ಪಂಜಾಬ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ದ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಚುನಾವಣಾ ಪ್ರಚಾರದ ವೇಳೆ ಚನ್ನಿ ಹೇಳಿಕೆಯನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದು ನನಗೊಂದು ಅವಕಾಶ ಕೊಡಿ ಡಬಲ್ ಇಂಜಿನ್ ಸರ್ಕಾರವು ಪಂಜಾಬ್ಅನ್ನು ಹೇಗೆ ಅಭಿವೃದ್ದಿಯೆಡೆಗೆ ಕೊಂಡೊಯುತ್ತದೆ ಎಂಬುದನ್ನ ನೀವೇ ನೋಡುವಿರಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲಿ ಹೇಳಿದ್ದನ್ನು, ದೆಹಲಿಯ ಕುಟುಂಬ ಚಪ್ಪಾಳೆ ತಟ್ಟಿದ್ದನ್ನು ಇಡೀ ದೇಶವೇ ನೋಡಿದೆ ಎಂದು ಹೇಳಿದ್ದಾರೆ.
ಮುಂದುವರೆದು, ಗುರು ಗೋಬಿಂದ್ ಸಿಂಗ್ ಹುಟ್ಟಿದ್ದು ಬಿಹಾರದ ಪಾಟ್ನಾ ಸಾಹಿಬ್ನಲ್ಲಿ, ಗುರು ರವಿದಾಸ ಹುಟ್ಟಿದ್ದು ಉತ್ತರಪ್ರದೇಶದ ವಾರಾಣಾಸಿಯಲ್ಲಿ ಇವರೆಲ್ಲರೂ ಪಂಜಾಬಿನ ಹೊರಗಡೆ ಜನಿಸಿದವರು ಎಂದು ಪಂಜಾಬಿನಲ್ಲಿ ನಡೆದ ಸಮಾವೇಶದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಎಎಪಿ ಸಮಾನ ಮನಸ್ಕರರು ಏಕೆಂದರೆ ಎಎಪಿ ಎಲ್ಲದರ ಬಗ್ಗೆ ಸುಳ್ಳನ್ನು ಹೇಳುತ್ತದೆ ಅವರು ಶಾಲೆಗಳ ಬಳಿ ಮಧ್ಯದಂಗಡಿಗಳನ್ನು ತೆರೆಯುತ್ತಾರೆ. ಆದರೆ, ಇಲ್ಲಿ ಬಂದು ಶಿಕ್ಷಣ ಸುಧಾರಣೆ ಬಗ್ಗೆ ಮಾತನಾಡುತ್ತಾರೆ. ದೆಹಲಿಯಲ್ಲಿ ಉಂಟಾಗುವ ವಾಯು ಮಾಲಿನ್ಯಕ್ಕೆ ಪಂಜಾಬಿನ ರೈತರು ಕಾರಣ ಎಂದು ದೂರುತ್ತಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತದೆ. ಆದರೆ, ಇಲ್ಲಿನ ಕಾಂಗ್ರೆಸ್ಸಿನವರು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಅದೇ ನೆಂದರೆ ದಾಖಲೆ ಪ್ರಮಾಣದ ಉತ್ಪನ್ನಗಳನ್ನು ಖರಿದಿಸಿದ್ದು ನಮ್ಮ ಬಿಜೆಪಿ ಸರ್ಕಾರ ಮಾತ್ರ ಎಂದು ಹೇಳಿದ್ದಾರೆ.
ಸ್ವಾಮಿನಾಥನ್ ವರದಿ ಉಲ್ಲೇಖಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಹಲವು ವರ್ಷಗಳಿಂದ ಸ್ವಾಮಿನಾಥನ್ ವರದಿ ಜಾರಿಗೆ ಬೇಡಿಕೆ ಇದ್ದರು ಅದು ಕಡತವಾಗಿಯೇ ಉಳಿದಿತ್ತು ಈ ಹಿಂದೆ ಕಾಂಗ್ರೆಸ್ ಸರ್ಕಾರಗಳು ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ರೈತರಿಗೆ ದ್ರೋಹ ಬಗೆದಿದೆ ಎಂದು ಕಿಡಿಕಾರಿದ್ದಾರೆ.

ಪಂಜಾಬಿನಲ್ಲಿರುವ ಕಾಂಗ್ರೆಸ್ ಸರ್ಕಾರವು ಮಾಫಿಯ ವಶದಲ್ಲಿದೆ ಈ ಸರ್ಕಾರ ಜಾರಿಗೆ ತಂದಿರುವ ನೀತಿಗಳಿಂದ ಪಂಜಾಬ್ನಲ್ಲಿ ಹೂಡಿಕೆ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಪಂಜಾಬಿನಲ್ಲಿ ನಾನು ಎಲ್ಲಿ ಹೋದರೂ ನನಗೆ ಒಂದು ಶಬ್ದ ಕೇಳಿ ಬರುತ್ತಿದೆ. ಅದುವೇ ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ವಿಜಯಶಾಲಿಯಾಗಿಸುವುದು ಮತ್ತು ಡಬಲ್ ಇಂಜಿನ್ ಸರ್ಕಾರಕ್ಕೆ ಪ್ರೋತ್ಸಾಹ ನೀಡುವುದು ಎಂದು ಹೇಳಿದ್ದಾರೆ. ಇದರರ್ಥ ರಾಜ್ಯದಲಿ ತಲೆದೂರಿರುವ ಡ್ರಗ್ಸ್ ಮಾಫಿಯಾವನ್ನು ಹೊರಹಾಕುವುದು ಮತ್ತು ವ್ಯಾಪಾರ ಉದ್ಯೋಗ ಅವಕಾಶವನ್ನು ಹೆಚ್ಚಿಸುವುದು ಎಂದು ಹೇಳಿದ್ದಾರೆ.
ನಮಗೆ ಒಂದೇ ಒಂದು ಅವಕಾಶವನ್ನು ಕೊಡಿ ಡಬಲ್ ಇಂಜಿನ್ ಸರ್ಕಾರವು ಪಂಜಾಬ್ಅನ್ನು ಹೇಗೆ ಅಭಿವೃದ್ದಿಯೆಡೆಗೆ ಕೊಂಡೊಯುತ್ತದೆ ಎಂಬುದನ್ನ ನೀವೇ ನೋಡುವಿರಿ ಎಂದು ಹೇಳಿದ್ದಾರೆ.