ಸಿಎಂ ಬಸವರಾಜ್ ಬೊಮ್ಮಯಿಯವರ (Basavaraj Bommai) ಚೊಚ್ಚಲ ಬಜೆಟ್ ಗೆ ಇಡೀ ರಾಜ್ಯವೇ ಕಾದು ಕುಳಿತಿದೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿಗೆ ಏನೇನು ಎಂಬ ಕುತೂಹಲ ಮೂಡಿಸಿದೆ. ಕೊವೀಡ್ ನಿಂದ ತತ್ತರಿಸಿದ ರಾಜಧಾನಿಗೆ ಈ ಬಾರಿ ಬಂಪರ್ ಕೊಡುಗೆ ಕೊಡ್ತಾರ ಅನ್ನೋ ಪ್ರಶ್ನೆ ಸದ್ಯದ್ದು.
ಬೆಂಗಳೂರು (Bengaluru) ಇಡೀ ದೇಶದ ಗಮನ ಸೆಳೆದ ನಗರ. ಅಂತರಾಷ್ಟ್ರಿಯ ಮಟ್ಟದಲ್ಲಿ ಸಿಲಿಕಾನ್ ಸಿಟಿ (Silicon city) ಎಂಬ ಕೀರ್ತಿ ಪಡೆದಿದೆ. ರಾಜ್ಯದ ರಾಜಧಾನಿ ಬೆಂಗಳೂರಿಗೆ ಈ ಬಾರಿ ಬಜೆಟ್ (Budget) ನಲ್ಲಿ ಸಿಎಂ ಬೊಮ್ಮಯಿಯವರು ಹಲವು ಯೋಜನೆಗಳನ್ನೂ ಷೋಷಣೆ ಮಾಡುವ ಸಾದ್ಯತೆ ಇದೆ. ಬಸವರಾಜ್ ಬೊಮ್ಮಯಿಯವರ ಚೊಚ್ಚಲ ಬಜೆಟ್ ಇದಾಗಿದ್ದು ಸಿಲಿಕಾನ್ ಸಿಟಿಗೆ ಗುಡ್ ನ್ಯೂಸ್ ಕೊಡುವ ಸಾಧ್ಯತೆ ಇದೆ. ಇನ್ನೇನು ಬಿಬಿಎಂಪಿ (BBMP Election) ಚುನಾವಣೆ ಕೂಡ ಸಮೀಪಿಸಿದ್ದು ಮಹಿಳೆಯರಿಗೆ ಹಾಗೂ ಶಾಲಾ ಮಕ್ಕಳಿಗೆ ಈ ಬಾರಿ ಅದೃಷ್ಟ ಖುಲಾಯಿಸುವ ಸಾಧ್ಯತೆ ಇದೆ.
ಬಿಬಿಎಂಪಿ ಚುನಾವಣೆ, ವಿಧಾನಸಭೆ ಚುನಾವಣೆ (Assembly Election) ಇವೆರಡನ್ನೂ ದೃಷ್ಟಿಯಲ್ಲಿಟ್ಟುಕೊಂಡು ಈ ಬಾರಿ ರಾಜಧಾನಿಗೆ ಯೋಜನೆಗಳ ಸುಗ್ಗಿ ಬರುವಂತಹ ಲಕ್ಷಣಗಳು ಕಾಣಿಸುತ್ತಿವೆ. ಮೊಟ್ಟಮೊದಲ ಬಾರಿಗೆ ಸಿಎಂ ಬೊಮ್ಮಯಿಯವರು ಬಜೆಟ್ ಮಂಡನೆ ಮಾಡಲಿದ್ದು, ಮುಖ್ಯವಾಗಿ ರಾಜಧಾನಿಯಲ್ಲಿ ಕಮಲ ಅರಳಬೇಕು ಎಂಬ ದೃಷ್ಟಿಯಿಂದ ಬೆಂಗಳೂರು ನಗರಕ್ಕೆ ಅನೇಕ ಯೋಜನೆಗಳನ್ನೂ ಬಜೆಟ್ ನಲ್ಲಿ ಷೋಷಣೆ ಮಾಡಬಹುದು ಎಂಬ ನಿರೀಕ್ಷೇಯಲ್ಲಿ ನಗರದ ಶಾಸಕರು ಕಣ್ಣುಬಿಟ್ಟು ಕೂತ್ತಿದ್ದಾರೆ. ಇನ್ನೂ ಈ ಬಾರಿ ಬಜೆಟ್ ನಲ್ಲಿ ಬೆಂಗಳೂರು ನಗರಕ್ಕೆ ಅದಾಯದ ಜೊತೆ ಹೊಸ ಯೋಜನೆಗಳ ನೀಡೋದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.

ಬಜೆಟ್ ನಲ್ಲಿ ಬೆಂಗಳೂರಿನ ನಿರೀಕ್ಷೆ ಏನು?
- ಪಾಲಿಕೆ ವ್ಯಾಪ್ತಿಯ ಬಿ ಖಾತ ಸ್ವತ್ತಿಗೆ ಎ ಖಾತ ನೀಡುವು ಸಾದ್ಯತೆ
- ಗ್ರೇಡ್ ಸಪರೇಟರ್ ಯೋಜನೆಗಳಿಗೆ ಮತ್ತಷ್ಟು ಅನುದಾನ
- ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ದಿ ಮಾಡಿ ಬೋಟಿಂಗ್ ವ್ಯವಸ್ಥೆ ಹಾಗೂ ರಾಜ ಕಾಲುವೆಗಳ ಅಭಿವೃದ್ಧಿಗೆ ಒತ್ತು
- ಕೆಅರ್ ಮಾರುಕಟ್ಟೆ, ರಸಲ್ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ ನವೀಕರಣ
- ಪರಿಸರ ಮಾಲಿನ್ಯ ತಡೆಗಟ್ಟಲು ಹೊಸ ಯೋಜನೆ
- ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ ನಲ್ಲೂ ಹೈಟೆಕ್ ಅಸ್ಪತ್ರೆ ನಿರ್ಮಾಣಕ್ಕೆ ಅನುದಾನ ನಿಗದಿ
- ವಿದ್ಯುತ್ ವಾಹನಗಳಿಗೆ ಪ್ರೋತ್ಸಾಹ ಧನ ಹಾಗೂ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ..
- ಪಾಲಿಕೆಗೆ ಅದಾಯ ದೃಷ್ಟಿಯಿಂದ ಪಾರ್ಕಿಂಗ್ ವ್ಯವಸ್ಥೆ ಜಾರಿ
- ಬೆಂಗಳೂರು ಮಹಿಳೆಯರಿಗೆ ಬಿಎಂಟಿಸಿ ಬಸ್ ನಲ್ಲಿ ಉಚಿತ ಪಾಸ್
- ಪಾಲಿಕೆ ಶಾಲೆಗಳ ಉನ್ನತಿಕಾರಣ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ
- ಬಿಬಿಎಂಪಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ವೈದ್ಯಕೀಯ ಸೌಲಭ್ಯ
- ಗಾರ್ಮೇಂಟ್ ನೌಕರರಿಗೆ ಉಚಿತ ಅರೋಗ್ಯ ವಿಮೆ
- ಬೆಂಗಳೂರಿನ ಮಹಿಳ ಸ್ವಸಹಾಯ ಸಂಘಗಳಿಗೆ ಅನುದಾನ
- ರಸ್ತೆಗಳ ಅಭಿವೃದ್ಧಿ, ನಗರದ ಮುಖ್ಯ ರಸ್ತೆಗಳಿಗೆ ವೈಟ್ ಟ್ಯಾಪಿಂಗ್, ರಸ್ತೆ ಗುಂಡಿಗೆ ಶಾಶ್ವತ ಪರಿಹಾರಕ್ಕೆ ಒತ್ತು
- ಪ್ರಧಾನ ಮಂತ್ರಿ ಅವಾಜ್ ಯೋಜನೆ ಜಾರಿಗೆ ಒತ್ತು
- ನಗರದ ಶ್ರಮಿಕ ವರ್ಗಕ್ಕೆ ಈ – ಶ್ರಮ ಕಾರ್ಡ್
- ವಿದ್ಯುತ್ ಬಿಲ್, ನೀರಿನ ಬಿಲ್, ಸೇರಿದಂತೆ ಬಸ್ ದರ ಹೆಚ್ಚಳ ಮಾಡಲ್ಲ ಎಂಬ ನಿರೀಕ್ಷೆ
ರಾಜ್ಯ ಬಜೆಟ್ ನಲ್ಲಿ ಬಿ ಖಾತೆಗಳನ್ನು ಎ ಖಾತಾ ಮಾಡುವುದು, ಅಕ್ರಮ – ಸಕ್ರಮ ಜಾರಿ, ಗ್ರೇಡ್ ಸಪರೇಟರ್ ಯೋಜನೆಗಳು, ಕೆರೆಗಳ ಪುನಶ್ಚೇತನ, ಮಾರುಕಟ್ಟೆಗಳ ನವೀಕರಣ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ಬಗ್ಗೆ ನಿರ್ಧಾರದ ಬಗ್ಗೆ ಬಿಬಿಎಂಪಿ ಭಾರಿ ಪ್ರಮಾಣದ ನಿರೀಕ್ಷೆ ಇಟ್ಟುಕೊಂಡಿದೆ. ಇನ್ನೂ ನಗರದಲ್ಲಿ ಅತ್ಯಂತ ಹಳೆಯ ಮಾರುಕಟ್ಟೆಗಳಲ್ಲಿ ಒಂದಾದ ಕೆ.ಆರ್. ಮಾರುಕಟ್ಟೆ (KR Market) ನವೀಕರಣ ಶಿವಾಜಿನಗರ ರಸೆಲ್ ಮಾರುಕಟ್ಟೆಯ ನವೀಕರಣಕ್ಕೆ ಯೋಜನೆ ಅಡಿಪಾಯ ಹಾಕುವ ನಿರೀಕ್ಷೆ ಇದೆ. ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಾರ್ಡ್ ಗಳಲ್ಲಿ ಸುಧಾರಿತ ಆಸ್ಪತ್ರೆಗಳ ನಿರ್ಮಾಣ, ನಗರದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಇಂಧನದ ವಾಹನಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ಧನ ನೀಡುವ ನಿಟ್ಟಿನಲ್ಲಿ ತೆರಿಗೆ ಇಳಿಕೆ ಹಾಗೂ ಹೆಚ್ಚಿನ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಸ್ಟಾರ್ಟ್ ಅಪ್ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಸಾಧ್ಯತೆಯಿದೆ.
ಜತೆಗೆ ಸಿಎನ್‌ಜಿ ಗ್ಯಾಸ್‌ನ್ನು ಬಳಸುವ ವಾಹನಗಳಿಗೆ ಉತ್ತೇಜನ ನೀಡಲು 100 ಗ್ಯಾಸ್ ಬಂಕ್‌ಗಳನ್ನು ತೆರೆಯಲು ಅನುಮತಿ ಹಾಗೂ ಬೆಂಗಳೂರು ವ್ಯಾಪ್ತಿಯಲ್ಲಿ 800ಕ್ಕೂ ಅಧಿಕ ಕೆರೆಗಳಿದ್ದು, ಅವುಗಳ ಪುನಶ್ಚೇತನ ಹೀಗೆ ಹತ್ತು ಹಲವು ಯೋಜನೆಗಳನ್ನೂ ಜಾರಿಗೆ ತರೋದಕ್ಕೆ ಸಿಎಂ ಒಲವು ತೋರಿದರೆ ಎನ್ನಲಾಗಿದೆ. ಬಿಬಿಎಂಪಿ ಚುನಾವಣೆ, ವಿಧಾನ ಸಭೆ ಚುನಾವಣೆ ಮುಂದಿಟ್ಟುಕೊಂಡು ಈ ಬಾರಿ ನಗರಕ್ಕೆ ಬಾರಿ ಕೊಡುಗೆಗಳ ಮಹಾಪೂರವೇ ಹಾರಿದು ಬರುವ ನಿರೀಕ್ಷೆ ಇದ್ದು ಸಿಲಿಕಾನ್ ಮಂದಿ ಕೂಡ ಬಜೆಟ್ ಮೇಲೆ ತಮ್ಮ ದೃಷ್ಟಿ ನೆಟ್ಟಿದ್ದಾರೆ.