ಲಸಿಕೆ ಅಭಿಯಾನದಲ್ಲಿ ಇಂದು ಭಾರತ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಭಾರತದ ಶೇ.75ರಷ್ಟು ವಯಸ್ಕರು ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆದಿರುವುದಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ʻ75ರಷ್ಟು ವಯಸ್ಕರು ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ಈ ಮಹತ್ತರ ಸಾಧನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಈ ಕುರಿತು ಮೊದಲು ಟ್ವೀಟ್ ಮಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಮನ್ಸೂಖ್ ಮಾಂಡವೀಯಾ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ರಿಟ್ವೀಟ್ ಮಾಡಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಮಾಂಡವೀಯಾ, ʻಸಬ್ಕಾ ಸಾಧ್ ಸಭ್ಕಾ ಪ್ರಯಾಸ್ʼ ಎಂಬ ಅಂಶದೊಂದಿಗೆ ದೇಶವು ತನ್ನ ವಯಸ್ಕ ಜನಸಂಖ್ಯೆಯ ಶೇ.75ರಷ್ಟು ಜನಸಂಖ್ಯೆಯು ಎರಡು ಡೋಸ್ ಲಸಿಕೆಗಳನ್ನು ಪಡೆದಿದೆ. ಕೋವಿಡ್ ವಿರುದ್ದ ಹೋರಾಟದಲ್ಲಿ ನಾವು ಇನ್ನಷ್ಟು ಬಶಾಲಿಯಾಗಿದ್ದೇವೆ ಮತ್ತು ಇನ್ನು ಲಸಿಕೆ ಪಡೆಯದವರು ಆದಷ್ಟು ಬೇಗ ಲಸಿಕೆ ಪಡೆಯಿರಿ ಎಂದು ಟ್ವೀಟ್ ಮಾಡಿದ್ದಾರೆ.