಗಲಭೆಗಳಲ್ಲಿ ಶಿಕ್ಷೆಗೊಳಗಾದವರು ದಾಳಿಗೊಳಗಾದವರೇ ಆಗಿರುವುದು ಸ್ವತಂತ್ರ ಭಾರತದ ದುರಂತ. ಜನಸಮೂಹಗಳಲ್ಲಿ ಮಡುಗಟ್ಟಿದ ಆಕ್ರೋಶ ಸ್ಫೋಟಿಸಿದಾಗ ಸಂಭವಿಸುವ ಕೋಮು ದಂಗೆ ಅಥವಾ ಮತ್ತಾವುದೇ ಗಲಭೆಗಳ ಸಂದರ್ಭದಲ್ಲಿ ಸಮೂಹ ಪ್ರಜ್ಞೆಯಲ್ಲಿ ವಿವೇಕ ಅಥವಾ ವಿವೇಚನೆ ಇರುವುದಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಸಮಯಸಾಧಕ ಶಕ್ತಿಗಳು ಇಂತಹ ಸಂದರ್ಭಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತವೆ. ಉದಾಹರಣೆಗೆ, ಆ ಸಂದರ್ಭದಲ್ಲಿ ಕೋಮು ಗಲಭೆಗಳಿಂದ ಅಲ್ಪಸಂಖ್ಯಾತರನ್ನು ಊರುಗಳ ಹೊರವಲಯಕ್ಕೆ ರವಾನಿಸಿದ ನಂತರ, ರಿಯಲ್ ಎಸ್ಟೇಟ್ ಉದ್ಯಮವೂ ಚೇತರಿಸಿಕೊಂಡು, ನಗರೀಕರಣಕ್ಕೆ ಪೂರಕವಾಗಿ ಬೆಳವಣಿಗೆ ಕಂಡುಬಂದಿತ್ತು. ಈ ಎಲ್ಲ ಸಂದರ್ಭಗಳಲ್ಲಿ ಹಾನಿಗೊಳಗಾದ ಸಾರ್ವಜನಿಕ ಆಸ್ತಿಪಾಸ್ತಿಯೇ ಕೆಲವು ನಿರ್ದಿಷ್ಟ ಗುಂಪುಗಳಿಗೆ, ಸಂಘಟನೆಗಳಿಗೆ ಲಾಭದಾಯಕವಾಗಿದ್ದು ಸಹ ಹೌದು. ಬಂಡವಾಳ ವ್ಯವಸ್ಥೆ ಸಾವಿನ ಮನೆಯಲ್ಲೂ ಲಾಭದ ಅಡಿಗಲ್ಲುಗಳನ್ನು ನೆಡಲು ಯತ್ನಿಸುತ್ತದೆ ಎನ್ನಲು ಇವೆಲ್ಲವೂ ನಿದರ್ಶನವಾಗಿ ಕಾಣುತ್ತದೆ.

1980-90ರಲ್ಲಿ ಭೀತಿ ಸೃಷ್ಟಿಸುವಂತಿದ್ದ ಸಾಂಸ್ಕೃತಿಕ ವಾತಾವರಣ 2022ರ ವೇಳೆಗೆ ವಾಸ್ತವ ಸನ್ನಿವೇಶವೇ ಆಗಿದೆ. ಬಹುತ್ವ ಭಾರತದ ಬುನಾದಿಯನ್ನೇ ಬುಡಮೇಲು ಮಾಡುವಂತಹ ವಿಕೃತ ರಾಜಕಾರಣವೇ ಇಂದು ಸಾರ್ವಜನಿಕ ಆಸ್ತಿಪಾಸ್ತಿಯ ರಕ್ಷಣೆಯ ಹೊಣೆಯನ್ನು ಸಾಮಾನ್ಯ ಜನರ ಮೇಲೆ ಹೊರಿಸುತ್ತಿದೆ. ಇದೇ ವೇಳೆ ವ್ಯಕ್ತಿ ಸ್ವಾತಂತ್ರ್ಯ , ಅಭಿವ್ಯಕ್ತಿ ಸ್ವಾತಂತ್ರ್ಯ , ಧಾರ್ಮಿಕ ಸ್ವಾತಂತ್ರ್ಯ , ಮಾಧ್ಯಮ ಸ್ವಾತಂತ್ರ್ಯ , ಪ್ರತಿರೋಧ ಮತ್ತು ಪ್ರತಿಭಟನೆಯ ಹಕ್ಕುಗಳು, ಕಾರ್ಮಿಕರ ಮುಷ್ಕರದ ಹಕ್ಕುಗಳು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಅಂತರರಾಷ್ಟ್ರೀಯ ಕಾನೂನುಗಳು ಅನ್ವಯವಾಗುವಂತಹ ಜನತೆಯ ನಾಗರಿಕ ಹಕ್ಕುಗಳು, 70 ವರ್ಷಗಳಲ್ಲಿ ಈ ದೇಶದ ತಳಸಮುದಾಯಗಳು ಮತ್ತು ಅವಕಾಶವಂಚಿತರು ಗಳಿಸಿರುವ ಈ ಅಮೂಲ್ಯ ಬೌದ್ಧಿಕ ಮತ್ತು ಭೌತಿಕ ಆಸ್ತಿಗಳು ಕ್ರಮೇಣ ಕರಗಿಹೋಗುತ್ತಿರುವುದೇ ಪ್ರಸ್ತುತ ಸಂದರ್ಭದ ಎಲ್ಲ ಪ್ರಕ್ಷುಬ್ಧತೆಗಳಿಗೂ ಕಾರಣವಾಗಿದೆ. ಬಡತನ, ನಿರುದ್ಯೋಗ, ಬೆಲೆಏರಿಕೆ, ಕೋಮು ದ್ವೇಷ, ಜಾತಿ ದೌರ್ಜನ್ಯಗಳ ದಾಳಿಗೊಳಗಾಗಿರುವ ಸಾಮಾನ್ಯ ಜನತೆಯಲ್ಲಿ ವ್ಯವಸ್ಥೆಯ ವಿರುದ್ಧ, ಪ್ರಭುತ್ವದ ವಿರುದ್ಧ ಆಕ್ರೋಶ ಇದ್ದರೆ ಅದು ಸಹಜ ವಿದ್ಯಮಾನವೇ ಆಗಿರುತ್ತದೆ. ಹಾಗಾಗಿಯೇ ತಮ್ಮ ಅಳಿದುಳಿದ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುವ ಯಾವುದೇ ಘಟನೆ ಸಂಭವಿಸಿದಾಗ, ಸಾಮಾನ್ಯ ಜನತೆಯೊಳಗಿನ ಈ ಆಕ್ರೋಶ ಸ್ಫೋಟಿಸುತ್ತದೆ. ಬದುಕುವ ಮಾರ್ಗಗಳನ್ನೇ ಕಸಿದುಕೊಳ್ಳುವಂತಹ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ, ಅತೃಪ್ತ ಮನಸುಗಳು ಆಸ್ಪೋಟಗೊಳ್ಳುತ್ತವೆ. ಈ ಜನಾಕ್ರೋಶವನ್ನು ತಡೆಗಟ್ಟುವ ನೈತಿಕ ಹೊಣೆ ಸರ್ಕಾರಗಳ ಮೇಲಿರುತ್ತದೆ. Our team of experts understands https://www.siliconvalleycloudit.com/where-is-mohegan-sun-casino-located/ your needs.
ಆದರೆ ಜನಸಾಮಾನ್ಯರ ಜೀವನ ಮತ್ತು ಜೀವನೋಪಾಯದ ಮಾರ್ಗಗಳನ್ನು ಮಾರುಕಟ್ಟೆಯ ನಿರ್ವಹಣೆಗೆ ಬಿಟ್ಟುಕೊಟ್ಟಿರುವ ಸರ್ಕಾರಗಳಿಗೆ, ಈ ಜನಾಕ್ರೋಶದ ಮೂಲ ಅರ್ಥವಾಗುತ್ತಿಲ್ಲ. ಯಾವುದೋ ಒಂದು ಜಾತಿ , ಮತ, ಧರ್ಮ ಅಥವಾ ಕೋಮಿನಲ್ಲಿ ಈ ಆಕ್ರೋಶದ ಮೂಲವನ್ನು ಕಾಣಲೆತ್ನಿಸಿದಾಗ, ಸಹಜವಾಗಿಯೇ ಸಂತ್ರಸ್ತರೇ ಅಪರಾಧಿಗಳಾಗಿಬಿಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜಘಾತುಕ ಶಕ್ತಿಗಳು, ವಿಧ್ವಂಸಕ ಗುಂಪುಗಳು ಮತ್ತು ಲುಂಪನೀಕರಣಗೊಂಡ ಸಾಮಾನ್ಯ ಜನರು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡುವ ಸಾಧ್ಯತೆಗಳೂ ಇರುತ್ತವೆ. ಆರ್ಥಿಕ ಅಭಿವೃದ್ಧಿ ಮಾರ್ಗದ ಇಕ್ಕೆಲಗಳಲ್ಲಿ ಢಾಳಾಗಿ ಕಾಣುವ ಅವಕಾಶವಂಚಿತ ಯುವಸಮೂಹದಲ್ಲಿ ಸಹಜವಾಗಿ ಮಡುಗಟ್ಟಿರಬಹುದಾದ ವ್ಯವಸ್ಥೆಯ ಮೇಲಿನ ಅಸಮಾಧಾನ ಮತ್ತು ಆಕ್ರೋಶವನ್ನು ಗ್ರಹಿಸುವ ಸೂಕ್ಷ್ಮ ಸಂವೇದನೆ ಮತ್ತು ಸಂಯಮ ಪ್ರಸ್ತುತ ಆಡಳಿತಾರೂಢ ರಾಜಕೀಯ ಪಕ್ಷಗಳಲ್ಲಿ ಇಲ್ಲದಿರುವುದರಿಂದಲೇ ಬುಲ್ಡೋಜರ್ ಕಾಯಿದೆಯನ್ನು ಜಾರಿಗೊಳಿಸುವಂತಹ ಕ್ರೂರ ಮನಸ್ಥಿತಿ ಕಂಡುಬರುತ್ತಿದೆ. 1975ರ ಸಂದರ್ಭದಲ್ಲಿ ಈಗ ಸಮರ್ಥಿಸಿಕೊಳ್ಳಲಾಗುತ್ತಿರುವ ಬುಲ್ಡೋಜರ್ ಕಾಯ್ದೆ ಜಾರಿಯಲ್ಲಿದ್ದಿದ್ದರೆ ಭಾರತ ಏನಾಗುತ್ತಿತ್ತು ? ಈ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ ? As we have previously mentioned, you typically receive 10 or 20 free https://clanchronicles.com/raging-bull-casino-no-deposit-bonus-codes-2020/ spins no deposit, and they are played at a minimum stake.
ಏಕೆ ಕಾಡಬೇಕೆಂದರೆ, ಆ ಸಂದರ್ಭದಲ್ಲಿ ಭಾರತದ ಸಮೂಹ ಪ್ರಜ್ಞೆ ಜಾಗೃತವಾಗಿತ್ತು. ಪ್ರಜಾಸತ್ತಾತ್ಮಕ ದನಿಗಳು ಮುಕ್ತವಾಗಿದ್ದವು. ಜನತೆಯ ಮೂಲಭೂತ ಹಕ್ಕುಗಳನ್ನೇ ಕಸಿದುಕೊಂಡಿದ್ದಾಗಲೂ, ಸಾಮಾನ್ಯ ಜನತೆಯ ಪ್ರತಿಭಟನೆ, ಪ್ರತಿರೋಧದ ಹಕ್ಕುಗಳನ್ನು ಕಾನೂನಾತ್ಮಕವಾಗಿ ನಿಯಂತ್ರಿಸಲಾಗಿದ್ದರೂ, ಜನರ ಮೂಲ ನೆಲೆಯನ್ನೇ ಉಚ್ಚಾಟಿಸುವಂತಹ ಬುಲ್ಡೋಜರ್ ಸಂಸ್ಕೃತಿ ಇರಲಿಲ್ಲ. ಸಮಾಜದಲ್ಲಿ ಪ್ರಕ್ಷುಬ್ಧತೆಯನ್ನು ಸೃಷ್ಟಿಸುವ ಯಾವುದೇ ಶಕ್ತಿಗಳನ್ನು, ಜನರನ್ನು ಶಿಕ್ಷೆಗೊಳಪಡಿಸುವುದು ಆಡಳಿತ ವ್ಯವಸ್ಥೆಯ ಕರ್ತವ್ಯವೇನೋ ಹೌದು, ಆದರೆ ಇಂತಹ ಪ್ರಕ್ಷುಬ್ಧತೆಯ ಕಾರಣಗಳನ್ನು ಶೋಧಿಸದೆ, ಪ್ರತಿಭಟನಾಕಾರರ ದನಿಯನ್ನು ಆಲಿಸಿ, ಪರಿಹಾರ ಮಾರ್ಗಗಳನ್ನು ಸೂಚಿಸದೆ, ಬುಲ್ಡೋಜರ್ ಮೂಲಕ ಅವರ ಬದುಕುವ ಹಾದಿಯನ್ನೇ ದುರ್ಗಮಗೊಳಿಸುವುದು ಅನಾಗರಿಕತೆಯ ಲಕ್ಷಣ ಅಲ್ಲವೇ ? ಯಾವುದೇ ಕಾಲಘಟ್ಟದಲ್ಲಾದರೂ, ಎಂತಹುದೇ ವ್ಯವಸ್ಥೆಯಲ್ಲಾದರೂ ಈ ಅಮಾನುಷ ಅಸೂಕ್ಷ್ಮತೆಗೆ ಬಲಿಯಾಗುವುದು ದುಡಿಯುವ ವರ್ಗಗಳೇ ಎಂಬ ವಾಸ್ತವವನ್ನು ಭಾರತದ ಯುವ ಸಮೂಹ ಅರ್ಥಮಾಡಿಕೊಂಡರೆ ಸಾರ್ಥಕವಾದೀತು.









