ಕಳೆದ ಐದು ವರ್ಷಗಳಲ್ಲಿ, ಭಾರತೀಯ ಪೌರತ್ವವನ್ನು ಪಡೆದಿರುವ ಶೇಕಡಾ 87 ರಷ್ಟು ಅರ್ಜಿದಾರರು ಪಾಕಿಸ್ತಾನದಿಂದ ಬಂದವರು ಎಂಬ ಮಾಹಿತಿ ಹೊರ ಬಿದ್ದಿದೆ.
ಹೌದು, ಇಂಡಿಯಾ ಟುಡೇ ಸಲ್ಲಿಸಿದ ಮಾಹಿತಿ ಹಕ್ಕು (ಆರ್‌ಟಿಐ)ಗೆ ಪ್ರತಿಕ್ರಿಯೆಯಾಗಿ ಗೃಹ ವ್ಯವಹಾರಗಳ ಸಚಿವಾಲಯ ಉತ್ತರಿಸಿದ್ದು, ಕಳೆದ ಐದು ವರ್ಷಗಳಲ್ಲಿ, ಭಾರತೀಯ ಪೌರತ್ವವನ್ನು ಪಡೆದಿರುವ ಶೇಕಡಾ 87 ರಷ್ಟು ಅರ್ಜಿದಾರರು ಪಾಕಿಸ್ತಾನದಿಂದ ಬಂದವರು ಎಂಬ ಮಾಹಿತಿ ನೀಡಿದೆ.
ಕಳೆದ ಐದು ವರ್ಷಗಳಲ್ಲಿ, 5220 ವಿದೇಶಿಯರಿಗೆ ಭಾರತೀಯ ಪೌರತ್ವವನ್ನು ನೀಡಿದ್ದು, ಅದರಲ್ಲಿ 4552 (87%) ಜನರು ಪಾಕಿಸ್ತಾನದಿಂದ ಬಂದವರು ಎಂಬ ಮಾಹಿತಿ ಈ ಆರ್‌ಟಿಐ ನಿಂದ ತಿಳಿದು ಬಂದಿದೆ..

ಕಳೆದ ವರ್ಷ ನವೆಂಬರ್‌ನಲ್ಲಿ ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ 2017 ರಿಂದ 2021 ರವರೆಗೆ (ಸೆ. 10 ರವರೆಗೆ) 6,08,162 ಜನರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ನಿತ್ಯಾನಂದ ರೈ ಲೋಕಸಭೆಗೆ ತಿಳಿಸಿದರು.
ಇಂಡಿಯಾ ಟುಡೇ ಆರ್‌ಟಿಐಗೆ ಪ್ರತಿಕ್ರಿಯೆಯಾಗಿ, ಗೃಹ ಸಚಿವಾಲಯವು 2017 ಮತ್ತು 2022 ರ ನಡುವೆ 5220 ವಿದೇಶಿಯರಿಗೆ ಭಾರತೀಯ ಪೌರತ್ವವನ್ನು ನೀಡಲಾಗಿದೆ ಎಂದು ಹೇಳಿದೆ.
ಪ್ರತಿ ವರ್ಷ ಸರಾಸರಿ 1,21,632 ಜನರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದರು, ಆದರೆ ಕಳೆದ ಐದು ವರ್ಷಗಳಲ್ಲಿ ಸರಾಸರಿ 1044 ಜನರು ಮಾತ್ರ ಭಾರತೀಯ ಪೌರತ್ವವನ್ನು ಪಡೆದಿದ್ದಾರೆ. ಪೌರತ್ವವನ್ನು ಪಡೆಯುವುದಕ್ಕಿಂತ ತ್ಯಜಿಸಿದವರ ಸಂಖ್ಯೆಯೇ ಎತೇಚ್ಚವಾಗಿರುವುದನ್ನು ನಾವಿಲ್ಲಿ ಕಾಣಬಹುದು.

ಭಾರತೀಯರ ಪ್ರಮುಖ ತಾಣವೆಂದರೆ USA ಮತ್ತದರ ಪೌರತ್ವ ಪಡೆಯಲು ಮುಗಿಬೀಳುತ್ತಾರೆ. ಅತ್ಯಂತ ಸೂಕ್ಷ್ಮ ಮಟ್ಟದಲ್ಲಿ ಹಿಮ್ಮುಖ ವಲಸೆ ಕೂಡ ನಡೆಯುತ್ತಿದೆ. ಆದರೆ ಕಳೆದ 5 ವರ್ಷಗಳಲ್ಲಿ ಕೇವಲ 71 ಅಮೆರಿಕನ್ ಪ್ರಜೆಗಳು ಮಾತ್ರ ಭಾರತೀಯ ಪೌರತ್ವ ಪಡೆಯಲು ಆಯ್ಕೆ ಮಾಡಿದೆ. ಇದಕ್ಕೆ ವ್ಯತಿರಿಕ್ತವಾಗಿ, ಪಾಕಿಸ್ತಾನ (87%), ಅಫ್ಘಾನಿಸ್ತಾನ (8%) ಮತ್ತು ಬಾಂಗ್ಲಾದೇಶ (2%) ಭಾರತದ ಪೌರತ್ವವನ್ನು ಪಡೆದು ಮೊದಲ ಮೂರು ದೇಶಗಳಾಗಿ ಹೊರ ಹೊಮ್ಮಿದೆ..
Source : India Today