ಚುನಾವಣಾ ವರ್ಷದಲ್ಲಾದರೂ (Election Year) ಸಿಹಿಸುದ್ದಿ ನಿರೀಕ್ಷೆಯಲ್ಲಿದ್ದವರಿಗೆ, ಮತ್ತೆ ಮತ್ತೆ ಮಳೆಯಾಶ್ರಿತ ಬರಪೀಡಿತ ಜಿಲ್ಲೆಗಳ ಪಾಲಿಗೆ ಮರೀಚಿಕೆಯಾಗುತ್ತಿದೆ ಎಂದು ಶಾಶ್ವತ ನೀರಾವರಿ ಹೋರಾಟದ ಸಮೀತಿ ಅಧ್ಯಕ್ಷ ಆರ್. ಅಂಜನೇಯ ರೆಡ್ಡಿ (Anjaneya Reddy) ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಮ್ಮೆ ಎತ್ತಿನಹೊಳೆಗೆ ಜೋತುಬಿದ್ದ ಬಸವರಾಜ ಬೊಮ್ಮಾಯಿ (Basavaraj Bommai), ಬಯಲುಸೀಮೆಗೆ ಗಾಳಿ ಹರಿಸಲಿರುವ ಎತ್ತಿನಹೊಳೆ ಯೋಜನೆಗೆ ಮತ್ತೆ 3000 ಕೋಟಿ, ಜನಸಾಮಾನ್ಯರ ಆಗ್ರಹಕ್ಕೆ ಎಳ್ಳು ನೀರು ಬಿಟ್ಟ ಬೊಮ್ಮಾಯಿ, ಹುಸಿಯಾದ ತ್ಯಾಜ್ಯ ನೀರಿನ ಮೂರುಹಂತದ ಶುದ್ದೀಕರಣದ ನಿರೀಕ್ಷೆ, ಕೋಲಾರ 2100, ಚಿಕ್ಕಬಳ್ಳಾಪುರ 1800, ಬೆಂಗಳೂರು ಗ್ರಾಮಾಂತರ 1500 ಕೆರಗಳನ್ನು ಹೊಂದಿದ್ದು, ಕೆರೆ / ಕುಂಟೆ / ಕಾಲುವೆಗಳ ಪುನರುಜ್ಜೀವನಕ್ಕೆ ಸಿಗಲಿಲ್ಲ ವಿಶೇಷ ಆರ್ಥಿಕ ಪ್ಯಾಕೇಜ್ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು ಜಲಮಾಲಿನ್ಯ ತಡೆಯಲು ಜಲಮಂಡಳಿಗೆ 1500 ಕೋಟಿ ಕೊಟ್ಟರೂ , ಕೆಸಿ ವ್ಯಾಲಿ ಮತ್ತು ಎಚ್ ಎನ್ ವ್ಯಾಲಿಗಳ ಸಂಸ್ಕರಣಾ ಘಟಕಗಳನ್ನು ಮೂರನೇ ಹಂತದ ಶುದ್ದೀಕರಣಕ್ಕೆ ಉನ್ನತೀಕರಿಸುವ ಪ್ರಸ್ತಾವನೆಯಿಲ್ಲ. ಕೆ ಸಿ ವ್ಯಾಲಿಯ ಮೊದಲ ಹಂತದ ಕೆರೆಗಳನ್ನೇ ತುಂಬಲು ತ್ಯಾಜ್ಯ ನೀರಿನ ಕೊರತೆ, ಅದರಲ್ಲೂ ನೀರಿನ ಗುಣಮಟ್ಟದ ಖಾತ್ರಿ ಇಲ್ಲದಿದ್ದರೂ , ಆಗಲೇ ಎರಡನೇ ಹಂತಕ್ಕೆ ಪೈಪ್ ಲೈನ್ ಅಳವಡಿಸಲು 450 ಕೋಟಿ ಮೀಸಲು ಎಂದಿದ್ದಾರೆ.

ಸುರಕ್ಷಿತ ಕುಡಿಯುವನೀರು ಪೂರೈಸಲು ನಿರ್ಧಿಷ್ಠ ಕಾರ್ಯಕ್ರಮ ಘೋಷಿಸಿಲ್ಲ, ಜಲಮೂಲಗಳ ಮಾಲಿನ್ಯ , ವಿಷಮಯವಾಗುತ್ತಿರುವ ಮಣ್ಣು ತಡೆಗೆ ಕಾರ್ಯಯೋಜನೆ ಇಲ್ಲ, ಅತೀ ಹೆಚ್ಚು ಟೊಮ್ಯಾಟೋ , ಮಾವು ಬೆಳೆಯುವ ಜಿಲ್ಲೆಗಳಿಗೆ ಕೊಯ್ಲೋತ್ತರ ಉಪಉತ್ಪನ್ನ ಕೈಗಾರಿಕೆ ಮತ್ತು ಯಥೇಚ್ಛವಾಗಿ ಹೂವು , ಹಣ್ಣು , ತರಕಾರಿ ಬೆಳೆಯುವ ಜಿಲ್ಲೆಗಳಿಗೆ ಶೈತ್ಯಾಗಾರಗಳ ನಿರ್ಮಾಣದ ಭರವಸೆ ಇಟ್ಟಿದ್ದ ರೈತಾಪಿವರ್ಗಕ್ಕೆ ನಿರಾಸೆಯಾಗಿದೆ ಎಂದಿದ್ದಾರೆ.