ಇಂಗ್ಲೆಂಡ್ ರಾಣಿ ಎಲಿಜಬೆತ್-2 ಅವರ ಜೀವಿತಾವಧಿಯ 96 ವರ್ಷಗಳ ಸ್ಮರಣಾರ್ಥ 96 ಬಾರಿ ಗಾಳಿಯಲ್ಲಿ ಕುಶಾಲ ತೋಪು ಹಾರಿಸಿ ಸರಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.
ಬ್ರಿಟನ್ ರಾಣಿ ಎಲಿಜಬೆತ್ ಸುದೀರ್ಘ ಕಾಲ ರಾಣಿಯಾಗಿ ಆಡಳಿತ ನಡೆಸಿದ ಗೌರವ ಹೊಂದಿದ್ದಾರೆ. ಕಳೆದ ಅಕ್ಟೋಬರ್ ನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎಲಿಜಬೆತ್ ನಿನ್ನೆ ರಾತ್ರಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಸೇನಾಪಡೆಗಳು ಗೌರವ ಪಥ ಸಂಚಲನದ ನಂತರ ಅವರ ಅಂತ್ಯ ಸಂಸ್ಕಾರದ ವೇಳೆ 96 ಕುಶಾಲ ತೋಪುಗಳನ್ನು ಹಾರಿಸಿದರು. ಪ್ರತಿ ಕುಶಾಲ ತೋಪುಗಳು ಅವರು ಜೀವಿಸಿದ್ದ 96 ವರ್ಷಗಳ ಪ್ರತೀಕ ಎಂಬುದನ್ನು ಸಾಂಕೇತಿಕವಾಗಿ ಪ್ರದರ್ಶಿಸಲಾಯಿತು.
ಸಾಮಾನ್ಯವಾಗಿ ರಾಜ್ಯದ ಮುಖಂಡರು ನಿಧನರಾದಾಗ 21 ಕುಶಾಲ ತೋಪುಗಳನ್ನು ಸಿಡಿಸಿ ಗೌರವ ಸಲ್ಲಿಸಲಾಗುತ್ತದೆ. ಆದರೆ 295 ವರ್ಷಗಳಿಂದ ರಾಜ್ಯದ ಪ್ರತಿನಿಧಿಗಳಿಗೆ ಗೌರವ ಸೂಚನೆ ನೀಡಲಾಗುತ್ತಿಲ್ಲ. 1965ರ ನಂತರ ಇದೇ ಮೊದಲ ಬಾರಿ ರಾಯಲ್ ಕುಟುಂಬದ ವ್ಯಕ್ತಿಯೊಬ್ಬರಿಗೆ ಗೌರವ ಸೂಚಕ ಕುಶಾಲ ತೋಪು ಹಾರಿಸಲಾಯಿತು.