ಜಗತ್ತಿನಲ್ಲಿ ಓದೋದಕ್ಕೆ (studies) ವಯಸ್ಸು ಅನ್ನೋದು ಇರೋದಿಲ್ಲ . ದೇಹಕ್ಕೆ ವಯಸ್ಸಾಗಬಹುದೇ ಹೊರತು ಕಲಿಕಾಸಕ್ತಿಗೆ ಇಲ್ಲ ಅನ್ನೋದನ್ನ 81 ವರ್ಷದ ಹಿರಿಯ ನಾಗರಿಕರೊಬ್ಬರು(senior citizens) ತೋರಿಸಿಕೊಟ್ಟಿದ್ದಾರೆ. ನಗರದ ಬಿಎಲ್‌ಡಿಇ(BLDE) ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ(Nursing college) ನಡೆಯುತ್ತಿರುವ ಇಗ್ನೋ (indira gandhi national open university ) ಪರೀಕ್ಷೆಯಲ್ಲಿ ಎಂಎ ಇಂಗ್ಲಿಷ್ (MA English) ಅಂತಿಮ ವರ್ಷದ ಪರೀಕ್ಷೆ ಬರೆಯುವ ಮೂಲಕ ನಿಂಗಯ್ಯ ಒಡೆಯರ ಸಾರ್ವಜನಿಕರ ಗಮನ ಸೆಳೆದಿದ್ದಾರೆ
81 ವರ್ಷದ ನಿಂಗಯ್ಯ ಒಡೆಯರ ಅವರು ತಮ್ಮ 5ನೇ ಸ್ನಾತಕೋತ್ತರ ಪದವಿ ಪರೀಕ್ಷೆಯನ್ನ ಬರೆಯುತ್ತಿದ್ದು. ಅವರಲ್ಲಿ ಇರುವ ಓದಿನ ಬಗೆಗಿನ ಆಸಕ್ತಿ, ಹಂಬಲ ಮತ್ತು ಇಚ್ಛಾಶಕ್ತಿ, ಎಲ್ಲರಿಗೂ ಕೂಡ ಪ್ರೇರಣೆಯಾಗುವಂತದ್ದು.

ಇನ್ನು ಈ ನಿಂಗಯ್ಯ ಒಡೆಯರ ಅವರು ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಗುಡೂರು ಬಳಿಯ ಎಸ್.ಸಿ. ಹಳ್ಳಿಯ ನಿವಾಸಿ. ಇವರಿಗೆ ಇಬ್ಬರು ಪುತ್ರರು, ಪುತ್ರಿ ಹಾಗೂ ಐದು ಜನ ಮೊಮ್ಮಕ್ಕಳಿದ್ದಾರೆ. ಆದರೆ, ಒಮ್ಮೆಯೂ ಕೂಡ ಇವರು ತಮ್ಮ ವಿದ್ಯಾರ್ಜನೆಯ ಬಗ್ಗೆ ನಿರಾಸಕ್ತಿಯನ್ನು ತೋರಿಸಿದವರಲ್ಲ. ಇವರ ಮಗಳು ಕೂಡ ಪಿಎಚ್.ಡಿ ಪದವಿ ಪಡೆದಿದ್ದಾರೆ. ಇವರ ಪುತ್ರರು ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಈ ಓದಿನ ಆಸಕ್ತಿಗೆ ಸಾಕಷ್ಟು ಮಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದು ಶಿಕ್ಷಣದಿಂದ ವಂಚಿತರಾದವರು ಕೂಡ ಆಸಕ್ತಿ ಇದ್ದರೆ ಶಿಕ್ಷಣವನ್ನ ಪಡೆಯಲು ಸಾಧ್ಯ ಎಂಬುದನ್ನು ಇವರು ಸಾಧಿಸಿ ತೋರಿಸಿದ್ದಾರೆ.
ಇನ್ನು ನಿಂಗಯ್ಯ ಅವರು ಈ ಹಿಂದೆ ಸರ್ಕಾರಿ ನೌಕರಿಯಲ್ಲಿದ್ದರು, ತಮ್ಮ ಸೇವಾ ನಿವೃತ್ತಿಯ ನಂತರ ಮತ್ತಷ್ಟು ಕಲಿಯಬೇಕು ಎಂಬ ಹಂಬಲದಿಂದ ಮತ್ತೊಮ್ಮೆ ಓದಲೇ ಬೇಕು ಎಂಬ ಹಠಕ್ಕೆ ಬಿದ್ದ ಇವರು, ಕನ್ನಡ, ಹಿಂದಿ ವಿಷಯಗಳಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದರ ಜೊತೆಗೆ ಇಗ್ನೋದಿಂದ ಈಗಾಗಲೇ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿಯನ್ನೂ ಇವರು ಪಡೆದಿದ್ದಾರೆ. ಆದರೂ ಇವರಿಗೆ ಇನ್ನೂ ಓದುವ ಮತ್ತು ಪರೀಕ್ಷೆ ಬರೆಯುವ ಹವ್ಯಾಸ ಮಾತ್ರ ಕಡಿಮೆ ಆಗಿಲ್ಲ. ತಮ್ಮ ಈ ಸಾಧನೆಗೆ ಪತ್ನಿಯೇ ಪ್ರೇರಣೆ ಎಂದು ನಿಂಗಯ್ಯ ಒಡೆಯರ ಸಂತಸದಿಂದಲೇ ಹೇಳಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಇದೀಗ ನಿಂಗಯ್ಯ ಒಡೆಯರ ಅವರ ಈ ಓದಿನ ಆಸಕ್ತಿ ಇಂದಿನ ಯುವ ಪೀಳಿಗೆ ಕೂಡ ಮಾದರಿಯಾಗಿದೆ ಅಂದ್ರೆ ತಪ್ಪಾಗುವುದಿಲ್ಲ





