ಪತ್ನಿಯನ್ನು ಗರ್ಭಿಣಿ ಮಾಡಲು ಕೈದಿಗೆ ಜೋಧ್ ಪುರ ನ್ಯಾಯಾಲಯದ 15 ದಿನದ ಪೆರೋಲ್ ನೀಡಿದ ಅಪರೂಪದ ಆದೇಶ ನೀಡಿದೆ.
ಗಂಡನಿಗೆ ಜಾಮೀನು ನೀಡುವ ಮೂಲಕ ತಾಯಿ ಆಗುವ ನನ್ನ ಹಕ್ಕನ್ನು ರಕ್ಷಿಸಬೇಕು ಎಂದು ಪತ್ನಿ ನ್ಯಾಯಾಲಯಕ್ಕೆ ಮೊರೆ ಹೋದ ಹಿನ್ನೆಲೆಯಲ್ಲಿ ನ್ಯಾಯಾಲಯ, ಗಂಡನಿಗೆ ಜಾಮೀನು ನೀಡಿದೆ.

ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ಫರ್ಜಾದ್ ಅಲಿ ಅವರನ್ನೊಳಗೊಂಡ ಪೀಠ, ಗಂಡನಿಗೆ ಶಿಕ್ಷೆ ವಿಧಿಸಿದ್ದರಿಂದ ಆಕೆಯ ಪತ್ನಿ ಲೈಂಗಿಕ ಮತ್ತು ಭಾವನೆಗಳನ್ನು ಕೂಡ ಗೌರವಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ನ್ಯಾಯಾಲಯ, ಹಿಂದೂಗಳ ಋಗ್ವೇದ, ಮುಸ್ಲಿಂ ಮತ್ತು ಕ್ರಿಸ್ಟಿಯನ್ ಧರ್ಮಗಳ ಉದಾಹರಣಗಳನ್ನು ಉಲ್ಲೇಖಿಸಿದ್ದು, 34 ವರ್ಷದ ಪತಿಗೆ ಪತ್ನಿ ರೇಖಾಗಳನ್ನು ಗರ್ಭವತಿ ಮಾಡಲು ಅವಕಾಶ ನೀಡಲು 15 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲು ಆದೇಶಿಸಿತು.