ಬೆಂಗಳೂರು: ಹಾಡಹಗಲೇ ನಡೆದ ರಾಬರಿ ಪ್ರಕರಣದ ಸಂಬಂಧ ಪೊಲೀಸರು 5 ಕೋಟಿ 30 ಲಕ್ಷ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಆಂದ್ರದಲ್ಲಿ ಈ ಹಣವನ್ನು ಪೊಲೀಸರಿಗೆ ವಶಕ್ಕೆ ಪಡೆದಿದ್ದಾರೆ. ಆದರೆ ಉಳಿದ ಹಣ ಜೊತೆ ಕೆಲ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ನಿನ್ನೆಯಿಂದಲೂ ಆಂಧ್ರದಲ್ಲಿ ಬಿಡುಬಿಟ್ಟಿರುವ ಬೆಂಗಳೂರು ಪೊಲೀಸರು ಹಣವಿದ್ದ ಕಾರ್ ಪತ್ತೆ ಮಾಡಿ ಇಬ್ಬರನ್ನ ವಶಕ್ಕೆ ಪಡೆದಿದ್ದರು. ಬಳಿಕ ಕಾರ್ ನಲ್ಲಿ 5 ಕೋಟಿ 30 ಲಕ್ಷ ಹಣ ಸೀಜ್ ಮಾಡಿದ್ದಾರೆ.

ಇನ್ನು ಘಟನೆ ಸಂಬಂಧ ಇದುವರೆಗೆ ಕಾನ್ಸ್ ಟೇಬಲ್ ಅಣ್ಣಪ್ಪ ನಾಯ್ಕ್ ಸೇರಿದಂತೆ ಸಿಎಂಎಸ್ ನ ನಾಲ್ಕು ಜನ ಸಿಬ್ಬಂದಿ, ಸಿಎಂಎಸ್ ಹಳೆ ಸಿಬ್ಬಂದಿ ಝೆವಿಯರ್ ದರೋಡೆಗೆ ಬಳಸಿದ್ದ ಕಾರು ನೀಡಿದ್ದ ಕಲ್ಯಾಣ ನಗರದ ಇಬ್ಬರು ಸೇರಿ ಒಟ್ಟು 8 ಜನರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಕಾನ್ಸ್ ಟೇಬಲ್ ಅಣ್ಣಪ್ಪ ನಾಯ್ಕ್, ಝೇವಿಯರ್ ಬಂಡವಾಳ ಬಯಲಾಗಿದೆ. ಸಿಎಂಎಸ್ ನಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಝೇವಿಯರ್ ಮತ್ತು ಕಾನ್ಸ್‌ಟೇಬಲ್ ಅಣ್ಣಪ್ಪ ಇಬ್ಬರೂ ಸ್ನೇಹಿತರು. ಒಂದು ಕಡೆ ವರ್ಷದ ಹಿಂದೆ ಸಿಎಂಎಸ್ ನಲ್ಲಿ ಕೆಲಸ ಬಿಟ್ಟಿದ್ದ ಝೇವಿಯರ್ ಮತ್ತೊಂದು ಕಡೆ ಕ್ರೈಂ ಬೀಟ್ ನಿಂದ ತೆಗೆದು ಹೊಯ್ಸಳಕ್ಕೆ ಅಣ್ಣಪ್ಪನನ್ನ ಹಾಕಲಾಗಿತ್ತು.

ಕೆಲಸವಿಲ್ಲದೆ ಇಬ್ಬರೂ ಸೇರಿ ಪ್ರತಿದಿನ ಸೇರುತ್ತಿದ್ದರು. ಈ ವೇಳೆ ಸಿಎಂಎಸ್ ನ ಹಣ ರವಾನೆಯ ಎಲ್ಲಾ ವಿಚಾರ ಹೇಳಿಕೊಂಡಿದ್ದ ಝೇವಿಯರ್. ಹೀಗಾಗಿ ಸಿಎಂಎಸ್ ಪ್ಲಾನ್ ನಂದು ಎಸ್ಕೇಪ್ ಪ್ಲಾನ್ ನಿಂದು ಎಂದು ಇಬ್ಬರು ಮಾತನಾಡಿಕೊಂಡಿದ್ದರು. ಇದಕ್ಕಾಗಿ ಈ ಹಿಂದೆ ಬಾಣಸವಾಡಿಯಲ್ಲಿ ಕ್ರೈಂ ಬೀಟ್ ಮಾಡಿದ್ದ ಅಣ್ಣಪ್ಪ,
ಬಾಣಸವಾಡಿಯ ಹುಡುಗರನ್ನ ಕರೆಸಿ ಝೇವಿಯರ್ ಜೊತೆಗೂಡಿ ಸ್ಕೆಚ್ ಹಾಕಿ ಕೊಟ್ಟಿದ್ದ. ಆದರೆ ದರೋಡೆ ಸಂದರ್ಭ ಝೇವಿಯರ್ ಮತ್ತು ಅಣ್ಣಪ್ಪ ಇಬ್ಬರೂ ಸ್ಪಾಟ್ ಗೆ ಬಂದಿರಲಿಲ್ಲ. ರೂಟ್ ಮ್ಯಾಪ್ ರೆಡಿ ಮಾಡಿಕೊಟ್ಟು ವಾಚ್ ಮಾಡ್ತಾ ಕುಳಿತಿದ್ದರು.
ಸದ್ಯ ಝೇವಿಯರ್ ಮತ್ತು ಕಾನ್ಸ್‌ಟೇಬಲ್ ಅಣ್ಣಪ್ಪನನ್ನ ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.












