ಅಮೇರಿಕಾ ಸೇನ ಪಡೆಗಳು ರಷ್ಯಾದ ಸೇನೆಯೊಂದಿಗೆ ಸೆಣಸುವುದಿಲ್ಲ ಎಂದು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. State Of The Union ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ.
ನಾನು ಈ ಮೂಲಕ ಸ್ಪಷ್ಟವಾಗಿ ಹೇಳುತ್ತೇನೆ ನಮ್ಮ ದೇಶದ ಸೇನಾ ಪಡೆಗಳು ರಷ್ಯಾದೊಂದಿಗೆ ಸಂಘರ್ಷದಲ್ಲಿ ತೊಡಗಿಲ್ಲ ನಮ್ಮ ಸೇನಾ ಪಡೆಗಳು ರಷ್ಯಾ ವಿರುದ್ದ ಸೆಣಸಲು ಉಕ್ರೇನ್ಗೆ ಹೋಗುತ್ತಿಲ್ಲ. ಆದರೆ ಪಶ್ಚಿಮ ರಾಷ್ಟ್ರಗಳನ್ನು ರಕ್ಷಿಸುವ ಸಲುವಾಗಿ ಪಶ್ಚಿಮದ ಕಡೆಗೆ ತೆರಳಲಿದೆ ಎಂದು ಹೇಳಿದ್ದಾರೆ.
ಮುಂದುವರೆದು, ನಾನು ಸ್ಪಷ್ಟವಾಗಿ ಹೇಳಿದಂತೆ US ಮತ್ತು ನಮ್ಮ ಮಿತ್ರ ರಾಷ್ಟ್ರಗಳು ನಮ್ಮ ಸಾಮೂಹಿಕ ಶಕ್ತಿಯ ಸಂಪೂರ್ಣ ಬಲದಿಂದ NATO ದೇಶಗಳ ಪ್ರತಿಯೊಂದು ಪ್ರದೇಶವನ್ನು ರಕ್ಷಿಸುತ್ತವೆ ಎಂದು ಜೋ ಬೈಡೆನ್ ಹೇಳಿದ್ದಾರೆ.
ಉಕ್ರೇನ್ನ ದೈರ್ಯ ಇಡೀ ಪ್ರಪಂಚಕ್ಕೆ ಸ್ಪೂರ್ತಿ:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ನನ್ನು ಸುಲಭವಾಗಿ ಆಕ್ರಮಿಸಬಹುದು ಎಂದು ತಿಳಿದುಕೊಂಡಿದ್ದರು ಆದರೆ, ಅವರಿಗೆ ಉಹಿಸಲಾಗದ ಒಂದು ಶಕ್ತಿ ಕಠಿಣ ಎದುರಾಳಿಯಾಗಿ ಎದುರಾಯಿತು ಅವರೆ ಉಕ್ರೇನಿನ ಮಹಾಜನತೆ ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಉಕ್ರೇನಿ ತೋರಿರುವ ಧೈರ್ಯ, ಶೌರ್ಯ ಪರಾಕ್ರಮ ಇಡೀ ಜಗತ್ತಿಗೆ ಪ್ರೇರಣೆ ಎಂದು ಹೇಳಿದ್ದಾರೆ. ಪುಟಿನ್ ಈ ಹಿಂದೆಗಿಂತಲ್ಲೂ ಪ್ರಪಂಚದಿಂದ ಪ್ರತ್ಯೇಕಗೊಂಡಿದ್ದಾರೆ ವಿಶ್ವಸಂಸ್ಥೆ ತನ್ನ ಮಿತ್ರ ರಾಷ್ಟ್ರಗಳೊಂದಿಗೆ ರಷ್ಯಾದ ವಿರುದ್ದ ಪ್ರಬಲ ಆರ್ಥಿಕ ನಿರ್ಬಂಧಗಳನ್ನು ಈಗಾಗಲೇ ಜಾರಿಗೊಳಿಸಿದೆ ಎಂದು ಬೈಡೆನ್ ಮಾತನಾಡುವ ವೇಳೆ ಹೇಳಿದ್ದರು.