Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

9th May Sahitya Mela Successfully Concluded : ಯಶಸ್ವಿಯಾಗಿ ಮುಕ್ತಾಯವಾದ ೯ ನೇ ಮೇ ಸಾಹಿತ್ಯ ಮೇಳ..!

ಡಾ | ಜೆ.ಎಸ್ ಪಾಟೀಲ

ಡಾ | ಜೆ.ಎಸ್ ಪಾಟೀಲ

May 30, 2023
Share on FacebookShare on Twitter

~ಡಾ. ಜೆ ಎಸ್ ಪಾಟೀಲ.

ಹೆಚ್ಚು ಓದಿದ ಸ್ಟೋರಿಗಳು

ಸ್ವಾತಂತ್ರ್ಯ ದೊರೆತು 76 ವರ್ಷಗಳಾದರೂ ಅನೇಕ ಜಾತಿಗಳು ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು ಸುತ್ತಮುತ್ತ “ಭಗೀರಥ” ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂಸಾಚಾರ: 60 ಮಂದಿ ಬಂಧನ

ಲಡಾಯಿ ಪ್ರಕಾಶನˌ ಗದಗˌ ಮೇ ಸಾಹಿತ್ಯ ಬಳಗˌ (9th May Sahitya Mela) ವಿಜಯಪುರ ಮತ್ತು ಇನ್ನಿತರ ಸಂಘಟನೆಗಳು ಅನೇಕ ಇತರ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಇದೇ ಮೇ ೨೭ ಹಾಗು ೨೮ ರಂದು ಎರಡು ದಿನಗಳ‌ ೯ ನೇ ಮೇ ಸಾಹಿತ್ಯ ಮೇಳವು ವಿಜಯಪುರದಲ್ಲಿ ಯಶಸ್ವಿಯಾಗಿ ಕೊನೆಗೊಂಡಿತು. ಸುಮಾರು ಎರಡರಿಂದ ಮೂರು ಸಾವಿರ ಜನರು ಸೇರಿದ್ದ ಸಾಹಿತ್ಯ ಮೇಳ (Sahitya Mela) ಇದಾಗಿತ್ತು. ಮೇ ಸಾಹಿತ್ಯ ಮೇಳವು ಭಾರತೀಯ ಪ್ರಜಾತಂತ್ರದ ಸವಾಲುಗಳು ಹಾಗು ಅದನ್ನು ಮೀರುವ ಹಾದಿಗಳು ಎಂಬ ಆಶಯದಿಂದೊಡಗೂಡಿತ್ತು. ಸಾಹಿತ್ಯ ಮೇಳವನ್ನು ವಿಜಯಪುರದ ಹಿರಿಯ ಜನಪರ ಹೋರಾಟಗಾರರಾದ ಭೀಮಶಿ ಕಲಾದಗಿˌ ಪ್ರಕಾಶ್ ಹಿಟ್ನಳ್ಳಿ ತುಕಾರಾಮ ಚಂಚಲಕರ್ˌ ಹಾಗು ಆಳಂದದ ಕೋರ್ಣೇಶ್ವರ ಸ್ವಾಮಿಜಿಯವರು ವಿಶೇಷ ರೀತಿಯಲ್ಲಿ ಉದ್ಘಾಟಿಸಿದರು.

ಉದ್ಘಾಟನಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದ ಪ್ರಕಾಶ್ ಅಂಬೇಡ್ಕರ್, ತೀಸ್ತಾ ಸೆಟಲ್ವಾಡ್ ಹಾಗೂ ಹರ್ಷ ಮಂದರ್ ಅವರು ಮೇಳದ ಕೇಂದ್ರ ವಿಷಯದ ಮೇಲೆ ಗಂಭೀರ ವಿಶ್ಲೇಷಣೆಯುಳ್ಳ ದಿಕ್ಸೂಚಿ ಮಾತುಗಳನ್ನಾಡಿದರು. ಹಿರಿಯ ವಿದ್ವಾಂಸರಾದ ರಾಜೇಂದ್ರ ಚೆನ್ನಿಯವರು ಪ್ರಜಾತಂತ್ರಕ್ಕಿರುವ ಕಾಲ್ತೊಡಕುಗಳನ್ನು ಜನ ಕೇಂದ್ರಿತವಾಗಿ ವಿವರಿಸಿದರು. ಉದ್ಘಾಟನೆಯ ನಂತರದ ಮೊದಲ ಗೋಷ್ಠಿಯಲ್ಲಿ ದೆಹಲಿ ಜವಾಹರಲಾಲ್ ವಿವಿಯ ಕನ್ನಡ ಪೀಠದ ಮಾಜಿ ಮುಖ್ಯಸ್ಥರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರು ರಾಷ್ಟ್ರೀಯ ಹೋರಾಟದ ವಿಭಿನ್ನ ಧಾರೆಗಳನ್ನು ಗುರುತಿಸಿ, ಅವುಗಳ ಅಂತರ್ ಸಂಬಂಧಗಳ ಕಡೆಗೆ ಜನರ ಗಮನ ಸೆಳೆದರು. ಡಾ. ಹೆಚ್.ಜಿ.ಜಯಲಕ್ಷ್ಮಿಯವರು ಹಿಂದಿನ ಕಾಲದ ಬುಡಕಟ್ಟು ಹೋರಾಟಗಳನ್ನು ಪರಿಚಯಿಸಿದರು.

ಲೇಖಕ ಹಾಗು ಖ್ಯಾತ ಅಂಕಣಕಾರ ಎ.ನಾರಾಯಣ ಅವರು ಸಂವಿಧಾನದ ಪರಿಕಲ್ಪನೆಯನ್ನು ವಿಸ್ತ್ರತವಾಗಿ ವಿವರಿಸಿ ಭವಿಷ್ಯದಲ್ಲಿ ನಾವು ಮಾಡಬೇಕಾದ ಕೆಲಸಗಳ ಕುರಿತು ಒತ್ತು ನೀಡಿದರು. ಮೊದಲ ದಿನದ ಎರಡನೇ ಗೋಷ್ಠಿಯಲ್ಲಿ ಕೃಷ್ಣಮೂರ್ತಿ ಚಮರಂ ಅವರು ದಲಿತ ಸಂವೇದನೆ ಕುರಿತು, ಹನೀಫ್ ಅವರು ಅಲ್ಪ ಸಂಖ್ಯಾತರ ಕುರಿತು ಹಾಗು ಶೈಲಜಾ ಹಿರೇಮಠ ಅವರು ಸ್ತ್ರೀ ಸಂವೇದನೆ ಕುರಿತು ಮಾತಾಡಿದರು. ಗೋಷ್ಠಿಯಲ್ಲಿ ಮಂಡನೆಯಾದ ಎಲ್ಲಾ ವಿದ್ವಾಂಸರ ಪ್ರಬಂಧಗಳು ಅವರ ಆಳವಾದ ಓದು ಹಾಗು ಸತತ ಅಧ್ಯಯನದಿಂದ ಮೂಡಿ ಬಂದವಾಗಿದ್ದು ಅವು ದೇಶದ ಸಮಕಾಲೀನ ಆಗುಹೋಗುಗಳ ಕುರಿತು ಸ್ಪಷ್ಟ ಚಿತ್ರಣವನ್ನು ಜನರೆದುರಿಗೆ ತೆರೆದಿಡುವಲ್ಲಿ ಸಂಪೂರ್ಣ ಯಶಸ್ವಿಯಾದವು.

ಮೊದಲನೇ ದಿನದ ಮೂರನೇಯ ಹಾಗು ಕೊನೆಯ ಗೋಷ್ಠಿಯಲ್ಲಿ ಬೌದ್ಧ, ಸೂಫಿ ಮತ್ತು ಶರಣ ಪರಂಪರೆಯಲ್ಲಿ ಪ್ರಜಾತಂತ್ರದ ಆಶಯಗಳು ಕುರಿತು ಹಿರಿಯ ವಿದ್ವಾಂಸರಾದ ನಟರಾಜ್ ಬೂದಾಳ್ ಅವರು ಬಹಳ ಮಾರ್ಮಿಕವಾಗಿ ವಿಷಯವನ್ನು ಮಂಡಿಸಿದರು. ಇಡೀ ಮೇ ಮೇಳದಲ್ಲಿ ಬೂದಾಳ್ ಅವರು ಮಂಡಿಸಿದ ಭಾಷಣವು ಅತ್ಯುತ್ತಮ ಎನಿಸಿತು. ಮೇಳದ ಎರಡನೇಯ ಹಾಗು ಕೊನೆಯ ದಿನದ ಯುವಸ್ಪಂದ ಎಂಬ ಗೋಷ್ಠಿಯಲ್ಲಿ ಸುಭಾಸ್ ರಾಜಮಾನೆ ಮತ್ತು ಟಿ ಎಸ್ ಗೊರವರ ಅವರು ಅತ್ಯಂತ ಪ್ರೌಢವಾಗಿ ವಿಷಯಗಳನ್ನು ಮಂಡಿಸಿದರು. ಎರಡನೇ ದಿನದ ಕೊನೆಯ ಗೋಷ್ಠಿಯಲ್ಲಿ ಮಾವಳ್ಳಿ ಶಂಕರ್, ಸಿದ್ದನಗೌಡ ಪಾಟೀಲ್, ನೂರ್ ಶ್ರೀಧರ್, ಕೆ ನೀಲಾ, ಬಡಗಲಪುರ ನಾಗೇಂದ್ರ ಹಾಗೂ ನಂದಕುಮಾರ್ ಕುಂಬ್ರಿಉಬ್ಬು ಅವರು ನಾವು ಮುಂದಿನ ದಿನಗಳಲ್ಲಿ ಇಡಬೇಕಾದ ಹೆಜ್ಜೆಗಳ ಕುರಿತು ಎಚ್ಚರಿಸಿದರು.

ಮೇ ಸಾಹಿತ್ಯ ಮೇಳದಲ್ಲಿ ಈ ಸಲ ಎರಡು ಕವಿಗೋಷ್ಠಿಗಳು ಜರುಗಿದವು. ಎರಡನೇ ಕವಿಗೋಷ್ಠಿಯ ಅಧ್ಯಕ್ಷತೆಯನ್ನು  ಸಬಿತಾ ಬನ್ನಾಡಿಯವರು ವಹಿಸಿದ್ದರು. ಗೋಷ್ಠಿಗಳ ಮಧ್ಯದಲ್ಲಿ ವಿವಿಧ ಕಲಾತಂಡಗಳಿಂದ ಹೋರಾಟದ ಹಾಡುಗಳು ಇಡೀ ಮೇಳದ ಆಶಯಕ್ಕೆ ಪೂರಕವಾಗಿ ಮೂಡಿ ಬಂದಿದ್ದಲ್ಲದೆ ಸಭಿಕರ ಮನಸ್ಸನ್ನು ಹಗುರಗೊಳಿಸಿದವು. ರಾಜ್ಯದ ವಿವಿಧ ಭಾಗದ ಲೇಖಕರು, ಸಾಹಿತ್ಯಾಸಕ್ತರುˌ ಕಲಾವಿದರು, ಹೋರಾಟಗಾರರು ಮೇಳದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಡಾ. ಹೆಚ್.ಎಸ್.ಅನುಪಮಾ ಹಾಗೂ ಲಡಾಯಿ ಪ್ರಕಾಶನದ ಬಸು ಅವರು ಹಾಗು ಸ್ಥಳೀಯ ವಿಜಯಪುರದ ಅವರ ತಂಡ ಸಮ್ಮೇಳನದ ಯಶಸ್ವಿಗೆ ಕಾರಣವಾಯಿತು. ಬಿಸಿಲ ನಾಡಾದ ವಿಜಯಪುರದಲ್ಲಿ ಮೇ ಸಾಹಿತ್ಯ ಮೇಳವು ಅಚ್ಚುಕಟ್ಟಾಗಿ ನೆರವೇರಿತು.

ಹಿರಿಯ ರಂಗಸಾಧಕ ಬಸವಲಿಂಗಯ್ಯ, ಸನತ್ ಕುಮಾರ್ ಬೆಳಗಲಿˌ ಮಲ್ಲಿಕಾರ್ಜುನ್ ಹೆಗ್ಗಳಿಗಿˌ ಡಾ. ಪೋತೆˌ ಮುತಾದ ಹಿರಿಯ ಸಾಹಿತಿˌ ಪತ್ರಕರ್ತˌ ಹೋರಾಟಗಾರರು ಮೇ ಮೇಳದಲ್ಲಿ ಭಾಗವಸಿದ್ದರು. ಸಮಾಜಮುಖಿ ಸಂಪಾದಕ ಚಂದ್ರಕಾಂತ ವಡ್ಡು ಅವರು ವಿಜಯಪುರ ಘೋಷಣೆಯನ್ನು ಮಂಡಿಸಿದರು. ಮೇಳದಲ್ಲಿ ಎರಡೂ ದಿನ ಉತ್ತರ ಕರ್ನಾಟಕದ ವಿಶೇಷ ಶೈಲಿಯ ಊಟˌ ತಿಂಡಿಗಳನ್ನು ಸವಿದ ಸಾಹಿತ್ಯಾಸಕ್ತರು ವಿಜಯಪುರದ ಐತಿಹಾಸಿಕ ಸ್ಥಳಗಳನ್ನು ವಿಕ್ಷಿಸಲು ಮರೆಯಲಿಲ್ಲ.

~ಡಾ. ಜೆ ಎಸ್ ಪಾಟೀಲ.

RS 500
RS 1500

SCAN HERE

Pratidhvani Youtube

«
Prev
1
/
5600
Next
»
loading
play
Jaipur’s ‘Money Heist’ moment as mask man throws notes in air Ascene #latestnews #viral #viralshorts
play
Shivaraj Tangadagi :ಚುನಾವಣೆ ಹತ್ತಿರ ಬಂದ ತಕ್ಷಣ ಬಿಜೆಪಿಯವರಿಗೆ ಹಿಂದೂಗಳು ನೆನಪಾಗ್ತಾರಾ?
«
Prev
1
/
5600
Next
»
loading

don't miss it !

ಕಾವೇರಿ ವಿವಾದಕ್ಕೆ ಅಂತಿಮ ತೆರೆ ಎಳೆಯಲು ನಾಲ್ಕು ರಾಜ್ಯಗಳ ಜತೆ ಚರ್ಚಿಸಿ ಸಂಕಷ್ಟ ಸೂತ್ರ ರೂಪಿಸಬೇಕು: ಎಸ್.ಎಂ ಕೃಷ್ಣ
Top Story

ಕಾವೇರಿ ವಿವಾದಕ್ಕೆ ಅಂತಿಮ ತೆರೆ ಎಳೆಯಲು ನಾಲ್ಕು ರಾಜ್ಯಗಳ ಜತೆ ಚರ್ಚಿಸಿ ಸಂಕಷ್ಟ ಸೂತ್ರ ರೂಪಿಸಬೇಕು: ಎಸ್.ಎಂ ಕೃಷ್ಣ

by ಪ್ರತಿಧ್ವನಿ
October 1, 2023
ನಾಳೆ ಬಂದ್‌ಗೆ ಅವಕಾಶವಿಲ್ಲ, ಪ್ರತಿಭಟನೆಗೆ ಅಡ್ಡಿಯಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
Top Story

ನಾಳೆ ಬಂದ್‌ಗೆ ಅವಕಾಶವಿಲ್ಲ, ಪ್ರತಿಭಟನೆಗೆ ಅಡ್ಡಿಯಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
September 28, 2023
ವಿಮಾನ ಅಪಘಾತದಲ್ಲಿ ಭಾರತದ ಬಿಲಿಯನೇರ್ ಉದ್ಯಮಿ ಹರ್ಪಾಲ್ ರಾಂಧವಾ ಅವರ  ಮಗ ಸಾವು!
Top Story

ವಿಮಾನ ಅಪಘಾತದಲ್ಲಿ ಭಾರತದ ಬಿಲಿಯನೇರ್ ಉದ್ಯಮಿ ಹರ್ಪಾಲ್ ರಾಂಧವಾ ಅವರ ಮಗ ಸಾವು!

by ಪ್ರತಿಧ್ವನಿ
October 3, 2023
ಗೃಹಸಚಿವ ಪರಮೇಶ್ವರ್ ವಿರುದ್ಧ ಶೋಭಾ ಕರಂದ್ಲಾಜೆ ಟೀಕೆಯ ಸುರಿಮಳೆ!
Top Story

ಗೃಹಸಚಿವ ಪರಮೇಶ್ವರ್ ವಿರುದ್ಧ ಶೋಭಾ ಕರಂದ್ಲಾಜೆ ಟೀಕೆಯ ಸುರಿಮಳೆ!

by ಪ್ರತಿಧ್ವನಿ
October 3, 2023
ಮುಂದಿನ ತಿಂಗಳಿಂದ ಅನ್ನಭಾಗ್ಯದಡಿ 10 ಕೆಜಿ ಅಕ್ಕಿ ವಿತರಣೆ:  ಸಚಿವ ಕೆ.ಎಚ್ ಮುನಿಯಪ್ಪ
Top Story

ಮುಂದಿನ ತಿಂಗಳಿಂದ ಅನ್ನಭಾಗ್ಯದಡಿ 10 ಕೆಜಿ ಅಕ್ಕಿ ವಿತರಣೆ: ಸಚಿವ ಕೆ.ಎಚ್ ಮುನಿಯಪ್ಪ

by ಪ್ರತಿಧ್ವನಿ
September 28, 2023
Next Post
We will prepare a master plan : ಬೆಂಗಳೂರು ಬದಲಾವಣೆಗೆ ಮಾಸ್ಟರ್ ಪ್ಲಾನ್ ಶೀಘ್ರ ರೂಪಿಸುತ್ತೇವೆ : ಡಿಸಿಎಂ

We will prepare a master plan : ಬೆಂಗಳೂರು ಬದಲಾವಣೆಗೆ ಮಾಸ್ಟರ್ ಪ್ಲಾನ್ ಶೀಘ್ರ ರೂಪಿಸುತ್ತೇವೆ : ಡಿಸಿಎಂ

Chikkaballapur News :  ‘ಚಿಕ್ಕಬಳ್ಳಾಪುರ ನಗರದಲ್ಲಿ ನನ್ನ ಫ್ಲೆಕ್ಸ್ ಇರಬಾರದು’ ; ಶಾಸಕ ಪ್ರದೀಪ್‌ ಈಶ್ವರ್‌

Chikkaballapur News : ‘ಚಿಕ್ಕಬಳ್ಳಾಪುರ ನಗರದಲ್ಲಿ ನನ್ನ ಫ್ಲೆಕ್ಸ್ ಇರಬಾರದು’ ; ಶಾಸಕ ಪ್ರದೀಪ್‌ ಈಶ್ವರ್‌

‘Guarantee’ projects : ʼಗ್ಯಾರಂಟಿʼ ಯೋಜನೆಗಳ ಅನುಷ್ಠಾನ ಕುರಿತು ಅಧಿಕಾರಿಗಳ ಜತೆ  ಸಭೆ ನಡೆಸಿದ ಸಿಎಂ..!

'Guarantee' projects : ʼಗ್ಯಾರಂಟಿʼ ಯೋಜನೆಗಳ ಅನುಷ್ಠಾನ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿದ ಸಿಎಂ..!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist