ಕೋವಿಡ್ ಕಾಲರ್ ಟ್ಯೂನ್ಗಳು ಇನ್ನು ಮುಂದೆ ಕೇಳಿಸು ವು ದಿಲ್ಲ. ಶೀಘ್ರದಲ್ಲೇ ಕಾಲರ್ ಟ್ಯೂನ್ಗೆ ಅಂತ್ಯಹಾಡಲಾಗು ತ್ತದೆ ಎಂದು ಕೇಂ ದ್ರ ಆರೋ ಗ್ಯ ಸಚಿವಾ ಲಯ ನಿರ್ಧರಿಸಿದೆ ಎಂದು ANI ಸೋಮವಾರ ಅಧಿಕೃತ ಮೂಲಗಳನ್ನು ಉಲ್ಲೇಖಿಸಿದೆ.
ಇಷ್ಟು ದಿನ ಕೋವಿಡ್ ಕಾಲರ್ ಟ್ಯೂನ್ ಕೇಳಿ ಕೇಳಿ ಸುಸ್ತಾಗಿದ್ದ ಜನರಿಗೆ ಇದೀಗ ಗುಡ್ನ್ಯೂ ಸ್ ಒಂದು ಸಿಕ್ಕಿ ದೆ. ಸಾಂಕ್ರಾಮಿಕ ರೋಗದ ಪ್ರಾರಂಭವಾದ ದಿನದಿಂದ ಕೋವಿಡ್-19 ಕುರಿತು ಜಾಗೃತಿಗಾಗಿ ಟೆಲಿಕಾಂ ಆಪರೇಟರ್ಗಳು ಪರಿಚಯಿಸಿದ ಪ್ರೀ -ಕಾ ಲ್-ಆಡಿಯೋ ಜಾಹೀ ರಾತುಗಳು ಮತ್ತು ಕಾಲರ್- ಟ್ಯೂನ್ಗಳನ್ನು ಶೀಘ್ರದಲ್ಲೇ ಸ್ಥಗಿತಗೊ ಳಿಸಲಾಗುವುದು . ದೇ ಶದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾ ಗುತ್ತಿದ್ದು , ಕೋವಿಡ್ ಪೂರ್ವ ಕರೆ ಸಂದೇ ಶಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಕೋವಿಡ್ ಕಾಲರ್ ಟ್ಯೂನ್ಗಳಿಂ ದಾಗಿ ತುರ್ತು ಸಮಯದಲ್ಲಿ ಬೇರೆಯವರಿಗೆ ಫೋನ್ ಕರೆಗಳನ್ನು ಮಾಡಲು ವಿಳಂಬವಾಗುತ್ತಿರು ವ ಹಿನ್ನೆಲೆಯಲ್ಲಿ ಕಾ ಲರ್ ಟ್ಯೂನ್ಗಳನ್ನು ಅಮಾನತುಗೊ ಳಿಸಲು ಕೇಂದ್ರವು ಪರಿಗಣಿಸುತ್ತಿದೆ. ದೂರ ಸಂಪರ್ಕ ಇಲಾ ಖೆ ಈಗಾಗಲೇ ಕೇಂದ್ರ ಆರೋ ಗ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ.

ಭಾರತದ ಸೆಲ್ಯುಲರ್ ಆಪರೇ ಟರ್ಗಳ ಕೇಂದ್ರವು ಕಾಲರ್ ಟ್ಯೂನ್ ಅನ್ನು ಸ್ಥಗಿತಗೊಳಿಸಲು ಮೊಬೈಲ್ ಬಳಕೆದಾರರಿಂದ ಸ್ವೀಕರಿಸಿದ ವಿನಂತಿಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿವೆ. ಹೀಗಾಗಿ ಕಾ ಲರ್ ಟ್ಯೂನ್ ರದ್ದು ಮಾಡುವ ನಿರ್ಧಾರಕ್ಕೆ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.













