ರಾಜಸ್ಥಾನದ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿನ್ನೆ ಪ್ರಾರಂಭವಾದ ಭಾರೀ ಬೆಂಕಿ 10 ಚದರ ಕಿಲೋಮೀಟರ್ಗೆ ವ್ಯಾಪಿಸಿದೆ, ಇದು ಸುಮಾರು 1,800 ಫುಟ್ಬಾಲ್ ಮೈದಾನಗಳ ವ್ಯಾಪ್ತಿಯಷ್ಟು ಹರಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ವಾಯುಪಡೆ ( IAF) ಎರಡು ಹೆಲಿಕಾಪ್ಟರ್ಗಳು ಬೆಂಕಿ ಪೀಡಿತ ಪ್ರದೇಶದ ಮೇಲೆ ನೀರನ್ನು ಹಾರಿಸಿ ಅಗ್ನಿ ನಂದಿಸಲು ಕೆಲಸ ಮಾಡುತ್ತಿವೆ.
ಎಸ್ಟಿ-17 ಎಂಬ ಹೆಸರಿನ ಹೆಣ್ಣು ಹುಲಿಯ ಭೀತಿಯಿಂದ ಅರಣ್ಯಾಧಿಕಾರಿಗಳು ಮುಂದೆ ಸಾಗಲು ಹಿಂದೇಟು ಹಾಕುತ್ತಿದ್ದಾರೆ. ಇದು ಬೆಂಕಿ ವ್ಯಾಪಿಸಲು ಕಾರಣವಾಗಿದ್ದು ಅರಣ್ಯ ಇಲಾಖೆ ಮಿಲಿಟರಿ ಸೇನಾ ಸಹಾಯ ಕೋರಿದೆ. ತಾಯಿ ಹುಲಿ ತನ್ನ ಎರಡು ಮರಿಗಳೊಂದಿಗೆ ಪ್ರದೇಶದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭಾರೀ ಬೆಂಕಿಯಿಂದಾಗಿ ಉಸಿರುಗಟ್ಟಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಸರಿಸ್ಕಾ ಮೀಸಲು ಪ್ರದೇಶದಲ್ಲಿ 20ಕ್ಕೂ ಹೆಚ್ಚು ಹುಲಿಗಳಿವೆ ಎಂದು ತಿಳಿಸಿದ್ದಾರೆ.
ಅಗ್ನಿಶಾಮಕ ದಳದವರು ಪರಿಸ್ಥಿತಿಯನ್ನು ಹತೋಟಿಗೆ ತರಲು ಇನ್ನೂ ಸಾಧ್ಯವಾಗಿಲ್ಲ. ಎರಡು ಐಎಎಫ್ ಹೆಲಿಕಾಪ್ಟರ್ಗಳು ರಾಜಸ್ಥಾನದ ಸಿಲಿಸೆರ್ಹ್ ಸರೋವರದಿಂದ ನೀರನ್ನು ಸಂಗ್ರಹಿಸುತ್ತಿವೆ ಮತ್ತು ಸರೋವರದಿಂದ 43 ಕಿಮೀ ದೂರದಲ್ಲಿರುವ ಸರಿಸ್ಕಾದಲ್ಲಿ ಕಾಡ್ಗಿಚ್ಚಿನ ಮೇಲೆ ಹಾಕಿ ಬೆಂಕಿಯನ್ನು ನಂದಿಸಲು ಕೆಲಸ ಮಾಡುತ್ತಿದೆ .
ಅರಣ್ಯಾಧಿಕಾರಿಗಳು ಬೆಂಕಿನಂದಿಸಲು ವಿಫಲವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೇನಾ ಸಹಾಯ ಕೋರಿದೆ. ಇಂದು ಸೇನಾ ದಳ ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾದ್ದು, 2 ಹೆಲಿಕಾಪ್ಟರ್ಗಳು ಹೈಡ್ರಾಲಿಕ್ ವ್ಯವಸ್ಥೆಯನ್ನು ಬಳಸಿ ನೀರು ಹರಡಿ ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿವೆ.
“ಸರಿಸ್ಕಾದಲ್ಲಿ ದೊಡ್ಡ ಪ್ರದೇಶಗಳಲ್ಲಿ ಹರಡಿದ” ಬೆಂಕಿಯನ್ನು ನಿಯಂತ್ರಿಸಲು ಸಹಾಯ ಮಾಡಲು ಅಲ್ವಾರ್ ಜಿಲ್ಲಾಡಳಿತವು SOS ಅನ್ನು ಕಳುಹಿಸಿದ ನಂತರ ಎರಡು Mi-17 V5 ಹೆಲಿಕಾಪ್ಟರ್ಗಳನ್ನು ಕಳುಹಿಸಲಾಗಿದೆ ಎಂದು IAF ಹೇಳಿಕೆಯಲ್ಲಿ ತಿಳಿಸಿದೆ.
ಹುಲಿ ಸಂರಕ್ಷಿತ ಪ್ರದೇಶದ ಸಮೀಪವಿರುವ ಮೂರು ಗ್ರಾಮಗಳಲ್ಲಿಬೆಂಕಿಯ ತೀರ್ವತೆಯ ಕುರಿತು ಎಚ್ಚರಿಕೆ ನೀಡಲಾಗಿದೆ ಎಂದು ಹೇಳಲಾಗಿದೆ. ಬೆಂಕಿಗೆ ಕಾರಣ ತಿಳಿದುಬಂದಿಲ್ಲವಾದರೂ, ಇತ್ತೀಚಿನ ದಿನಗಳಲ್ಲಿ ದೇಶದ ಉತ್ತರ ಭಾಗಗಳಲ್ಲಿ ತೀವ್ರವಾದ ಶಾಖ ತಾಪಮಾನ ಕಂಡುಬಂದಿದೆ.
ಎರಡು ದಿನಗಳ ಹಿಂದೆ ನಗರದ ಸಮೀಪದಲ್ಲೇ ಇರುವ ಬುರಾ ಸಿಂಗ್ ಬೆಟ್ಟದಲ್ಲಿ ಹೊತ್ತಿಕೊಂಡಿದ್ದ ಬೆಂಕಿ ಗಾಳಿಯ ರಭಸಕ್ಕೆ ಕಾಡಿಗೂ ಹೊತ್ತಿಕೊಂಡಿದೆ. ಕಾಡಿನ ಗುಡ್ಡಗಾಡು ಪ್ರದೇಶಕ್ಕೆ ಬೆಂಕಿ ವ್ಯಾಪಿಸಿರುವುದರಿಂದ ಅಗ್ನಿಶಾಮಕ ದಳ ಅಲ್ಲಿಗೆ ತಲುಪಲು ಸಾಧ್ಯವಾಗಿಲ್ಲ. ಇದು ಚಿರತೆಗಳು, ಕಾಡು ನಾಯಿಗಳು, ಕಾಡಿನ ಬೆಕ್ಕುಗಳು, ಹೈನಾಗಳು ಮತ್ತು ನರಿಗಳು ಸೇರಿದಂತೆ ಹಲವಾರು ಮಾಂಸಾಹಾರಿ ಪ್ರಾಣಿಗಳು ನೆಲೆಯಾಗಿದೆ.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ, ಭಾರತವು ತನ್ನ ಹುಲಿಗಳ ಸಂಖ್ಯೆಯನ್ನು ಲೆಕ್ಕ ಹಾಕುತ್ತದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ದೇಶದ ಹುಲಿ ಸಂರಕ್ಷಣಾ ಸಂಸ್ಥೆಯು ಅಳಿವಿನಂಚಿನಲ್ಲಿರುವ 126 ದೊಡ್ಡ ಹುಲಿಗಳು 2021ರಲ್ಲಿ ಸಾವನ್ನಪ್ಪಿವೆ ಎಂದು ಹೇಳಿದೆ.. ಈ ಹಿಂದೆ 2016 ರಲ್ಲಿ 121 ಹುಲಿಗಳು ಸಾವನ್ನಪ್ಪಿದಾಗ ವರ್ಷಕ್ಕೆ ಅತಿ ಹೆಚ್ಚು ಸಾವು ಸಂಭವಿಸಿದೆ. ವಿಶ್ವದ ಹುಲಿ ಸಂಖ್ಯೆಯ ಶೇಕಡಾ 75 ರಷ್ಟು ಭಾರತವು ನೆಲೆಯಾಗಿದೆ.