ಕನ್ನಡದ ಡೊಳ್ಳು ಹಾಗೂ ತುಳುವಿನ ಜೀಟಿಗೆ ಚಿತ್ರಗಳು 68ನೇ ರಾಷ್ಟ್ರೀಯ ಫಿಲ್ಮ್ಸ್ ನ ಶ್ರೇಷ್ಠ ಚಿತ್ರಗಳಾಗಿ ಆಯ್ಕೆಯಾಗಿವೆ.
ನಿರ್ದೇಶಕ ಪವನ್ ಒಡೆಯರ್ ಮೊದಲ ಬಾರಿ ನಿರ್ಮಿಸಿದ ಡೊಳ್ಳು ಚಿತ್ರ ಮೊದಲ ಪ್ರಯತ್ನದಲ್ಲೇ ಕನ್ನಡ ಶ್ರೇಷ್ಠ ಚಿತ್ರವಾಗಿ ಹೊರಹೊಮ್ಮಿದೆ. ಸಾಗರ್ ಪುರಾಣಿಕ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಜಾನಪದ ಕಲೆ ಡೊಳ್ಳು ಕುಣಿತ ಕುರಿತ ಈ ಚಿತ್ರ ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಇದರ ಕಿರೀಟಕ್ಕೆ ಮತ್ತೊಂದು ಗರಿ ಏರಿದೆ.

ಇದೇ ವೇಳೆ ಜೀಟಿಗೆ ತುಳು ಚಿತ್ರ ದೇಶದ ಅತ್ಯುತ್ತಮ ಪ್ರಾದೇಶಿಕ ಚಿತ್ರವಾಗಿದೆ. ಸಂತೋಷ್ ಮಾಡ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಅರುಣ್ ರೈ ಜೋಡಾರ್ ನಿರ್ಮಿಸಿದ್ದಾರೆ.












