ಬೆಂಗಳೂರು ಜನರು ತಿಂಡ ತಿನಿಸುಗಳನ್ನು ಸಿಕ್ಕಾಪಟ್ಟೆ ಇಷ್ಟ ಪಡುವವರು. ಅದರಲ್ಲೂ ರಾತ್ರಿ ಹೊತ್ತು ಏನಾದರೂ ತಿನ್ಬೇಕು ಅಂತ ಚಡಪಡಿಸೋದು ಜಾಸ್ತಿ. ಅಂಥವರಿಗೆ ಸ್ವೀಟ್ ನ್ಯೂಸ್ ಸಿಕ್ಕಿದೆ. ಇನ್ಮುಂದೆ ಜನರು ಬೇಕಾದ ಟೈಂನಲ್ಲಿ ತಮ್ಮಿಷ್ಟದ ತಿಂಡಿ, ಊಟ, ಸ್ನ್ಯಾಕ್ಸ್, ತಿನ್ನಬಹುದು.
ಇನ್ಮುಂದೆ ಮಧ್ಯರಾತ್ರಿಯಲ್ಲೂ ಸಿಗುತ್ತೆ ಫುಡ್ !
ಸಿಟಿ ಜನರು ತಿಂಡಿ ಪ್ರಿಯರು. ನೆನೆಸಿಕೊಂಡಾಗಲೆಲ್ಲಾ ಏನಾದರೂ ತಿನ್ನಬೇಕು ಅಂತ ಆಸೆ ಪಡುತ್ತಾರೆ. ಅದರಲ್ಲೂ ಸಾಕಷ್ಟು ಜನಕ್ಕೆ ನೈಟ್ ಕಾರ್ವಿಂಗ್ ಹ್ಯಾಬಿಟ್ ಇರುತ್ತೆ. ಟಿವಿ, ವೆಬ್ ಸಿರೀಸ್ ಎಂಜಾಯ್ ಮಾಡ್ತಾ ಏನಾದರು ತಿನ್ನಬೇಕು ಅಂತ ಆಸೆ ಪಡ್ತಾರೆ. ಆದರೆ ಇಷ್ಟು ದಿನ ಮಧ್ಯರಾತ್ರಿ ಬೇಕು ಅಂದಾಗ ಹೋಟೆಲ್ ತಿಂಡಿ ಸಿಗ್ತಿರ್ಲಿಲ್ಲ. ಆದರೆ ಈಗ ಆ ಚಿಂತೆ ಬೇಕಾಗಿಲ್ಲ. ಯಾಕೆಂದ್ರೆ, ಸರ್ಕಾರವೇ ರಾತ್ರಿ ಪೂರ್ತಿ ಹೋಟೆಲ್ ಕೆಫೆಟೇರಿಯಾ, ಬೇಕರಿ, ಸ್ವೀಟ್ಸ್ ಸ್ಟಾಲ್, ಬೇಕರಿ, ಐಸ್ಕ್ರಿಂ ಪಾರ್ಲರ್ 24*7 ತೆರೆಯಲು ಅವಕಾಶ ಕೊಟ್ಟಿದೆ.
ಈ ಹಿಂದೆ ಅಂದ್ರೆ 2021ರಲ್ಲೇ ಹೋಟೆಲ್ಗಳು 24 ಗಂಟೆ ತೆರೆಯಲು ಸರ್ಕಾರ ಆದೇಶ ಹೊರಡಿಸಲಾಗಿತ್ತು. ಆದರೆ ಕೋವಿಡ್ ಕಾರಣ, ಆದೇಶ ಜಾರಿ ಆಗಿರಲಿಲ್ಲ. ಇದೀಗ ಕೋವಿಡ್ ಕಡಿಮೆಯಾಗಿದೆ. ಹೀಗಾಗಿ ಹೋಟೆಲ್ ಮಾಲೀಕರ ಜೊತೆ ಮತ್ತೊಮ್ಮೆ ಚರ್ಚೆ ಮಾಡಿ 277 ಸರ್ವೀಸ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೀಗಾಗಿ ಇನ್ಮುಂದೆ ಮಧ್ಯರಾತ್ರಿಯಲ್ಲೂ ಹೋಟೆಲ್ ತೆರೆಯಲು ಅನುಮತಿ ಸಿಕ್ಕಿದೆ. ಆದರೆ 274 ಸೇವೆಗೆ ಕೆಲವೊಂದು ಷರತ್ತು ವಿಧಿಸಿದೆ.
ಹೋಟೆಲ್ಗಳಿಗೆ ಸರ್ಕಾರದ ಷರತ್ತುಗಳು !
- 24*7 ಹೋಟೆಲ್ ಸರ್ವೀಸ್ಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಬೇಕು
- ಓವರ್ ಟೈಂ ಕೆಲಸ ಮಾಡುವ ಸಿಬ್ಬಂದಿಗೆ OT ವ್ಯವಸ್ಥೆ ಇರಬೇಕು
- ಕೆಲಸದ ಮಿತಿ 10 ಗಂಟೆಗೂ ಹೆಚ್ಚು ಇರಬಾರದು
- ರಾತ್ರಿ 8 ಗಂಟೆಯ ನಂತರ ಮಹಿಳಾ ಸಿಬ್ಬಂದಿ ಕೆಲಸ ಮಾಡಬಾರದು
- ಹೆಚ್ಚುವರಿ ಕೆಲಸ ಮಾಡಿಸಿಕೊಂಡಲ್ಲಿ KSEA 1961 ಕಾಯಿದೆ ಅಡಿಯಲ್ಲಿ ದಂಡ
ಸರ್ಕಾರದ ಪ್ರಸ್ತುತ ನಿರ್ಧಾರವನ್ನು ಬೃಹತ್ ಹೋಟೆಲ್ ಸಂಘ ಸ್ವಾಗತಿಸಿದ್ದು, ಕೋವಿಡ್ ಟೈಂನಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಿದ್ದ ಮಾಲೀಕರು ಈ ನಿರ್ಧಾರದಿಂದ ಖುಷಿಯಾಗಿದ್ದಾರೆ. ರಾಜ್ಯ ಸರ್ಕಾರ ಅನುಮತಿ ಕೊಟ್ಟರೂ, ಸದ್ಯಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಹೀಗಾಗಿ ಪೊಲೀಸ್ ಆಯುಕ್ತರಿಗೆ ಹೋಟೆಲ್ ಮಾಲೀಕರು ಪತ್ರ ಬರೆದಿದ್ದು, ಆದಷ್ಟು ಬೇಗ ಅನುಮತಿ ನೀಡುವಂತೆ ಕೇಳಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಇಲಾಖೆಯಿಂದ ಗ್ರೀನ್ ಸಿಗ್ನಲ್ ಬಂದ ತಕ್ಷಣವೇ 24*7 ಹೋಟೆಲ್ ಸೇವೆ ಶುರುವಾಗಲಿದೆ.