• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಶಾಂತಿ, ಸುವ್ಯವಸ್ಥೆ ಇಲ್ಲದ ರಾಜ್ಯ, ದೇಶ ಅಭಿವೃದ್ಧಿ ಆಗಲು ಸಾಧ್ಯವಿಲ್ಲ : ಸಿದ್ದರಾಮಯ್ಯ  

ಪ್ರತಿಧ್ವನಿ by ಪ್ರತಿಧ್ವನಿ
March 24, 2022
in ಕರ್ನಾಟಕ
0
ಬಿಜೆಪಿ ಶಾಸಕರಿಂದ ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಅಡ್ಡಿ, ಕಾಶ್ಮೀರಿ ಫೈಲ್ಸ್ ಚಿತ್ರ ಹಾಕುವಂತೆ ಒತ್ತಡ : ಸಿದ್ದರಾಮಯ್ಯ ಗಂಭೀರ ಆರೋಪ!
Share on WhatsAppShare on FacebookShare on Telegram

ಇತ್ತೀಚಿನ ಬೆಳವಣಿಗೆಗಳಿಂದ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಇಂದಿನಾ ವಿಧಾನಸಭಾ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ  ಕಿಡಿಕಾರಿದ್ದಾರೆ.

ADVERTISEMENT

ಶಾಂತಿ, ಸುವ್ಯವಸ್ಥೆ, ನೆಮ್ಮದಿಯ ಬದುಕಿಗೂ ರಾಜ್ಯ ಮತ್ತು ದೇಶದ ಅಭಿವೃದ್ಧಿಗೂ ನೇರ ಸಂಬಂಧವಿದೆ. ಶಾಂತಿ, ಸುವ್ಯವಸ್ಥೆ ಇಲ್ಲದ ರಾಜ್ಯ, ದೇಶ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಇದನ್ನು ಜಗತ್ತಿನಾದ್ಯಂತ ಕಾಣಬಹುದು. ಬಹುತ್ವದ ರಾಷ್ಟ್ರಗಳಲ್ಲಿ ಶಾಂತಿ, ಸುವ್ಯವಸ್ಥೆ ಇದ್ದು ಅಂಥಹವು ಮುಂದುವರೆದಿವೆ, ಒಂದೇ ಧರ್ಮವನ್ನು ಹೊಂದಿರುವ ದೇಶಗಳು ಧರ್ಮವನ್ನು ರಾಜಕಾರಣದಲ್ಲಿ ಬೆರೆಸಿರುವ ಕಾರಣದಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಉದಾಹರಣೆಗೆ ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಫಿನ್ ಲ್ಯಾಂಡ್, ಫ್ರಾನ್ಸ್, ಜಪಾನ್ ದೇಶಗಳಲ್ಲಿ ಬಹುತ್ವ ಇದೆ, ಪ್ರಜಾಪ್ರಭುತ್ವ ವ್ಯವಸ್ಥೆ ಇದೆ, ಕಾನೂನು ಸುವ್ಯವಸ್ಥೆ ಗಟ್ಟಿಯಾಗಿದೆ ಹೀಗಾಗಿ ಇವು ಅಭಿವೃದ್ಧಿ ಸಾಧಿಸಿವೆ. ಆಫ್ರಿಕಾದ ಹಲವು ದೇಶಗಳು, ಆಫ್ಘಾನಿಸ್ತಾನ, ಪಾಕಿಸ್ತಾನ ದೇಶಗಳಲ್ಲಿ ಒಂದೇ ಧರ್ಮವನ್ನು ಹೊಂದಿದ್ದರೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಕಾರಣದಿಂದ ಅಭಿವೃದ್ಧಿಯ ಹಾದಿಯಲ್ಲಿ ಹಿಂದುಳಿದಿವೆ.

ಭಾರತ ಬಹು ಸಂಸ್ಕೃತಿಯ ದೇಶ. ಇಲ್ಲಿ ಧಾರ್ಮಿಕ ವಿಷಯಗಳನ್ನು, ಸಮಾಜದ ಶಾಂತಿ ಕದಡುವ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದರೆ ದೇಶ ಅಭಿವೃದ್ಧಿ ಆಗಲ್ಲ. ರಾಜ್ಯದ ಉನ್ನತ ಶಿಕ್ಷಣದಲ್ಲಿ ಒಟ್ಟು ನೋಂದಣಿ ದರ ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಸಾಕಷ್ಟು ಹಿಂದಿದೆ. ದಕ್ಷಿಣ ಭಾರತದ ಸರಾಸರಿ ದರ 35% ಇದ್ದರೆ, ಇದರಲ್ಲಿ ರಾಜ್ಯದ ದರ 32.2% ಇದೆ, ತಮಿಳುನಾಡು 51.4% ಇದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕಿ, ಉದ್ಯೋಗಾವಕಾಶಗಳು ಹೆಚ್ಚಾದರೆ ಆಗ ಜನರಲ್ಲಿ ಕೊಳ್ಳುವ ಸಾಮರ್ಥ್ಯ ವೃದ್ಧಿಯಾಗುತ್ತೆ, ಇದರಿಂದ ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ, ತನ್ಮೂಲಕ ಜಿಡಿಪಿ ಬೆಳವಣಿಗೆ ಹೊಂದಿ ದೇಶ, ರಾಜ್ಯ ಆರ್ಥಿಕವಾಗಿ ಬೆಳವಣಿಗೆ ಆಗುತ್ತದೆ.

ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗ ಸಂವಿಧಾನಕ್ಕೆ ತಿದ್ದುಪಡಿ ತಂದು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಸಂವಿಧಾನದ ಮೂರನೆ ಭಾಗಕ್ಕೆ ಸೇರಿಸಿದರು. ಒಬ್ಬ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತನಾದರೆ ಅದು ಸಮಾಜಕ್ಕೆ, ರಾಜ್ಯಕ್ಕೆ, ದೇಶಕ್ಕೆ ಆದ ಅನ್ಯಾಯ. ಈ ಅನ್ಯಾಯದ ಪಾಪವನ್ನು ನಾವು ಹೊರಬೇಕಾಗುತ್ತದೆ. ನಮ್ಮ ಪಕ್ಷದ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಸರ್ಕಾರದ ಬಳಿ ಕಳೆದ ಎರಡೂವರೆ ವರ್ಷಗಳಲ್ಲಿ ಸೃಷ್ಟಿಯಾದ ಉದ್ಯೋಗ ಮತ್ತು ಬಂದಿರುವ ಬಂಡವಾಳದ ಬಗ್ಗೆ ಮಾಹಿತಿ ಕೇಳಿದ್ದರು. ಅದಕ್ಕೆ ಸರ್ಕಾರ ಯಾವುದೇ ಬಂಡವಾಳ ಹೊಸದಾಗಿ ರಾಜ್ಯಕ್ಕೆ ಬಂದಿಲ್ಲ ಮತ್ತು ಒಂದೇ ಒಂದು ಉದ್ಯೋಗ ಸೃಷ್ಟಿ ಆಗಿಲ್ಲ ಎಂಬ ಉತ್ತರ ನೀಡಿದೆ. ಇದು ಬಿಜೆಪಿಯವರ ಸಾಧನೆ.

ಸುಮಾರು ಇಪ್ಪತ್ತು ಸಾವಿರ ಉದ್ಯೋಗ ಸೃಷ್ಟಿ ಮಾಡುತ್ತಿದ್ದ ಓಲಾ ಬೈಕ್ಸ್ ಮತ್ತು ಟಾಟಾ ಎಲೆಕ್ಟ್ರಾನಿಕ್ ರಾಜ್ಯದಿಂದ ತಮಿಳುನಾಡಿಗೆ ಹೋಯಿತು‌. ಕಾರಣ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪ್ರಶಸ್ತವಾದ ವಾತಾವರಣ ಇರಲಿಲ್ಲ. ಸಮಾಜದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಇಲ್ಲದಿರುವುದು ಈ ನಷ್ಟಕ್ಕೆ ಕಾರಣ. ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಜಾರಿ ಪೂರ್ವದಲ್ಲಿ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು 11 ಕೋಟಿ ಉದ್ಯೋಗಗಳನ್ನು ನೀಡಿದ್ದವು. ಇದರಲ್ಲಿ ಈಗ ಸುಮಾರು 60% ಕೈಗಾರಿಕೆಗಳು ಬಂದ್ ಆಗಿ, ಇಂದು ಎರಡೂವರೆ ಕೋಟಿ ಉದ್ಯೋಗ ಮಾತ್ರ ಉಳಿದಿದೆ.

ದೇಶದ ಯುವಕ ಯುವತಿಯರ ಸರಾಸರಿ ವಯಸ್ಸು 28.3℅, ರಾಜ್ಯದಲ್ಲಿ ಪದವಿ ಪಡೆದ ಯುವತಿಯರಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇ. 40, ಯುವಕರ ನಿರುದ್ಯೋಗ ಪ್ರಮಾಣ 22% ಇದೆ. ರಾಜ್ಯದಲ್ಲಿನ 6.66 ಕೋಟಿ ಜನರಲ್ಲಿ 70 ವರ್ಷ ಮೇಲ್ಪಟ್ಟವರು 76.06 ಲಕ್ಷ ಜನರಿದ್ದಾರೆ. ಇವರ ಸಂಖ್ಯೆ 2030 ಕ್ಕೆ 1.06 ಕೋಟಿ ಆಗಲಿದೆ. 18 ರಿಂದ 23 ವಯಸ್ಸಿವರು ಈಗ 76.06 ಲಕ್ಷ ಜನರಿದ್ದಾರೆ, ಇವರ ಸಂಖ್ಯೆ 2030 ಕ್ಕೆ 62 ಲಕ್ಷಕ್ಕೆ ಇಳಿಕೆಯಾಗಲಿದೆ. ವರ್ಷ ಕಳೆದಂತೆ ಯುವ ಜನರ ಸಂಖ್ಯೆ ಕುಸಿತ ಕಾಣುತ್ತಿದೆ, ಇದಕ್ಕೆ ಮುಖ್ಯ ಕಾರಣ ಉದ್ಯೋಗ ಮತ್ತು ಶಿಕ್ಷಣ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗುತ್ತಿರುವುದು.

ಬಹು ಸ್ವರೂಪದ ಬಡತನಕ್ಕೆ ಸಂಬಂಧಿಸಿದಂತೆ ನೀತಿ ಆಯೋಗದ ಸಮೀಕ್ಷೆಯೊಂದರ ಪ್ರಕಾರ ಕೇರಳ 0.7%, ತಮಿಳುನಾಡು 4.9%, ತೆಲಂಗಾಣ 13.7%, ಆಂದ್ರ ಪ್ರದೇಶ 12.3%, ಕರ್ನಾಟಕ 13.2% ಬಡತನ ಇದೆ. ಕರ್ನಾಟಕ ಬೇರೆಲ್ಲಾ ದಕ್ಷಿಣದ ರಾಜ್ಯಗಳಿಗಿಂತ ಹೆಚ್ಚು ಬಡತನವನ್ನು ಹೊಂದಿದೆ. ಗುಜರಾತ್ 18.6%, ಉತ್ತರ ಪ್ರದೇಶದಲ್ಲಿ 37.8% ಬಡತನ ಇದೆ. ಇದು ಉತ್ತರ ಪ್ರದೇಶ, ಗುಜರಾತ್ ಮಾದರಿ. ಇದು ನಮಗೆ ಬೇಕ?

ಪ್ರಜಾವಾಣಿ ಪತ್ರಿಕೆಯಲ್ಲಿ ಮಾರ್ಚ್ 7 ರಂದು ಪೊಲೀಸ್ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಒಂದು ವರದಿ ಪ್ರಸಾರವಾಗಿದೆ. ಈ ವರದಿಗೆ ನಿವೃತ್ತ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಎಸ್.ಟಿ ರಮೇಶ್ ಎಂಬ ನಿವೃತ್ತ ಡಿಜಿಪಿ ಯೊಬ್ಬರು “ಜಾತಿ, ಧರ್ಮ ರಹಿತವಾದ ಪೊಲೀಸ್ ಇಲಾಖೆ ಇತ್ತೀಚಿನ ದಿನಗಳಲ್ಲಿ ದಿಕ್ಕು ತಪ್ಪಿದೆ, ರಾಜಕಾರಣಿಗಳ ಕಾನೂನು ಬಾಹಿರ ಹಸ್ತಕ್ಷೇಪದಿಂದ ಅಧಿಕಾರ ದುರುಪಯೋಗವಾಗುತ್ತಿದ್ದು ರಕ್ಷಣೆ ಸಿಗದೆ ಜನ ಒದ್ದಾಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಡಾ. ಡಿ.ವಿ ಗುರು ಪ್ರಸಾದ್ ಅವರು ರಾಜಕಾರಣಿಗಳು ಮಿನಿಟ್ಸ್ ಹಾಗೂ ಜಾತಿ ಆಧಾರದಲ್ಲಿ ವರ್ಗಾವಣೆ ನಡೆಸದೆ ದಕ್ಷತೆ ಹಾಗೂ ಅರ್ಹತೆಗಳನ್ನು ಮಾನದಂಡವಾಗಿ ಇಟ್ಟುಕೊಂಡರೆ ವ್ಯವಸ್ಥೆ ಬದಲಾಗುತ್ತದೆ ಎಂದು ಹೇಳಿದ್ದಾರೆ. ಹೋಟೆಲ್ ನ ಮೆನುವಿನಲ್ಲಿ ತಿಂಡಿ ಬೆಲೆ ಹಾಕಿದಂತೆ ಅಧಿಕಾರಿಗಳ ವರ್ಗಾವಣೆಗೆ ದರ ನಿಗದಿ ಮಾಡಲಾಗಿದೆ ಎಂದು ಪ್ರಜಾವಾಣಿ ಪತ್ರಿಕೆಯವರು ಹೇಳಿದ್ದಾರೆ. ಪಿಎಸ್‌ಐ ಗೆ 10-30 ಲಕ್ಷ, ಇನ್ಸ್‌ಪೆಕ್ಟರ್ ಗೆ ರೂ. 20 ಲಕ್ಷದಿಂದ 1 ಕೋಟಿ ರೂಪಾಯಿ, ಎಸಿಪಿ ಗೆ 25 ಲಕ್ಷದಿಂದ 1 ಕೋಟಿ ರೂಪಾಯಿ, ಡಿವೈಎಸ್‌ಪಿ ಗೆ 25 ಲಕ್ಷದಿಂದ 1 ಕೋಟಿ ರೂಪಾಯಿ, ಡಿಸಿಪಿ ಹುದ್ದೆಗೆ 1-5 ಕೋಟಿ ರೂಪಾಯಿ ಅಂತ ಲಂಚ ನಿಗದಿ ಮಾಡಲಾಗಿದೆ. ಇಂಥ ಅಧಿಕಾರಿಗಳಿಂದ ಕಾನೂನು ಸುವ್ಯವಸ್ಥೆ ನಿರೀಕ್ಷೆ ಮಾಡಬಹುದ? ಡಿಸೆಂಬರ್ 4 ರಂದು ಗೃಹ ಸಚಿವರು ಶಿವಮೊಗ್ಗದಲ್ಲಿ ಪೊಲೀಸರು ಲಂಚ ತಿಂದು ನಾಯಿ ತರ ಬಿದ್ದಿದ್ದಾರೆ ಎಂದು ಹೇಳಿದ್ದರು. ಅಂದರೆ ಇಲಾಖೆಯ ಭ್ರಷ್ಟಾಚಾರವನ್ನು ಸ್ವತಃ ಸಚಿವರೇ ಒಪ್ಪಿಕೊಂಡಿದ್ದಾರೆ ಎಂದಾಯಿತು.

ಈ ಹಿಂದೆ ಮೈಸೂರಿನಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಾಗ ನಾವು ಗೃಹ ಸಚಿವರ ವೈಫಲ್ಯದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅವರು ಕಾಂಗ್ರೆಸ್ ನವರು ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾರೆ ಎಂಬ ಅತ್ಯಂತ ಬೇಜವಾಬ್ದಾರಿಯುತವಾದ ಹೇಳಿಕೆ ನೀಡಿದ್ದರು, ಮಹಿಳಾ ಸಂಘಟನೆಗಳು ಅತ್ಯಾಚಾರ ವಿರೋಧಿಸಿ ಪ್ರತಿಭಟನೆ ನಡೆಸಿದ ಮೇಲೆ ಆ ಯುವತಿ ಅಷ್ಟು ಹೊತ್ತಿನಲ್ಲಿ ಅಲ್ಲಿಗೇಕೆ ಹೋಗಿದ್ದು? ಎಂದು ಸಚಿವರೇ ಪ್ರಶ್ನೆ ಮಾಡಿದ್ದರು. ನಾಡಿನ ಜನರಿಗೆ ರಕ್ಷಣೆ ನೀಡಬೇಕಾದ ಸ್ಥಾನದಲ್ಲಿ ಕೂತು ಅತ್ಯಾಚಾರಿಗಳಿಗೆ ಬೆನ್ನು ತಟ್ಟುವಂತ ಹೇಳಿಕೆ ನೀಡಲು ನಾಚಿಕೆಯಾಗಬೇಕು.

Tags: ‌ ಸಿದ್ದರಾಮಯ್ಯBJPCongress PartyCovid 19ಎಚ್ ಡಿ ಕುಮಾರಸ್ವಾಮಿದೇಶ ಅಭಿವೃದ್ಧಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಶಾಂತಿಸಿದ್ದರಾಮಯ್ಯಸುವ್ಯವಸ್ಥೆ ಇಲ್ಲದ ರಾಜ್ಯ
Previous Post

ದೇವಾಲಯದ ಸುತ್ತ ಮುತ್ತ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶವಿಲ್ಲ : ಕರ್ನಾಟಕ ಸರ್ಕಾರ

Next Post

ಇನ್ನೂ ಪುನರುಜ್ಜೀವನಗೊಳ್ಳದ ಗಂಗೆ ; ಇತರೆ ನದಿ ದಡಗಳ ಅರಣ್ಯೀಕರಣ ಯೋಜನೆಗೆ ಮುಂದಾದ ಕೇಂದ್ರ!

Related Posts

ಸಿಎಂ ನಿವಾಸದಲ್ಲಿ ಮಹತ್ವದ ಸಭೆ: ಸಭಾಪತಿ ಸ್ಥಾನ ತ್ಯಾಗಕ್ಕೆ ಒಪ್ಪಿದ್ರಾ ಬಸವರಾಜ್‌ ಹೊರಟ್ಟಿ?
Top Story

ಸಿಎಂ ನಿವಾಸದಲ್ಲಿ ಮಹತ್ವದ ಸಭೆ: ಸಭಾಪತಿ ಸ್ಥಾನ ತ್ಯಾಗಕ್ಕೆ ಒಪ್ಪಿದ್ರಾ ಬಸವರಾಜ್‌ ಹೊರಟ್ಟಿ?

by ಪ್ರತಿಧ್ವನಿ
August 6, 2026
0

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ್‌ ಹೊರಟ್ಟಿ ಅವರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳು ತೀವ್ರಗೊಂಡಿವೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಿವಾಸದಲ್ಲಿ ನಿನ್ನೆ ತಡರಾತ್ರಿ...

Read moreDetails
ರೇಣುಕಾಸ್ವಾಮಿ ಕೊ* ಕೇಸ್‌ಗೆ ಬಿಗ್ ಟ್ವಿಸ್ಟ್: ಕೋರ್ಟ್‌ಗೆ ಪ್ರದೋಷ್ ಹೊಸ ಅರ್ಜಿ..ದರ್ಶನ್‌ಗೆ ಸಂಕಷ್ಟ?

ರೇಣುಕಾಸ್ವಾಮಿ ಕೊ* ಕೇಸ್‌ಗೆ ಬಿಗ್ ಟ್ವಿಸ್ಟ್: ಕೋರ್ಟ್‌ಗೆ ಪ್ರದೋಷ್ ಹೊಸ ಅರ್ಜಿ..ದರ್ಶನ್‌ಗೆ ಸಂಕಷ್ಟ?

August 6, 2026
‘ನಿಮ್ಮ ಮನೆ, ದೇವಾಲಯದಂತೆ ಈ ಸರ್ಕಾರವನ್ನೂ ಕಾಪಾಡಿ’; ಅರ್ಚಕರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ

‘ನಿಮ್ಮ ಮನೆ, ದೇವಾಲಯದಂತೆ ಈ ಸರ್ಕಾರವನ್ನೂ ಕಾಪಾಡಿ’; ಅರ್ಚಕರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ

August 6, 2026
ಬರ ಎದುರಿಸಲು ಹೀಗೆ ಸಜ್ಜಾಗಿ: ರೈತರು ಮತ್ತು ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಖಡಕ್ ಸೂಚನೆ

ಬರ ಎದುರಿಸಲು ಹೀಗೆ ಸಜ್ಜಾಗಿ: ರೈತರು ಮತ್ತು ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಖಡಕ್ ಸೂಚನೆ

August 6, 2026
ಮಹಿಳೆಯರ ಆರೋಗ್ಯಕ್ಕೆ ರಾಜ್ಯ ಸರ್ಕಾರದ ಹೊಸ ಹೆಜ್ಜೆ: ‘ಋತುತಾರೆ’ ಯೋಜನೆಗೆ ಚಾಲನೆ

ಮಹಿಳೆಯರ ಆರೋಗ್ಯಕ್ಕೆ ರಾಜ್ಯ ಸರ್ಕಾರದ ಹೊಸ ಹೆಜ್ಜೆ: ‘ಋತುತಾರೆ’ ಯೋಜನೆಗೆ ಚಾಲನೆ

August 5, 2026
Next Post
ಇನ್ನೂ ಪುನರುಜ್ಜೀವನಗೊಳ್ಳದ ಗಂಗೆ ; ಇತರೆ ನದಿ ದಡಗಳ ಅರಣ್ಯೀಕರಣ ಯೋಜನೆಗೆ ಮುಂದಾದ ಕೇಂದ್ರ!

ಇನ್ನೂ ಪುನರುಜ್ಜೀವನಗೊಳ್ಳದ ಗಂಗೆ ; ಇತರೆ ನದಿ ದಡಗಳ ಅರಣ್ಯೀಕರಣ ಯೋಜನೆಗೆ ಮುಂದಾದ ಕೇಂದ್ರ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada