ಗ್ರೇಟರ್ ನೋಯ್ಡಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಟೌನ್ ಶಿಪ್ ಯೋಜನೆಯು (GNIDA) ಬೀದಿ ಎಲ್ ಇ ಡಿ ದೀಪಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಚೀನಾ ಕಂಪನಿಯಿಂದ 600 ಕೋಟಿ ರೂ ಹೂಡಿಕೆಯನ್ನು ಪಡೆದಿದೆ.
ಹೌದು, GNIDA ಬೀದಿ ಎಲ್ ಇ ಡಿ ದೀಪಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಚೀನಾ ಕಂಪನಿಯಿಂದ 600 ಕೋಟಿ ರೂ. ಹೂಡಿಕೆಯನ್ನು ಪಡೆದಿದ್ದು, ಉತ್ಪಾದನ ಘಟಕ ಆರಂಭದ ಅಂಗವಾಗಿ ಚೀನಾದ ಚಿನ್‌ಫೆಂಗ್ ಉದ್ಯೋಗಿಗಳು ಮತ್ತು ಗ್ರೇಟರ್ ನೋಯ್ಡಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಒಗ್ಗೂಡಿಸಿ ಸಮಾರಂಭ ನಡೆಸಲಾಗಿದೆ. ಮುಂದಿನ ಒಂದೂವರೆ ವರ್ಷಗಳಲ್ಲಿ ಈ ಘಟಕಗಳು ಕಾರ್ಯನಿರ್ವಹಿಸುವ ನಿರೀಕ್ಷೆದೆ ಎಂದು ವರದಿಗಳು ತಿಳಿಸಿವೆ.
ಚೆನ್‌ಫೆಂಗ್ ನ ಅಧಿಕಾರಿಗಳು ದೇಶಾದ್ಯಂತ ವಿವಿಧ ಸ್ಥಳಗಳನ್ನು ಸಮೀಕ್ಷೆ ಮಾಡಿದ ನಂತರ ತಮ್ಮ ಯೋಜನೆಗೆ ಸೂಕ್ತ ಪ್ರದೇಶವನ್ನು ಆಯ್ಕೆ ಮಾಡಿದೆ. ಘಟಕದ ಉತ್ಪಾದನಾ ವಿಸ್ತೀರ್ಣ 64,000 ಚದರ ಮೀಟರ್ ಇರುತ್ತದೆ ಮತ್ತು ಈ ಯೋಜನೆಯಿಂದಾಗಿ 5000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ಪಾದನೆ ಮತ್ತು ಇತರೆ ಚಟುವಟಿಕೆಗಳಿಗೆ ಕಂಪನಿಗಳು ತಮ್ಮ ನೆಲೆಯನ್ನು ಸ್ಥಾಪಿಸಲು 750 ಎಕರೆ ಪಟ್ಟಣ ಪ್ರದೇಶವನ್ನು GNIDA ಅಭಿವೃದ್ಧಿಪಡಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
GNIDA ಅಧಿಕಾರಿಗಳ ಪ್ರಕಾರ, ಚೆನ್‌ಫೆಂಗ್ ನ ಐದು ಕಂಪನಿಗಳಲ್ಲಿ ನಾಲ್ಕು ಕಂಪನಿಗಳು ಹೇರ್ ಎಲೆಕ್ಟ್ರಾನಿಕ್ಸ್, ಸತ್ಕೃತಿ ಇನ್ಫೋಟೈನ್‌ಮೆಂಟ್, ಚೆನ್‌ಫೆಂಗ್, ಫಾರ್ಮಿ ಮೊಬೈಲ್ ಮತ್ತು ಜೆ ವರ್ಲ್ಡ್ ಈಗಾಗಲೇ ತಮ್ಮ ಉತ್ಪಾದನಾ ಘಟಕ ನಿರ್ಮಿಸುವ ಕೆಲಸವನ್ನು ಆರಂಭಿಸಿದೆ. ಟೌನ್ಶಿಪ್ ಯೋಜನೆಯು ಈ ಪ್ರದೇಶದಲ್ಲಿ ವ್ಯಾಪಾರ ಚಟುವಟಿಕೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.