ಬೇಸಿಗೆಕಾಲದಲ್ಲಿ ಬೀಸಿದ ಬಿಸಿಗಾಳಿಗೆ 8 ದಿನದಲ್ಲಿ 679 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಪೇನ್ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಯುರೋಪ್ ದೇಶಗಳಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಬಿಸಿಗಾಳಿಗೆ ಜನರು ತತ್ತರಿಸಿದ್ದು, ಜೂನ್ 10ರಿಂದ 17ರವರೆಗೆ ಸ್ಪೇನ್ ನಲ್ಲಿ 679 ಮಂದಿ ಬಿಸಿಗಾಳಿ ತಡೆಯಲಾಗದೇ ಅಸುನೀಗಿದ್ದಾರೆ.
ಜುಲೈ 17ರಂದು ಒಂದೇ ದಿನ 169 ಮಂದಿ ಬಿಸಿಗಾಳಿಯಿಂದ ಮೃತಪಟ್ಟಿದ್ದಾರೆ. ಮೃತಪಟ್ಟ 679 ಮಂದಿಯಲ್ಲಿ 430 ಮಂದಿ 85 ವರ್ಷ ಮೇಲ್ಪಟ್ಟವರಾಗಿದ್ದಾರೆ. 159 ಮಂದಿ 75ರಿಂದ 84 ವರ್ಷ ಆಗಿದೆ. 58 ಮಂದಿ 65ರಿಂದ 74 ವಯೋಮಾನದವರಾಗಿದ್ದಾರೆ.

ಈಗ ದೇಶವನ್ನು ಕಾಡುತ್ತಿರುವುದು ಎರಡನೇ ಅಲೆಯಾಗಿದ್ದು, ಇದು ಕಡಿಮೆ ಪ್ರಮಾಣದ್ದಾಗಿದೆ. ಆದರೆ ಮೊದಲ ಬಾರಿ ಕಾಣಿಸಿಕೊಂಡ ಬಿಸಿಗಾಳಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ್ದಾಗಿದೆ ಎಂದು ಸರಕಾರ ವಿವರ ನೀಡಿದೆ.
2022ರಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಬಿಸಿಗಾಳಿಯಲ್ಲಿ 829 ಮಂದಿ ಮೃತಪಟ್ಟಿದ್ದರು, ಇದುವರೆಗೆ ಬಿಸಿಗಾಳಿಗೆ ಮೃತಪಟ್ಟವರ ಸಂಖ್ಯೆ ಒಟ್ಟಾರೆಯಾಗಿ 1508ಕ್ಕೆ ಏರಿಕೆಯಾಗಿದೆ.