ಪಂಜಾಬ್ ಗೆದ್ದ ನಂತರ ಆಮ್ ಆದ್ಮಿ ಪಕ್ಷದ ಗಮನ ಕರ್ನಾಟಕದ ಮೇಲೆ ನೆಟ್ಟಿದೆ. ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಮಾದರಿಯನ್ನು ಮುಂದಿಟ್ಟುಕೊಂಡು 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಎದುರಿಸಲು ಆಪ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಇದೇ ಏಪ್ರಿಲ್ 21ರಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ರೈತ ಸಮಾವೇಶದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಲು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದೆ. ದೆಹಲಿ ಮಾದರಿಯಿಂದ ಪ್ರೇರಣೆ ಹೊಂದಿರುವ ರಾಜ್ಯ ರೈತ ಸಂಘವು ಸಿಎಂ ಕೇಜ್ರಿವಾಲ್ಗೆ ವಿಶೇಷ ಆಹ್ವಾನ ನೀಡಿದ್ದು, ಅವರು ಆಗಮಿಸಿ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾಡಿನ ಸುಮಾರು 50 ಸಾವಿರ ರೈತರು ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಿನವಾಗಲಿದೆ,” ಎಂದು ಹೇಳಿದ್ದಾರೆ.
ದೇಶದ ರಾಜಕೀಯ ಕಣಕ್ಕೆ ತೀರಾ ಇತ್ತೀಚೆಗೆ ಲಗ್ಗೆ ಇಟ್ಟಿರುವ ಆಮ್ ಆದ್ಮಿ ಪಕ್ಷದ ಮಹತ್ವಾಕಾಂಕ್ಷೆ ಬಹಳ ದೊಡ್ಡದು. ಅದರ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲರ ಆಡಳಿತ ವೈಖರಿ ದೇಶದೆಲ್ಲೆಡೆ ಈ ಚರ್ಚಾವಸ್ತು. ಹಾಗಾಗಿಯೇ ಕೇಂದ್ರಾಡಳಿತ ಪ್ರದೇಶವಾಗಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗದ್ದುಗೆ ಏರಿದ ಕೆಲವೇ ದಿನಗಳಲ್ಲಿ ಆಮ್ ಆದ್ಮಿ ಪಕ್ಷವು ಪೂರ್ಣ ಪ್ರಮಾಣದ ಸ್ವಾಯತ್ತತೆ ಹೊಂದಿರುವ ರಾಜ್ಯವೊಂದರ ಅಧಿಕಾರ ಹಿಡಿಯುವ ಪ್ರಯತ್ನ ಆರಂಭಿಸಿತು. 2017ರಲ್ಲಿ ದೆಹಲಿ ಗದ್ದುಗೆ ಏರುವ ಹೊತ್ತಲ್ಲಿ ಪಂಜಾಬ್ ಅಧಿಕಾರ ಕನಸೂ ಕಂಡಿರದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 2022ರಲ್ಲಿ ಗಡಿ ರಾಜ್ಯ ಪಂಜಾಬ್ ಆಡಳಿತದ ಚುಕ್ಕಾಣಿ ಹಿಡಿದೆ. ಇದು ಆಪ್ಗೆ ಮತ್ತಷ್ಟು ಹುಮ್ಮಸ್ಸು ತಂದು ಕೊಟ್ಟಿದ್ದು, ನಮ್ಮ ಮುಂದಿನ ಗುರಿ ಕರ್ನಾಟಕ ಮತ್ತು ಗುಜರಾತ್ ಎಂದು ಧೈರ್ಯದಿಂದ ಹೇಳಿಕೊಳ್ಳುವ ಮಟ್ಟಕ್ಕೆ ಆಪ್ ಸದ್ಯಕ್ಕೆ ಬೆಳೆದು ನಿಂತಿದೆ.
ಕಳೆದ ತಿಂಗಳಷ್ಟೇ ಮುಕ್ತಾಯ ಕಂಡ ಪಂಚರಾಜ್ಯ ಚುನಾವಣೆ ಫಲಿತಾಂಶಗಳ ಪೈಕಿ ಅತಿದೊಡ್ಡ ರಾಜ್ಯ ಉತ್ತರಪ್ರದೇಶದ ಚುನಾವಣಾ ಫಲಿತಾಂಶಕ್ಕಿಂತಲೂ ಪಂಜಾಬ್ ಫಲಿತಾಂಶ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿತ್ತು. ದೆಹಲಿಯಂತಹ ಮಧ್ಯಮವರ್ಗದ ಶಿಕ್ಷಿತ ಜನರ ಆಯ್ಕೆಯಾಗಿ ಮಾತ್ರ ಎಎಪಿ ಪಕ್ಷ ಉಳಿಯಲಿದೆ. ಭಾರತದ ರೈತರು, ಕೂಲಿಕಾರ್ಮಿಕರು, ಜನಸಾಮಾನ್ಯರ ಆಯ್ಕೆಯಾಗಿ ಎಎಪಿ ಉಳಿಯಲಾರದು ಎಂಬಂತಹ ರಾಜಕೀಯ ವಿಶ್ಲೇಷಣೆಗಳನ್ನು ಪಂಜಾಬ್ ನಲ್ಲಿ ಸಿಕ್ಕ ಈ ಗೆಲುವು ಬುಡಮೇಲು ಮಾಡಿ ಹಾಕಿದೆ. ರೈತರೇ ಹೆಚ್ಚಿರುವ ಮತ್ತು ಸಂಘಟಿತ ರೈತ ಶಕ್ತಿಗೆ ಹೆಸರಾಗಿರುವ ಪಂಜಾಬ್ ನಲ್ಲಿ ಆಮ್ ಆದ್ಮಿ ಪಾರ್ಟಿಯ ಈ ಗೆಲುವು ದೇಶ ವ್ಯಾಪಿ ಸಂಘಟನೆ ವಿಸ್ತರಣೆಗೆ ಅದರ ನಾಯಕತ್ವದ ಉದ್ದೇಶಕ್ಕೆ ದೊಡ್ಡ ಪ್ರೇರಣೆಯಾಗಲಿದೆ.
ಇತ್ತ ರಾಜ್ಯದಲ್ಲೂ ಎಎಪಿ ರಾಜ್ಯಾದ್ಯಂತ ತನ್ನ ದೆಹಲಿಯ Constructive Model ಮೂಲಕ ಜನರ ಮನೆ ಮನೆಯನ್ನು ತಲುಪುತ್ತಿದ್ದು, ಮಾರ್ಚ್ 10 ರಂದು ಪಂಜಾಬ್ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಬೆಂಗಳೂರು ನಗರದಲ್ಲಿ ಎಎಪಿಗೆ ಮೂರು ಪಟ್ಟು ಬೆಂಬಲ ಹೆಚ್ಚಾಗಿದೆ. ಸರ್ವೆಯಲ್ಲಿ ಮುಂದಿನ ಚುನಾವಣೆಯಲ್ಲಿ ಎಎಪಿಯನ್ನು ಆತ್ಮ ಪಕ್ಷವಾಗಿ ಆಯ್ಕೆ ಮಾಡಲು ಬೆಂಗಳೂರಿಗೆ ಒಲುವ ತೋರಿದ್ದಾರೆ ಎಂದು ರಾಜ್ಯ ಎಎಪಿ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದ್ದಾರೆ.
ಇನ್ನೇನು ರಾಜ್ಯದ ವಿಧಾನಸಭಾ ಚುನಾವಣೆಗೆ ಒಂದೂ ವರ್ಷ ಅವಧಿ ಉಳಿದಿದ್ದು ಎಲ್ಲಾ ಪಕ್ಷಗಳು ಭರದ ತಯಾರಿ ನಡೆಸಿಕೊಂಡು ಬರುತ್ತಿದೆ. ಇದರ ನಡುವೆ ಎರಡು ವರ್ಷಗಳಿಂದ ಜನ ಪ್ರತಿನಿಧಿಗಳಿಲ್ಲದೆ ಬಿಬಿಎಂಪಿ ಪ್ರತಿನಿಧಿಗಳ ಸಭಾಂಗಣ ಬಿಕೋ ಎನ್ನುತ್ತಿದೆ. ಈಗಾಗಲೇ ಆಮ್ ಆದ್ಮಿ ಬೆಂಗಳೂರಿನ ಜನರ ನಡುವೆ ಚಿರಪರಿಚಿತಗೊಂಡಿದೆ. ಬಿಜೆಪಿ ಸರ್ಕಾರ ಕರ್ಮಕಾಂಡ ವಿರುದ್ಧ ಬೀದಿ ಹೋರಾಟ ಮಾಡುವಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ. ಬಿಬಿಎಂಪಿ ಚುನಾವಣೆಯಲ್ಲಿ ಕನಿಷ್ಠ 10 ಸೀಟುಗಳ ಗುರಿ ಹೊಂದಿರುವ ಎಎಪಿಗೆ ಪಂಜಾಬ್ ಗೆಲುವು ಮತ್ತಷ್ಟು ಸ್ಪೂರ್ತಿ ತುಂಬಿದೆ. ಜೊತೆಗೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸೇರ್ಪಡೆ ಕೂಡ ಮಗದಷ್ಟು ಬಲ ತಂದುಕೊಟ್ಟಿದೆ. ಅಲ್ಲದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಬಗ್ಗೆ ಒಳಗೊಳಗೇ ಅಸಮಾಧಾನ ಹೊಂದಿರುವ ಜನರಿಗೆ ಆಮ್ ಆದ್ಮಿ ಪಕ್ಷ ಒಂದು ಪರ್ಯಾಯವಾಗಿ ಕಾಣಲು ಶುರುವಾಗಿದೆ. ಇದಕ್ಕೆ ಸಾಕ್ಷಿಯಾಗಿ ಪ್ರತಿಧ್ವನಿ ನಗರದ ಕೆಲ ಸಾರ್ವಜನಿಕರನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿದೆ.
ಬೆಂಗಳೂರಿನ ಅಟ್ಟೂರು ಬಡವಾಣೆ ನಿವಾಸಿ ಪ್ರಸಾದ್, ಯಾವುದೇ ಭ್ರಷ್ಟಾಚಾರ ಇಲ್ಲದೆ, ಸರ್ಕಾರದ ಸಂಪೂರ್ಣ ಸವಲತ್ತು ಒದಗಿಸುವ ಸರ್ಕಾರವನ್ನು ರಾಜ್ಯದ ಜನರು ನಿರೀಕ್ಷಿಸುತ್ತಿದ್ದಾರೆ. ಯಾವ ಪಕ್ಷವಾದರೂ ಈ ನಿಟ್ಟಿನಲ್ಲಿ ಕೆಲಸ ಮಾಡುವುದಾದರೆ ಆ ಪಕ್ಷಕ್ಕೆ ಜನಸಾಮಾನ್ಯರು ಓಟ್ ಹಾಕಿ ಅಧಿಕಾರಕ್ಕೆ ತರುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಎಎಪಿ ಪಾರದರ್ಶಕ ರಾಜಕಾರಣ ಮಾಡುತ್ತಿದ್ದು ಜನರೂ ಎಎಪಿಯತ್ತ ಮುಖಮಾಡುತ್ತಿದ್ದಾರೆ. ಕೇಜ್ರಿವಾಲ್ ಎಎಪಿ ಪಕ್ಷವನ್ನು ಸ್ಥಾಪನೆ ಮಾಡಿದ ದಿನದಿಂದ ನಾನು ನೋಡಿದ್ದೇನೆ. ಅವರ ಪಾರದರ್ಶಕತೆಯುಳ್ಳ ಯೋಜನೆಗಳು ಜನ ಸಾಮಾನ್ಯರ ಮನ ಗೆಲ್ಲುತ್ತಿದೆ. ಈ ನಿಟ್ಟಿನಲ್ಲಿ ಎಎಪಿ ಅಧಿಕಾರದಕ್ಕೆ ಬರಬೇಕು ಎಂದು ತಮ್ಮ ಇಂಗಿತ ಹೊರ ಹಾಕಿದ್ದಾರೆ.
ಬ್ಯಾಡ್ರಾಯನಪುರ ಕ್ಷೇತ್ರದ ಸುಹಾಸಿನಿ ಫಣಿರಾಜ್ ಎಂಬುವರು ಮಾತನಾಡಿ, ಭ್ರಷ್ಟಾಚಾರ ರಾಜ್ಯದಲ್ಲಿ ತಾಂಡವಾಡುತ್ತಿದೆ. ಅದರ ನಿರ್ಮೂಲನೆ ಮುಖ್ಯವಾಗಿದ್ದು, ನಾವು ಎಎಪಿ ಬೆಂಬಲಿಸುತ್ತಿದ್ದೇವೆ. ಈ ಸಲ ಎಎಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಬೆಂಗಳೂರಿಗೆ ಕೇಜ್ರಿವಾಲ್ ಬರುತ್ತಿರುವು ತಿಳಿದು ನಿಜಕ್ಕೂ ಸಂತೋಷ ಆಯ್ತು. ನಾವು ಎಎಪಿಯನ್ನು ಸಂಪೂರ್ಣಾವಾಗಿ ಬೆಂಬಲಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಶವಂತಪುರ ಕ್ಷೇತ್ರದ ನಿವಾಸಿ ಡಾ. ಸತೀಶ್ ಎಂಬುವರು ಮಾತನಾಡಿ, ಇವತ್ತು ರಾಜಕಾರಣ ಎನ್ನುವುದು ಜನಸೇವೆಯಾಗದೆ, ಪಾರದರ್ಶಕತೆಯನ್ನು ಕಳೆದುಕೊಂಡಿದೆ. ಸ್ವಾರ್ಥ ರಾಜಕಾರಣಕ್ಕೆ ಕನ್ನಡಿಗರು ಬಲಿಯಾಗುತ್ತಿದ್ದಾರೆ. ಹಣ ಹಾಕು ಹಣ ತೆಗಿ ಎಂಬಂತೆ ನಡೆಯುತ್ತಿದೆ. ಇದಕ್ಕೆ ಕೊನೆ ಎಂದರೆ ಪರ್ಯಾಯ ರಾಜಕೀಯ ವೇದಿಕೆ. ದೆಹಲಿ ಆಡಳಿತ ನೋಡಿದರೆ ರಾಜ್ಯದಲ್ಲೂ ಎಎಪಿ ಪಾರದರ್ಶಕತೆ ರಾಜಕಾರಣ ನೀಡುತ್ತದೆ ಎಂಬ ಬಲವಾದ ನಂಬಿಕೆ ಇದೆ. ಇಲ್ಲಿ ಮುಖ್ಯವಾಗಿ ಭಷ್ಟಾಚಾರ ಮುಕ್ತವಾಗಿ ಪಾರರ್ಶಕಥೆ ಬರಬೇಕು ಈ ನಿಟ್ಟಿನಲ್ಲಿ ನಾನು ಎಎಪಿ ಬೆಂಬಲಿಸುತ್ತೆನೆ ಎಂದಿದ್ದಾರೆ.
ಮುಂದುವರೆದು, ಜಾತಿ, ಧರ್ಮ ರಾಜಕೀಯ ಮಾಡಿ ಜನರನ್ನು ದಡ್ಡರನ್ನಾಗಿ ಮಾಡುತ್ತಿದೆ. ಇರುವ ಸಮಸ್ಯೆಗಳನ್ನು ಬಿಟ್ಟು ನಮ್ಮ ನಡುವೆ ಜಾತಿ ಧರ್ಮ ಅಂತ ತಂದು ನಮ್ಮನ್ನು ಅಂಧರನ್ನಾಗಿಸುತಿದ್ದಾರೆ. ಇದರಿಂದ ಹೊರಬಂದು ನಾವು ಈ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಬೇಕಿದೆ. ರೈತರ ಸಮಸ್ಯೆಗಳನ್ನು ಆಲಿಸದೆ ತಮ್ಮ ಸ್ವಾರ್ಥ ರಾಜಕೀಯವನ್ನು ಮಾಡುತ್ತಿರುವ ಮೂರು ರಾಜಕೀಯ ಪಕ್ಷಗಳ ಬಗ್ಗೆ ರೈತರೂ ಅಸಮಾಧಾನಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೇಜ್ರಿವಾಲ್ ಬೆಂಗಳೂರಿಗೆ ಬಂದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಆರಂಭವಾಗುತ್ತದೆ. ಇದರ ಇಂಪ್ಯಾಕ್ಟ್ ಬಿಬಿಎಂಪಿ ಚುನಾವಣೆಯಲ್ಲಿ ಕಾಣಬಹುದು ಎಂದು ಹೇಳಿದ್ದಾರೆ.
ಎಎಪಿ ಪಕ್ಷ ಮತ್ತು ಏಪ್ರಿಲ್ 21ರಂದು ಕೇಜ್ರಿವಾಲ್ ಬರುತ್ತಿರುವ ಕುರಿತು ಪಕ್ಷದ ಸದಸ್ಯರಾದ ವಿಜಯ್ ಅವರನ್ನು ಮಾತನಾಡಿಸಿದಾಗ, ಏಪ್ರಿಲ್ 21ರ ಸಮಾವೇಶ ರೈತರ ಸಮಾವೇಶವಾಗಿದ್ದು, ಎಎಪಿ ಯಾವತ್ತಿಗೂ ರೈತರ ಹಿತಾಸಕ್ತಿಗೆ ಕೆಲಸ ಮಾಡಿತ್ತಿದೆ. ಪಂಜಾಬ್ಗೆ ಅಧಿಕಾರಕ್ಕೆ ಬಂಧ ತಕ್ಷಣ ನಾವು ರೈತರಿಗಾಗಿ ಏನು ಮಾಡಿದ್ದೇವೆ ಎಂದು ನೋಡಿದರೆ ತಿಳಿಯುತ್ತದೆ. ಈ ನಿಟ್ಟಿನಲ್ಲಿ ಕೇಜ್ರಿವಾಲ್ ರಾಜ್ಯಕ್ಕೆ ಬರುತ್ತಿದ್ದಾರೆ. ಭಷ್ಟಾಚಾರ ಮುಕ್ತ, ಪಾರದರ್ಶಕವಾದ ಆಡಳಿತ ನೀಡುವಲ್ಲಿ ರಾಜ್ಯದ ಮೂರು ಪಕ್ಷಗಳು ಸೋತಿವೆ. ಪರ್ಸಂಟೇಜ್ ರಾಜಕೀಯ ಕರ್ನಾಟಕದಲ್ಲಿ ರಾರಾಜಿಸುತ್ತಿದೆ. ಇತ್ತೀಚಿಗೆ ಮಠಗಳ ಸ್ವಾಮಿಜೀಗಳು ಕೂಡ 30% ಕಮಿಷನ್ ಬಗ್ಗೆ ಮಾತನಾಡಿದ್ದಾರೆ. ಹಿಂದೂ ಧರ್ಮ ರಕ್ಷಣೆ ಬಗ್ಗೆ ಮಾತಾಡೋ ಇವರೇ ಸ್ವಾಮಿಗಳ ಬಳಿ ಕಮಿಷನ್ ತೆಗೆದುಕೊಳ್ಳುವುದು ಯಾವ ರೀತಿಯ ರಾಜಕೀಯ ಇದು.? ಇದನ್ನೆಲ್ಲ ನೋಡಿ ರಾಜ್ಯದ ಜನರು ಬೇಸತ್ತಿದ್ದಾರೆ. ಅವರಿಗೆ ಪರ್ಯಾಯ ರಾಜಕೀಯ ವೇದಿಕೆ ಹಾಕಿಕೊಡುತ್ತಿದ್ದೇವೆ. ಹಾಗಾಗಿ ಕರ್ನಾಟಕಕ್ಕೆ ಎಎಪಿ ಅನಿವಾರ್ಯ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ಕರ್ನಾಟಕ ಚುನಾವಣಾ ಉಸ್ತುವಾರಿಯಾಗಿ ದೆಹಲಿ ಶಾಸಕ ಹಾಗೂ ದೆಹಲಿಯ ಎಎಪಿ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಪಾಂಡೆ ನೇಮಕಗೊಂಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಬಿಹಾರ, ಹಿಮಾಚಲ ಪ್ರದೇಶ, ಅಸ್ಸಾಂ, ಗುಜರಾತ್, ಹರ್ಯಾಣ, ಕೇರಳ ಹಾಗೂ ರಾಜಸ್ಥಾನ ರಾಜ್ಯಗಳಿಗೂ ಚುನಾವಣಾ ಉಸ್ತುವಾರಿಗಳನ್ನು ಆಮ್ ಆದ್ಮಿ ಪಕ್ಷ ನೇಮಿಸಿದೆ.
ಉತ್ತರಪ್ರದೇಶ ಮೂಲದವರಾದ ದಿಲೀಪ್ ಪಾಂಡೆಯವರು 2011ರಲ್ಲಿ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಭಾರತ ಸತ್ಯಾಗ್ರಹದಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದರು. ನಂತರ ಅರವಿಂದ್ ಕೇಜ್ರಿವಾಲ್ರವರು ಆಮ್ ಆದ್ಮಿ ಪಾರ್ಟಿ ಸ್ಥಾಪಿಸಿದಾಗ ಪಕ್ಷಕ್ಕೆ ಸೇರ್ಪಡೆಯಾದರು. 2015ರಲ್ಲಿ ಪಕ್ಷದ ದೆಹಲಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ದಿಲೀಪ್ ಪಾಂಡೆ, ಅದೇ ವರ್ಷ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಭರ್ಜರಿ ಬಹುಮತದೊಂದಿಗೆ ಗೆದ್ದಿದ್ದರ ಹಿಂದೆ ಮಹತ್ವದ ಪಾತ್ರವಹಿಸಿದ್ದರು. ಪ್ರಸ್ತುತ ದೆಹಲಿಯ ತಿಮಾರ್ಪುರ ಕ್ಷೇತ್ರದ ಶಾಸಕರಾಗಿ , ದೆಹಲಿ ವಿಧಾನಸಭೆಯ ಮುಖ್ಯ ಸಚೇತಕ ಹಾಗೂ ಎಎಪಿ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೀಗೆ ಜನರು ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ನೀಡುವ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದೇನಿದ್ದರು ದಕ್ಷಿಣ ಭಾರತದ ಉತ್ತರ ಪ್ರದೇಶ ಎಂಬ ಕಳಂಕ್ಕೆ ಕ್ರಮೇಣವಾಗಿ ಪಾತ್ರವಾಗುತ್ತಿರುವ ಕರ್ನಾಟಕದಲ್ಲಿ ಎಎಪಿ ಹೇಗೆ ತನ್ನ ನೆಲೆಕಂಡುಕೊಳ್ಳಲಿದೆ ಎಂಬವುದೇ ರಾಜಕೀಯವಾಗಿ ಉಳಿದಿರುವ ಕುತೂಹಲ. ಅದಕ್ಕೆ ಮುಂಬರುವ ದಿನಗಳೇ ಉತ್ತರ ನೀಡುವ ನಿರೀಕ್ಷೆ ಇದೆ.