ಕಾಶ್ಮೀರ್ ಫೈನ್ಸ್ ಆಯ್ತು, ಈಗ ‘ಲಖಿಂಪುರ್ ಫೈಲ್ಸ್’ ಮಾಡಿ. ಈ ಹಿಂಸಾಚಾರದ ಬಗ್ಗೆಯೂ ಜನರಿಗೆ ತಿಳಿಯಲಿ ಎಂದು ಸಮಾಜವಾದಿ ಪಕ್ಷದ (SP) ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಉತ್ತರ ಪ್ರದೇಶದ ಸಿತಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲೇಶ್, ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ವಿಜಯವಲ್ಲದಿದ್ದರೂ ತಮ್ಮ ಪಕ್ಷ ‘ನೈತಿಕ ವಿಜಯ’ ದಾಖಲಿಸಿದೆ. ಇನ್ನು ‘ಕಾಶ್ಮೀರ್ ಫೈಲ್ಸ್ ಮಾಡಲು ಸಾಧ್ಯವಾದರೆ ಲಖಿಂಪುರ್ ಫೈಲ್ಸ್ ಕೂಡ ಮಾಡಬಹುದು. ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆಯೂ ಜನರು ತಿಳಿದುಕೊಳ್ಳಬೇಕು’ ಎಂದು ಹೇಳಿದರು.
ಕಳೆದ ವರ್ಷ ಅಕ್ಟೋಬರ್ʼನಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿಯೇ ರೈತರ ಮೇಲೆ ಕಾರು ಹತ್ತಿಸಿದ್ದು, ನಾಲ್ವರು ರೈತರು ಸಾಯಿಸಿದರು.
2017ರ ಚುನಾವಣೆಯಲ್ಲಿ 47 ಸ್ಥಾನಗಳನ್ನು ಹೊಂದಿದ್ದ ಅಖಿಲೇಶ್ ಇತ್ತೀಚಿನ ಚುನಾವಣೆಯಲ್ಲಿ 111 ಕ್ಕೆ ಹೆಚ್ಚಿಸುವಲ್ಲಿ ಯಶಸ್ವಿಯಾದರು. “ಇದು ನಮಗೆ ನೈತಿಕ ಗೆಲುವು” ಎಂದು ಅವರು ಹೇಳಿದರು.

ಬೆಲೆ ಏರಿಕೆ ಮತ್ತು ನಿರುದ್ಯೋಗದಂತಹ ನೈಜ ಸಮಸ್ಯೆಗಳಿಗೆ ಬಿಜೆಪಿ ಸರ್ಕಾರ ಇನ್ನೂ ಉತ್ತರಿಸಬೇಕಾಗಿದೆ ಎಂದು ಎಸ್ಪಿ ನಾಯಕ ಹೇಳಿದರು.
ಕಳೆದ ವರ್ಷ ಅಕ್ಟೋಬರ್ನಲ್ಲಿ ಲಖೀಂಪುರ್ನಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಮತ್ತು ಸ್ಥಳೀಯ ಲೇಖಕರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು, ಅಜಯ್ ಮಿಶ್ರಾ ಅವರ ಹೇಳಿಕೆಗಳ ವಿರುದ್ಧ ನೂರಾರು ರೈತರು ಪ್ರತಿಭಟನೆ ನಡೆಸಿದರು.
ಈ ಘಟನೆ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದವು. ನಂತರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಆಶಿಶ್ ಮಿಶ್ರಾ ಅವರಿಗೆ ಅಲಹಾಬಾದ್ ಹೈಕೋರ್ಟ್ ಕಳೆದ ತಿಂಗಳು ಜಾಮೀನು ನೀಡಿತ್ತು.
ರೈತರ ಹತ್ಯೆಯಿಂದ ಬಿಜೆಪಿ ಭವಿಷ್ಯಕ್ಕೆ ಪೆಟ್ಟು ಬೀಳಬಹುದು ಎಂಬ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಇತ್ತು ಆದರೆ ಇತ್ತೀಚಿನ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ.









