• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ : ರಾಜ್ಯದ 20 ಲಕ್ಷ ಮಕ್ಕಳಿಗೆ ವ್ಯಾಕ್ಸಿನ್!

Any Mind by Any Mind
March 16, 2022
in ಕರ್ನಾಟಕ
0
12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ : ರಾಜ್ಯದ 20 ಲಕ್ಷ ಮಕ್ಕಳಿಗೆ ವ್ಯಾಕ್ಸಿನ್!
Share on WhatsAppShare on FacebookShare on Telegram

ಕೊರೊನಾ ಅಬ್ಬರ ಕಡಿಮೆಯಾದರೂ ಕೂಡ ಮಹಾಮಾರಿಯನ್ನ ಅಲ್ಲಗೆಳೆಯೋ ಹಾಗಿಲ್ಲ. ಯಾವ ಸಂದರ್ಭದಲ್ಲಿ ಬೇಕಾದರೂ ಮತ್ತೊಂದು ಅಲೆಯಾಗಿ ಬಂದು  ಮತ್ತೊಂದು ದುರಂತಕ್ಕೆ ಮುನ್ನುಡಿ ಬರೆಯಬಹುದು.  ಈ ಹಿನ್ನಲೆ ಇವತ್ತಿನಿಂದ ಮಕ್ಕಳಿಗೂ ಕೂಡ ರಾಜ್ಯದಲ್ಲಿ ವ್ಯಾಕ್ಸಿನ್ ನೀಡಲು ಆರಂಭಿಸಿದೆ ಸರ್ಕಾರ. 

ADVERTISEMENT

12 – 14 ವರ್ಷದ ಮಕ್ಕಳ ಲಸಿಕಾ ಅಭಿಯಾನಕ್ಕೆ ಚಾಲನೆ!

ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಅದೆಷ್ಟೋ ಕುಟುಂಬಗಳು ತಮ್ಮರನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆದುಕೊಳ್ಳುತ್ತಿದೆ. ಸೋಂಕಿನ ವಕ್ರ ದೃಷ್ಟಿಯಿಂದ  ನಲುಗಿದ ಕುಟುಂಬಗಳು ಕಳೆದು ಹೋದ ಬದುಕು ಮರಳಿ ಪಡೆಯಲು ಪರದಾಡ್ತಿದೆ. ಇಂತಹ ಹೊತ್ತಲ್ಲಿ  ಕೊರೊನಾ ನಾಲ್ಕನೇ ಅಲೆಯ ಮುನ್ಸೂಚನೆಯೂ ಸಿಕ್ಕಿದ್ದು ಅನೇಕರ ಎದೆ ಬಡಿತ ಜೋರಾಗಿದೆ. ಈ ಮಧ್ಯೆಯೇ Precaution is better then cure ಅನ್ನೋ ಹಾಗೇ ಕೇಂದ್ರ ಆರೋಗ್ಯ ಇಲಾಖೆ ಇಂದಿನಿಂದ ದೇಶದಲ್ಲಿರುವ  12ರಿಂದ 14 ವರ್ಷದ ವಯಸ್ಸಿನ  ಮಕ್ಕಳು  ಲಸಿಕೆ  ಪಡೆಯಲು ಅರ್ಹ ಎಂಬ ನಿಟ್ಟಿನಲ್ಲಿ ಲಸಿಕೆ ನೀಡಲು ಆರಂಭಿಸಿದೆ. ರಾಜ್ಯದಲ್ಲಿಯೂ ಕೂಡ ಆರೋಗ್ಯ ಸಚಿವ ಸುಧಾಕರ್ ಹಾಗೂ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಅಧಿಕೃತವಾಗಿ ಲಸಿಕಾ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದು, ಮಕ್ಕಳಿಕೆ ಲಸಿಕೆ ಹಾಕಿಸುವಂತೆ ಪೋಷಕರಲ್ಲಿ ಮನವಿ ಮಾಡಿದ್ದಾರೆ. 

ರಾಜ್ಯದಲ್ಲಿ 12 – 14 ವರ್ಷದ ಒಟ್ಟು 20 ಲಕ್ಷ‌ ಮಕ್ಕಳು‌ ಲಸಿಕೆ ಪಡೆಯಲು ಅರ್ಹರು!

ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಕಾಲೇಜಿನಲ್ಲಿ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ಇದರ ಜೊತೆ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯರಿಗೂ ಬೂಸ್ಟರ್ ಡೋಸ್ ನೀಡುವ ಅಭಿಯಾನಕ್ಕೂ ಕೂಡ ಚಾಲನೆ ಸಿಕ್ಕಿದೆ. ರಾಜ್ಯದ ಸುಮಾರು 20 ಲಕ್ಷ ಮಕ್ಕಳಿಗೆ ಹೈದರಾಬಾದ್ ಬಯೊಲಾಜಿಕಲ್ ಸಂಸ್ಥೆ ಅಭಿವೃದ್ದಿ ಪಡಿಸಿರುವ ಕೊರ್ಬಿವ್ಯಾಕ್ಸ್ ಲಸಿಕೆ ಕೊಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿಗೆ. ರಾಜಧಾನಿ ಬೆಂಗಳೂರಿನಲ್ಲಿ ಸುಮಾರು  6-7 ಲಕ್ಷ ಮಕ್ಕಳನ್ನು ಬಿಬಿಎಂಪಿ ಗುರುತಿಸಿದ್ದು ಎಲ್ಲಾ ಮಕ್ಕಳಿಗೂ ವ್ಯಾಕ್ಸೀನ್ ನೀಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ.

ಜೀವಾಮೃತವನ್ನ ಪಡೆಯಲು ಮಕ್ಕಳು ಕೋವಿಡ್ ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ರಿಜಿಸ್ರ್ಟೇಶನ್ ಮಾಡಿಕೊಳ್ಳಬೇಕು.  ಎಲ್ಲಾ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೂಡ ಲಸಿಕೆ ಲಭ್ಯವಿರಲಿದೆ. ಮೊದಲ ಡೋಸ್ ಪಡೆದ 28 ದಿನದ ನಂತರ 2ನೇ ಡೋಸ್ ವ್ಯಾಕ್ಸಿನೇಷನ್ ಪಡೆದು ಕೊಳ್ಳಬೇಕು. ಇದು ವೈರಾಣುವಿನ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶಾಲೆ ಬಿಟ್ಟ ಮಕ್ಕಳನ್ನು ಕೂಡ ಹುಡುಕಿ ಲಸಿಕೆ ಹಾಕಿಸಲಾಗುವುದು ಅಂತ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಹೇಳಿದ್ದಾರೆ. 

60 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್!

ಇನ್ನು ಮಕ್ಕಳ ಜೊತೆ ಇವತ್ತಿನಿಂದ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯರಿಗೂ ಕೂಡ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಈ ಹಿಂದೆ ಅನಾರೋಗ್ಯದಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಅವಕಾಶವಿತ್ತು. ಈಗ 60 ವರ್ಷ ಮೇಲ್ಪಟ್ಟ ಎಲ್ಲರೂ ಕೂಡ ಲಸಿಕೆಯನ್ನು ಪಡೆದು ಕೊಳ್ಳಬಹುದು. ಒಟ್ಟಿನಲ್ಲಿ ರೂಪಾಂತರಿಯ ಆರ್ಭಟ ಚೀನಾದಲ್ಲಿ ಮತ್ತೆ ಶುರುವಾಗಿರುವ ಹೊತ್ತಲ್ಲಿ ರಾಜ್ಯದಲ್ಲಿ ಕೂಡ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಮಕ್ಕಳಿಗೆ ಹಾಗೂ ಹಿರಿಯರಿಗೆ ವ್ಯಾಕ್ಸಿನ್  ಕೊಡಮಾಡಲಾಗುತ್ತಿದೆ.

Tags: Covid 19ಉಚಿತ ಲಸಿಕೆಕರೋನಾಕರೋನಾ ಲಸಿಕೆಕೊವ್ಯಾಕ್ಸಿನ್ಕೊವ್ಯಾಕ್ಸಿನ್ ದರೋಡೆಕೋವಿಡ್ ಲಸಿಕೆಕೋವಿಡ್‌ ಲಸಿಕೆಕೋವಿಡ್ ವ್ಯಾಕ್ಸಿನ್ಕೋವಿಡ್-19ಕೋವಿಡ್‌-19 ಲಸಿಕೆಮಕ್ಕಳ ಲಸಿಕೆಮಕ್ಕಳಿಗೂ ಲಸಿಕೆಮಕ್ಕಳಿಗೆ ವ್ಯಾಕ್ಸಿನ್ಲಸಿಕೆಲಸಿಕೆ ಕಾರ್ಯಕ್ರಮಲಸಿಕೆ ಖರೀದಿಲಸಿಕೆ ಪ್ರಮಾಣ ಪತ್ರವ್ಯಾಕ್ಸಿನ್‌ ಸರ್ಟಿಫಿಕೇಟ್‌
Previous Post

ಹಿಜಾಬ್‌ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ ತೀರ್ಪಿನ ಐದು ಪ್ರಮುಖ ಅಂಶಗಳು

Next Post

ಕಾಶ್ಮೀರ್ ಫೈಲ್ಸ್ ಆಯ್ತು ಈಗ ‘ಲಖಿಂಪುರ್ ಫೈಲ್ಸ್’ ಮಾಡಿ : ಅಖಿಲೇಶ್ ಯಾದವ್

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
ಕಾಶ್ಮೀರ್ ಫೈಲ್ಸ್ ಆಯ್ತು ಈಗ ‘ಲಖಿಂಪುರ್ ಫೈಲ್ಸ್’ ಮಾಡಿ : ಅಖಿಲೇಶ್ ಯಾದವ್

ಕಾಶ್ಮೀರ್ ಫೈಲ್ಸ್ ಆಯ್ತು ಈಗ 'ಲಖಿಂಪುರ್ ಫೈಲ್ಸ್' ಮಾಡಿ : ಅಖಿಲೇಶ್ ಯಾದವ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada