ಹಿಜಾಬ್ ಧರಿಸಿದ ಹುಡುಗಿ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾಳೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
“ಮುಸ್ಲೀಂ ಹೆಣ್ಣು ಮಕ್ಕಳು ಹಿಜಾಬ್ ಧರಿಸಲು ನಿರ್ಧರಿಸಿದರೆ ಮತ್ತು ಅವರ ಪೋಷಕರು ಇದಕ್ಕೆಲ್ಲ ಅವಕಾಶ ಮಾಡಿಕೊಟ್ಟರೆ ಯಾರು ತಡೆಯಲು ಸಾಧ್ಯ? ನೋಡಿಯೇ ಬಿಡೋಣ ಅದೇನಾಗುತ್ತದೆ” ಎಂದು ಓವೈಸಿ ಚುನಾವಣಾ ಸಮಾವೇಶದ ಭಾಷಣದಲ್ಲಿ ಹೇಳಿದ್ದಾರೆ.
“ಹುಡುಗಿಯರು ಹಿಜಾಬ್ ಧರಿಸುತ್ತಾರೆ, ನಿಖಾಬ್ ಧರಿಸುತ್ತಾರೆ ಮತ್ತು ಕಾಲೇಜುಗಳಿಗೆ ಹೋಗುತ್ತಾರೆ ಮತ್ತು ವೈದ್ಯರು, ಕಲೆಕ್ಟರ್‌ಗಳು, ಎಸ್‌ಡಿಎಂಗಳು ಮತ್ತು ಉದ್ಯಮಿಗಳಾಗುತ್ತಾರೆ” ಎಂದು ಓವೈಸಿ ತಮ್ಮ ಟ್ವೀಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಹೇಳಿದ್ದಾರೆ.
“ನೀವೆಲ್ಲರೂ ನೆನಪಿನಲ್ಲಿಡಿ, ಬಹುಶಃ ನಾನು ಬದುಕಿಲ್ಲದಿರುವಾಗ, ಹಿಜಾಬ್ ಧರಿಸಿರುವ ಹುಡುಗಿ ಮುಂದೊಂದು ದಿನ ಈ ದೇಶದ ಪ್ರಧಾನಿಯಾಗುತ್ತಾಳೆ” ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಉಡುಪಿಯಲ್ಲಿ ಶುರುವಾದ ಹಿಜಾಬ್ ವಿವಾದ ದೇಶಾದ್ಯಂತ ಹರಡಿದೆ. ರಾಷ್ಟ್ರಿಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಹಿಜಾಬ್ ದರಿಸಿ ತರಗತಿಗಳಿಗೆ ಹಾಜರಾಗಿದ್ದರು, ಹಿಜಾಬ್ ದರಿಸಿದ ವಿದ್ಯಾರ್ಥಿಯನಿಯರಿಗೆ ಕ್ಯಾಂಪಸ್‌ನಿಂದ ಹೊರಹೋಗುವಂತೆ ಕಾಲೇಜು ಆಡಳಿತ ತಿಳಿಸಿದ್ದರು. ನಂತರ ವಿವಾದ ರಾಜ್ಯದ ವಿವಿಧ ಭಾಗಗಳಿಗೆ ಹರಡಿ, ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟಿಸಿದ್ದರು.
ಈ ವಾರದ ಆರಂಭದಲ್ಲಿ ಕೆಲವು ಸ್ಥಳಗಳಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದುಕೊಂಡಿದ್ದರಿಂದ, ರಾಜ್ಯ ಸರ್ಕಾರ ಮಂಗಳವಾರ ಸಂಸ್ಥೆಗಳಿಗೆ ಮೂರು ದಿನಗಳ ರಜೆ ಘೋಷಿಸಿತು. ನಂತರ ಕಾಲೇಜುಗಳಿಗೆ 16ರವತೆಗೆ ರಜೆಯನ್ನು ವಿಸ್ತರಿಸಿದೆ. ಇಂದು ಹಿಜಾಬ್ ಕುರಿತು ಹೈಕೋರ್ಟ್ ಆದೇಶ ನೀಡುವ ನೀರಿಕ್ಷೆ ಇದ್ದು ಎಲ್ಲರ ಚಿತ್ತ ಹೈಕೋರ್ಟ ನತ್ತ ತಿರುಗಿದೆ.