• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸಿರಿಯನ್ ಸೈನಿಕರನ್ನು ಬಳಸಿಕೊಳ್ಳುತ್ತಿದೆಯೇ ರಷ್ಯಾ?

ಫಾತಿಮಾ by ಫಾತಿಮಾ
March 9, 2022
in ವಿದೇಶ
0
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸಿರಿಯನ್ ಸೈನಿಕರನ್ನು ಬಳಸಿಕೊಳ್ಳುತ್ತಿದೆಯೇ ರಷ್ಯಾ?
Share on WhatsAppShare on FacebookShare on Telegram

ರಷ್ಯಾ ಯುಕ್ರೇನ್ ಯುದ್ಧ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಹೊಸ ಬೆಳವಣಿಗೆಯಲ್ಲಿ, ಕೈವ್ನಲ್ಲಿನ ಸರ್ಕಾರವನ್ನು ಉರುಳಿಸಲು ನಗರ ಯುದ್ಧದಲ್ಲಿ ಅನುಭವಿಗಳಾಗಿರುವ ಸಿರಿಯನ್ ಸೈನಿಕರನ್ನುಪುಟಿನ್ ಬಳಸುತ್ತಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಟಿಸಿದೆ. ಯುಎಸ್ ಅಧಿಕಾರಿಗಳನ್ನು ಉಲ್ಲೇಖಿಸಿರುವ ವರದಿಯು ಕೆಲವು ಸಿರಿಯನ್ನರು ಈಗಾಗಲೇ ರಷ್ಯಾದಲ್ಲಿ ಉಕ್ರೇನ್ ರಾಜಧಾನಿಯ ಮೇಲೆ ದಾಳಿಗೆ ತಯಾರಿ ನಡೆಸುತ್ತಿದ್ದಾರೆ ಎಂದೂ ಹೇಳಿದೆ.

ADVERTISEMENT

“ಉಕ್ರೇನ್ನಲ್ಲಿ ಸಿರಿಯನ್ ಹೋರಾಟಗಾರರ ನಿಯೋಜನೆ, ಸ್ಥಿತಿ ಅಥವಾ ನಿಖರ ಪ್ರಮಾಣದ ಬಗ್ಗೆ ಬೇರೆ ಏನು ತಿಳಿದಿದೆ ಎಂಬುದನ್ನು ವಿವರಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ” ಎಂದು WSJ ವರದಿಯು ಹೇಳಿದೆ.

WSJ ವರದಿಗೆ ಬಿಡೆನ್ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪೆಂಟಗನ್ ವಕ್ತಾರ ಜಾನ್ ಕಿರ್ಬಿ, ಮಾರ್ಚ್ 7 ರ ಸೋಮವಾರ ಪತ್ರಕರ್ತರಿಗೆ ವದಂತಿಗಳನ್ನು ದೃಢಪಡಿಸಿದ್ದು”ರಷ್ಯನ್ನರು ಉಕ್ರೇನ್ನಲ್ಲಿ ತಮ್ಮ ಪಡೆಗಳನ್ನು ಹೆಚ್ಚಿಸಲು ಸಿರಿಯನ್ ಹೋರಾಟಗಾರರನ್ನು ಹುಡುಕುತ್ತಿದ್ದಾರೆ ಎಂದು ನಾವು ಭಾವಿಸುತ್ತೇವೆ ಮತ್ತು ಅದರಲ್ಲಿ ಸತ್ಯವಿದೆ ಎಂದು ನಾವು ನಂಬುತ್ತೇವೆ” ಎಂದು ಕಿರ್ಬಿ ಹೇಳಿರುವುದಾಗಿ ಸಿಬಿಎಸ್ ಉಲ್ಲೇಖಿಸಿದೆ

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಈಗ ಹದಿಮೂರನೇ ದಿನಕ್ಕೆ ಕಾಲಿಟ್ಟಿದೆ ಆದರೆ ಉಕ್ರೇನಿಯನ್ನರು ಉಗ್ರ ಪ್ರತಿರೋಧವನ್ನು ಪ್ರದರ್ಶಿಸಿದ್ದು ರಷ್ಯಾದ ಮುನ್ನಡೆಯನ್ನು ವಿಳಂಬಗೊಳಿಸಿದೆ ಎಂದು ತಜ್ಞರು ಹೇಳುತ್ತಾರೆ. ಯುನೈಟೆಡ್ ಕಿಂಗ್ಡಮ್ನ ರಕ್ಷಣಾ ಸಚಿವಾಲಯ ಸಹ ತನ್ನ ಇತ್ತೀಚಿನ ಗುಪ್ತಚರ ವರದಿಯಲ್ಲಿ, “ರಷ್ಯಾದ ಪಡೆಗಳು ವಾರಾಂತ್ಯದಲ್ಲಿ ಕೆಲವೇ ಕೆಲವು ಪ್ರದೇಶಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ” ಎಂದು ಹೇಳಿದ್ದವು.

ಸಿರಿಯನ್ನರು, ಚೆಚೆನ್ನರು ಮತ್ತು ವ್ಯಾಗ್ನರ್ ಗುಂಪು

2011 ರಿಂದ ಶುರುವಾದ ಸಿರಿಯನ್ ಅಂತರ್ಯುದ್ಧದಲ್ಲಿ ಫ್ರೀ ಸಿರಿಯನ್ ಆರ್ಮಿ ಮತ್ತು ಇತರ ಬಂಡುಕೋರ ಗುಂಪುಗಳ ವಿರುದ್ಧ ಹೋರಾಡಲು ಬಶರ್ ಅಲ್-ಅಸ್ಸಾದ್ ನೇತೃತ್ವದ ಸಿರಿಯನ್ ಸರ್ಕಾರಕ್ಕೆ ಮಿಲಿಟರಿ ಸಹಾಯ ಮಾಡುತ್ತಿರುವ ರಷ್ಯಾ 2015 ರಿಂದಲೂ ಸಿರಿಯಾದಲ್ಲಿ ಪ್ರಭಾವಶಾಲಿಯಾಗಿದೆ.

‘ಡೀರ್ ಎಝೋರ್ 24’ ಎಂಬ ಸಿರಿಯಾ ಮೂಲದ ಸ್ವತಂತ್ರ ಸುದ್ದಿ ವೇದಿಕೆಯು, ರಷ್ಯಾ, ತಲಾ $200 ರಿಂದ $ 300 ರಷ್ಟು ಪಾವತಿಸಿ ಆರು ತಿಂಗಳ ಕಾಲ ಉಕ್ರೇನ್ನಲ್ಲಿ “ಗಾರ್ಡ್” ಆಗಿ ಹೋರಾಡಲು ಸಿರಿಯನ್ನರನ್ನು ಕೂಲಿ ಸೈನಿಕರನ್ನಾಗಿ ನೇಮಿಸಿಕೊಳ್ಳುತ್ತಿದೆ ಎಂದು ವರದಿ ಮಾಡಿದೆ. ಜೊತೆಗೆ ರಾಯಿಟರ್ಸ್ ಸಹ ಈ ಬಗ್ಗೆ ವರದಿ ಮಾಡಿದ್ದು 2020ರಿಂದಲೇ ರಷ್ಯಾ ನೂರಾರು ಸಿರಿಯನ್ ಕೂಲಿ ಸೈನಿಕರನ್ನು ಲಿಬಿಯಾದಲ್ಲಿ ಹೋರಾಡಲು ಬಳಸಿಕೊಳ್ಳುತ್ತಿದರ ಎಂದು ಹೇಳಿದೆ. ಈ ನಡುವೆ ಬ್ರಿಟೀಷ್ ಪತ್ರಿಕೆಯಾದ ಟೈಮ್ಸ್, ವ್ಯಾಗ್ನರ್ ಗ್ರೂಪ್ನ ಕೂಲಿ ಸೈನಿಕರು ಉಕ್ರೇನಿಯನ್ ರಾಜಧಾನಿಯಲ್ಲಿದ್ದಾರೆ ಎಂದು ವರದಿ ಮಾಡಿದೆ.

ಒಟ್ಟಿನಲ್ಲಿ ಇಡೀ ವಿಶ್ವದ ಗಮನವನ್ನು ತನ್ನತ್ತ ಸೆಳೆದಿರುವ ರಷ್ಯಾ ಇತರ ದೇಶದ ಸೈನಿಕರನ್ನೂ ‘ಯುದ್ಧ ಕೂಲಿ’ಗಳಾಗಿ ಬಳಸುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತಾ ಎನ್ನುವ ಆತಂಕ ತಲೆದೋರಿದೆ. ಏಕೆಂದರೆ ಇದೇ ಸಂಪ್ರದಾಯವನ್ನು ಇತರ ದೇಶಗಳು ಸಹ ಮುಂದುವರಿಸಿದರೆ ಏಷ್ಯಾದ ಮತ್ತು ಆಫ್ರಿಕಾದ ಬಡ ದೇಶಗಳ ಮಾನವ ಸಂಪನ್ಮೂಲವನ್ನು ತಮ್ಮ ದೇಶದ ಪರವಾಗಿ ಕೂಲಿಗಳಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಹಾಗಾದರೆ ವಸಾತುಶಾಹಿ ಮತ್ತು ವರ್ಣ ಭೇದ ನೀತಿ ಉಚ್ಛ್ರಾಯ ಸ್ಥಿತಿಯಲ್ಲಿ ಸಮಾಜದಲ್ಲಿ ಬೇರೂರಿದ್ದ ಗುಲಾಮಿ ಪದ್ಧತಿ ಮತ್ತೊಂದು ರೀತಿಯಲ್ಲಿ ಮರುಕಳಿಸಿದಂತಾಗುವುದರಲ್ಲಿ ಸಂಶಯವಿಲ್ಲ.

Tags: BJPCongress PartyCovid 19ಉಕ್ರೇನ್ಉಕ್ರೇನ್ - ರಷ್ಯಾಉಕ್ರೇನ್‌ ಅಧ್ಯಕ್ಷಉಕ್ರೇನ್ ಗಡಿ ದಾಟಿಉಕ್ರೇನ್ ಬಿಕ್ಕಟ್ಟುಉಕ್ರೇನ್ ಮೇಲೆ ರಷ್ಯಾ ದಾಳಿಉಕ್ರೇನ್-ರಷ್ಯಾಕರೋನಾಕೋವಿಡ್-19ಬಿಜೆಪಿರಷ್ಯಾರಷ್ಯಾ - ಉಕ್ರೇನ್ ಬಿಕ್ಕಟ್ಟುರಷ್ಯಾ ಅಧ್ಯಕ್ಷ ಪುಟಿನ್ರಷ್ಯಾ ಉಕ್ರೇನ್ ಬಿಕ್ಕಟ್ಟುರಷ್ಯಾ ಉಕ್ರೇನ್‌ ಸಮರರಷ್ಯಾ ಮತ್ತು ಉಕ್ರೇನ್ರಷ್ಯಾ-ಉಕ್ರೇನ್‌ ಸಮರ
Previous Post

ಮತ ಎಣಿಕೆ : ಮಧ್ಯಪ್ರವೇಶಿಸಲು ಸುಪ್ರೀಂ ನಕಾರ ; ವಿಪಕ್ಷಗಳಿಂದ ಅಕ್ರಮದ ಆರೋಪ

Next Post

ಗೋವಾ ಚುನಾವಣೆ ಫಲಿತಾಂಶ | ಕಾಂಗ್ರೆಸ್‌ ಬಳಿಕ, ತನ್ನ ಅಭ್ಯರ್ಥಿಗಳನ್ನು ಕಾವಲು ಕಾಯಲು ಮುಂದಾದ ಎಎಪಿ!

Related Posts

ಆಕ್ರಮಣಕಾರಿ ಆಳ್ವಿಕೆಯತ್ತ ಟ್ರಂಪ್ 2.0
ವಿದೇಶ

ಭಾರತ-ಪಾಕಿಸ್ತಾನ ಯುದ್ಧ ತಡೆದದ್ದು ನನ್ನಿಂದಲೇ: ಟ್ರಂಪ್ ಪುನಃ ಹೇಳಿದ್ದೇನು ?

by ಪ್ರತಿಧ್ವನಿ
April 7, 2026
0

ಇರಾನ್ ಜೊತೆಗಿನ ಉದ್ವಿಗ್ನ ಪರಿಸ್ಥಿತಿ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ–ಪಾಕಿಸ್ತಾನ ಸಂಬಂಧಗಳ ಕುರಿತು ಹಳೆಯ ಹೇಳಿಕೆಯನ್ನು ಮತ್ತೆ ಮುಂದಿಟ್ಟಿದ್ದಾರೆ. ತಮ್ಮ ಮಧ್ಯಸ್ಥಿಕೆಯಿಂದಲೇ ಭಾರತ...

Read moreDetails
ಅಕ್ರಮ ವಲಸಿಗರಿಗೆ ಉಚಿತ ವಿಮಾನ ಟಿಕೆಟ್ ನೀಡಿ ಗಡಿಪಾರು ಮಾಡಲು ಆರಂಬಿಸಿದ ಟ್ರಂಪ್..

ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ: “ಒಪ್ಪಂದವಿಲ್ಲದಿದ್ದರೆ ಈಡೀ ದೇಶವೇ ನಾಶ”

April 6, 2026
ಇರಾನ್–ಇಸ್ರೇಲ್ ಉದ್ವಿಗ್ನತೆ: ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ನಷ್ಟ, ಶಾಂತಿಗೆ ಒತ್ತಾಯ

ಇರಾನ್–ಇಸ್ರೇಲ್ ಉದ್ವಿಗ್ನತೆ: ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ನಷ್ಟ, ಶಾಂತಿಗೆ ಒತ್ತಾಯ

April 4, 2026
ಮೋದಿಗೆ ಅಂಬಾನಿ, ಅದಾನಿಗಳ ಬ್ಯುಸಿನೆಸ್ ಮುಖ್ಯವಾದಾಗ ದೇಶ ಹೇಗೆ ಉದ್ಧಾರವಾದೀತು..?

ಮೋದಿಗೆ ಅಂಬಾನಿ, ಅದಾನಿಗಳ ಬ್ಯುಸಿನೆಸ್ ಮುಖ್ಯವಾದಾಗ ದೇಶ ಹೇಗೆ ಉದ್ಧಾರವಾದೀತು..?

March 31, 2026
ಡಾಲರ್ ಎದುರು ರೂಪಾಯಿ ಭಾರೀ ಕುಸಿತ: ಆರ್‌ಬಿಐ ತುರ್ತು ಕ್ರಮ

ಡಾಲರ್ ಎದುರು ರೂಪಾಯಿ ಭಾರೀ ಕುಸಿತ: ಆರ್‌ಬಿಐ ತುರ್ತು ಕ್ರಮ

March 30, 2026
Next Post
ಗೋವಾ ಚುನಾವಣೆ ಫಲಿತಾಂಶ | ಕಾಂಗ್ರೆಸ್‌ ಬಳಿಕ, ತನ್ನ ಅಭ್ಯರ್ಥಿಗಳನ್ನು ಕಾವಲು ಕಾಯಲು ಮುಂದಾದ ಎಎಪಿ!

ಗೋವಾ ಚುನಾವಣೆ ಫಲಿತಾಂಶ | ಕಾಂಗ್ರೆಸ್‌ ಬಳಿಕ, ತನ್ನ ಅಭ್ಯರ್ಥಿಗಳನ್ನು ಕಾವಲು ಕಾಯಲು ಮುಂದಾದ ಎಎಪಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada