ಬಿಬಿಎಂಪಿ (BBMP) ಒಂದು ಭ್ರಷ್ಟಾಚಾರದ (corruption) ಕೂಪ ಎಂದೇ ಹೆಸರು ಪಡೆದುಕೊಂಡಿದೆ. ದುಡ್ಡು ಬಿಚ್ಚದೆ ಇಲ್ಲಿ ಕೆಲಸಾನೇ ನಡೆಯಲ್ಲ ಎನ್ನುವ ಮಟ್ಟಕ್ಕೆ ಜನರಿಗೆ ಬಿಬಿಎಂಪಿ ಮೇಲೆ ಅನಿಸಿಕೆ ಹುಟ್ಟಿಬಿಟ್ಟಿದೆ. ಅಂಥಾ ಬಿಬಿಎಂಪಿ ಇದೀಗ ಮತ್ತೊಂದು ಮೊಂಡುತನದಿಂದ ಜನರ ತೆರಿಗೆಯ ಹಣವನ್ನೇ ನುಂಗಿ ನೀರು ಕುಡಿಯೋಕೆ ಹೊರಟಿದ್ಯಾ ಎಂಬ ಗುಮಾನಿ ಹುಟ್ಟಿದೆ.
ನಾಗರೀಕರ ತೆರಿಗೆ ಹಣವನ್ನ ವಿನಾಕಾರಣ ವ್ಯರ್ಥ ಮಾಡ್ತಿದ್ದಾರೆ ಅಧಿಕಾರಿಗಳು!
ಬಿಬಿಎಂಪಿ ಸದ್ಯ ಆರ್ಥಿಕ ಸಂಕಷ್ಟದಲ್ಲಿದೆ. ಬಜೆಟ್ (Budget) ಮಂಡಿಸುವುದಕ್ಕೂ ಕೂಡ ಸಮರ್ಪಕವಾದ ಆರ್ಥಿಕ ಸದೃಢತೆ ಇಲ್ಲದೆ ಕೂತಿದೆ. ಇದೇ ಕಾರಣಕ್ಕೆ ಈ ಬಾರಿಯ ಬಜೆಟ್ ಮೊತ್ತ ಭಾರೀ ಪ್ರಮಾಣಕ್ಕೆ ಇಳಿಯುವ ಸಾಧ್ಯತೆ ಇದೆ. ಇಷ್ಟೆಲ್ಲಾ ಹೊಡೆತ ಆರ್ಥಿಕವಾಗಿ ಪಾಲಿಕೆ ಅನುಭವಿಸುತ್ತಿದ್ದರೂ, ಬಿಬಿಎಂಪಿ ಮಾತ್ರ ತನ್ನ ವಂಚನಾ ನಡವಳಿಯನ್ನು ಮುಂದುವರೆಸಿದೆ. ಹೌದು, ಜನರ ಬೆನ್ನು ಬಿದ್ದು ಬಗೆಬಗೆಯ ಬಿಲ್ ಕಲೆಕ್ಟ್ ಮಾಡುವ ಪಾಲಿಕೆಯೇ ಕೋಟಿ ಕೋಟಿ ಬಾಡಿಗೆ ನೀಡುತ್ತಿದೆ. ಆಡಳಿತ ಸೇವೆ ಒದಗಿಸಲು ಸ್ವಂತ ಕಚೇರಿ ಇದ್ದರೂ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ಸೇವೆ ಒದಗಿಸುತ್ತಿದೆ ಪಾಲಿಕೆ. ಬಿಬಿಎಂಪಿ ಬಳಿಯೇ ಇದೆ ಗುತ್ತಿಗೆ ಅವಧಿ ಮುಗಿರುವ ನೂರಕ್ಕೂ ಹೆಚ್ಚು ಕಟ್ಟಡಗಳಿವೆ. ಸ್ವಂತ ಕಟ್ಟಡಗಳಿದ್ರೂ ಅಲ್ಲಿ ಕಚೇರಿ ಕೆಲಸ ಮಾಡೋಕೆ ಅಧಿಕಾರಿಗಳ ಹಿಂದೇಟು ಹಾಕುತ್ತಿರುವುದು ಯಾಕೆ ಎಂಬ ಅನುಮಾನ ಸದ್ಯಕ್ಕೆ ಮೂಡಿದೆ.
ಸ್ವಂತ ಕಟ್ಟಡ ಬಿಟ್ಟು ಬಾಡಿಗೆ ಕಟ್ಟಡದಲ್ಲಿ ಕಚೇರಿಯಲ್ಲಿ ಬಿಬಿಎಂಪಿ ಕೆಲಸ!
ಸದ್ಯ ಬಿಬಿಎಂಪಿಯಲ್ಲಿ ಬರೋಬ್ಬರಿ 6828 ಸ್ವಂತ ಆಸ್ತಿಗಳಿವೆ (Own Building). ಆಸ್ತಿಗಳನ್ನ ಬೆರೆಯವ್ರಿಗೆ ಬಾಡಿಗೆ ಕೊಟ್ಟು ಬಾಡಿಗೆ ಕಚೇರಿಯಲ್ಲಿ (Rent Office) ತನ್ನ ಕೆಲಸ ಮಾಡಿಕೊಂಡಿದೆ. ಬಾಡಿಗೆ ಕೊಟ್ಟ 116 ಆಸ್ತಿಗಳ ಗುತ್ತಿಗೆ ಅವಧಿ ಈಗಾಗಲೇ ಪೂರ್ಣಗೊಂಡಿದೆ. ಪೂರ್ಣಗೊಂಡಿದ್ದರೂ ಬಿಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸ್ತಿದ್ದಾರೆ ಬಿಬಿಎಂಪಿ ಅಧಿಕಾರಿಗಳು. ಸ್ವಂತ ಕಟ್ಟಡದಲ್ಲಿ ಕಚೇರಿ ಮಾಡುವ ಬದಲು ಬೇರೆ ಕಟ್ಟಡ ಬಾಡಿಗೆ ಪಡೆದು ಕೆಲಸ ಮಾಡಿ, ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಕೊಟ್ಟು ಖಜಾನೆ ಖಾಲಿ ಮಾಡುತ್ತಿದೆ.
ವಲಯವಾರು ಕಟ್ಟಡಗಳ ವಿವರ!
ವಲಯ ಸ್ವಂತ ಆಸ್ತಿಗಳು
ಪುರ್ವ ವಲಯ 917
ದಕ್ಷಿಣ ವಲಯ 903
ಪಶ್ಚಿಮ ವಲಯ 781
ಮಹದೇವಪುರ ವಲಯ 576
ಬೊಮ್ಮನಹಳ್ಳಿ ವಲಯ 481
ಆರ್.ಆರ್. ನಗರ ವಲಯ 493
ಯಲಹಂಕ ವಲಯ 423
ದಾಸರಹಳ್ಳಿ ವಲಯ 212
ಆಸ್ತಿಗಳನ್ನ ಯಾವುದಕ್ಕೆ ಬಾಡಿಗೆ ನೀಡಲಾಗಿದೆ?
ಉದ್ದೇಶ ಕಟ್ಟಡಗಳು
ವಾಣಿಜ್ಯ ಉದ್ದೇಶ 235
ಶೈಕ್ಷಣಿಕ ಉದ್ದೇಶ 24
ಸರ್ಕಾರಿ ಉದ್ದೇಶ 43
ಧಾರ್ಮಿಕ ಉದ್ದೇಶ 22
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯನಾ..? ಅಥವಾ ಗಮನಕ್ಕೇ ಬಂದಿಲ್ವಾ?
ಒಟ್ಟಾರೆಯಾಗಿ ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿ ಅನ್ನು ಲಾಭದತ್ತ ತರ್ಬೇಕಾಗಿರುವ ಅಧಿಕಾರಿಗಳೇ ಸಂಸ್ಥೆಯನ್ನ ನಷ್ಟಕ್ಕೆ ದೂಡಲಾಗುತ್ತಿದೆ ಇಲ್ಲಿ. ಈಗಾಗಲೇ ಗುತ್ತಿಗೆ ಅವಧಿ ಮುಗಿದಿರುವ 116 ಆಸ್ತಿಗಳನ್ನು ಮರುವಶಕ್ಕೆ ಪಡೆದು ಅದರಲ್ಲೇ ಪಾಲಿಕೆ ಕೆಲಸ ಕಾರ್ಯಗಳು ಮುಂದುವರೆದರೆ ಪಾಲಿಕೆಗೆ ಕೋಟಿ ಕೋಟಿ ರೂಪಾಯಿ ಉಳಿಕೆಯಾಗಲಿದೆ. ಆದರೆ ಅವೆಲ್ಲವನ್ನೂ ಬದಿಗೊತ್ತಿಗೆ ಹೀಗೆ ಬಾಡಿಗೆ ಕಟ್ಟಲೆಂದೇ ಕೂತಿರುವ ಪಾಲಿಕೆ ಅಧಿಕಾರಿಗಳ ನಡೆ ಬಹಳ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.