ಆರು ವರ್ಷದ ಬಾಲಕನೊಬ್ಬನ ತಲೆ ಒಡೆದು, ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ ನಡೆದಿದೆ.
ಘಟನೆ ಸಂಬಂಧ ಪೊಲೀಸರು ಬಿಹಾರ ಮೂಲದ ವಿಜಯ್ ಕುಮಾರ್, ಅಮರ್ ಕುಮಾರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಆರೋಪಿಗಳು ಹಾಗೂ ಮೃತ ಬಾಲಕನ ತಂದೆ ತಾಯಿ ಕಟ್ಟದ ಕಾರ್ಮಿಕರಾಗಿದ್ದು ಒಂದೇ ಪ್ರದೇಶದಲ್ಲಿ ವಾಸವಿದ್ದರು. ಜೀವನದಲ್ಲಿ ಅಭಿವೃದ್ದಿ ಹೊಂದಲು ಈ ಕೆಲಸ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬೆಳ್ಳಗ್ಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ನವರಾತ್ರಿ ಪ್ರಯುಕ್ತ ಭಜನೆ ಮಾಡುತ್ತಿದ್ದರು ಈ ವೇಳೆ ಬಾಲಕ ಅಲ್ಲಿಯೇ ಓಡಾಡಿಕೊಂಡಿದ್ದ ಕೆಲ ಹೊತ್ತಿನ ನಂತರ ಆತ ನಾಪತ್ತೆಯಾಗಿರುವುದು ಕಂಡು ಬಂತು. ಗುಡಿಸಿಲೊಂದರ ಬಳಿ ರಕ್ತ ಕಂಡು ಬಂತು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.