• Home
  • About Us
  • ಕರ್ನಾಟಕ
Wednesday, December 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಪೆಗಾಸಸ್ ಪ್ರಕರಣ: ಆರು ಟಿಎಂಸಿ ಸಂಸದರು ಅಮಾನತು

Shivakumar A by Shivakumar A
August 5, 2021
in ದೇಶ, ರಾಜಕೀಯ
0
ಪೆಗಾಸಸ್ ಪ್ರಕರಣ: ಆರು ಟಿಎಂಸಿ ಸಂಸದರು ಅಮಾನತು
Share on WhatsAppShare on FacebookShare on Telegram

ಸಂಸತ್ತಿನಲ್ಲಿ ಪೆಗಾಸಸ್ ವಿರುದ್ದ ನಡೆಯುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರೆದಿತ್ತು. ವಿರೋಧ ಪಕ್ಷದ ನಾಯಕರು ಪೆಗಾಸಸ್ ಪ್ರಕರಣದ ವಿರುದ್ದ ಉನ್ನತ ಮಟ್ಟದ ತನಿಖೆಗಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಸರ್ಕಾರ ಮಾತ್ರ ಇದು ಗಂಭೀರವಾದ ವಿಚಾರವೇ ಅಲ್ಲ ಎಂದು ಕೈ ತೊಳೆದುಕೊಂಡಿದೆ. ಆದರೂ, ಪಟ್ಟು ಬಿಡದ ವಿಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿವೆ.

ADVERTISEMENT

ಬುಧವಾರ ಪೆಗಾಸಸ್ ವಿಚಾರವಾಗಿ ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದ ಆರು ಜನ ತೃಣಮೂಲ ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಲಾಗಿದೆ. ರಾಜ್ಯಸಭೆಯ 255ನೇ ನಿಯಮದ ಪ್ರಕಾರ ಸದನದಲ್ಲಿ ತಪ್ಪಾದ ನಡವಳಿಕೆಯನ್ನು ಪ್ರದರ್ಶಿಸಿದ ಕಾರಣಕ್ಕಾಗಿ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಧ್ಯಕ್ಷರಾಗಿರುವ ವೆಂಕಯ್ಯ ನಾಯ್ಡು ಅವರು ಈ ತೀರ್ಮಾನ ಕೈಗೊಂಡಿದ್ದಾರೆ.

ಟಿಎಂಸಿಯ ಡೋಲಾ ಸೇನ್, ಮದೀಮುಲ್ ಹಕ್, ಅರ್ಪಿತಾ ಘೋಷ್, ಮೌಸಮ್ ನೂರ್, ಶಾಂತಾ ಛೇತ್ರಿ ಮತ್ತು ಅಬೀರ್ ರಂಜನ್ ಬಿಸ್ವಾಸ್ ಅಮಾನತುಗೊಂಡಿರುವ ಸಂಸದರು. ಸಂಸತ್ತಿನಲ್ಲಿ ಪೆಗಾಸಸ್ ಕುರಿತು ಚರ್ಚೆ ನಡೆಸಲೇಬೇಕೆಂದು ಟಿಎಂಸಿ ನಾಯಕರು ಪಟ್ಟು ಹಿಡಿದಿದ್ದರು.

ನಂತರ ಪ್ರತಿಭಟನೆಗೆ ಮುಂದಾದ ಸಂಸದರನ್ನು ತಮ್ಮ ಸ್ಥಾನಕ್ಕೆ ಮರಳುವಂತೆ ವೆಂಕಯ್ಯ ನಾಯ್ಡು ಅವರು ಮನವಿ ಮಾಡಿದರು. ಕೈಯಲ್ಲಿ ಪ್ಲಕಾರ್ಡ್ ಹಿಡಿದು ಪ್ರತಿಭಟಿಸುತ್ತಿರುವವರ ವಿರುದ್ದ 255ನೇ ನಿಯಮದಡಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು. ಆದರೆ, ಇದಾವುದಕ್ಕೂ ಬಗ್ಗದ ಟಿಎಂಸಿ ಸಂಸದರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರು.

ಈ ಕಾರಣಕ್ಕಾಗಿ, ಸಂಸತ್ತಿನ ಪೀಠದ ಆದೇಶ ಪಾಲಿಸದ ಹಿನ್ನೆಲೆ ಹಾಗೂ ಪ್ಲಕಾರ್ಡ್ ಪ್ರದರ್ಶಿಸಿದ ಕಾರಣಕ್ಕೆ 255ನೇ ನಿಯಮದಂತೆ ಪ್ರತಿಭಟನಾ ನಿರತ ನಾಯಕರು ಸದನ ಬಿಟ್ಟು ಹೊರ ನಡೆಯಬೇಕು ಎಂದು ಸಭಾಧ್ಯಕ್ಷರು ಆದೇಶ ನೀಡಿದರು.

ಇದು ಬಿಜೆಪಿಯ ಮೋದಿ ಸರ್ಕಾರದ ಸೋಲು- ಅಭಿಷೇಕ್ ಬ್ಯಾನರ್ಜಿ

ಟಿಎಂಸಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಅಭಿಷೇಕ್ ಬ್ಯಾನರ್ಜಿ ಅವರು ಸಂಸದರ ಅಮಾನತಿನ ವಿರುದ್ದ ಕಿಡಿ ಕಾರಿದ್ದಾರೆ. ಪೆಗಾಸಸ್ ವಿವಾದದ ಕುರಿತು ಚರ್ಚೆ ನಡೆಸದೇ ಪ್ರತಿಭಟನಾ ನಿರತ ಸಂಸದರನ್ನು ಅಮಾನತುಗೊಳಿಸಿರುವುದು ಮೋದಿ ಆಡಳಿತದ ಸೋಲು ಎಂದು ಟೀಕಿಸಿದ್ದಾರೆ.

ಸತ್ಯಕ್ಕಾಗಿ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಹೇಳಿರುವ ಬ್ಯಾನರ್ಜಿ, ನೀವು ನಮ್ಮನ್ನು ಅಮಮಾನತುಗೊಳಿಸಬಹುದು ಆದರೆ, ಮೌನವಾಗಿಸಲು ಸಾಧ್ಯಂವಿಲ್ಲ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.

“ಸಂಸದರ ಮೇಲೆ ಕ್ರಮ ಕೈಗೊಂಡಿರುವುದು ಬಿಜೆಪಿಯ 56 ಇಂಚು ಎದೆಯುಳ್ಳ ಗಾಡ್ ಫಾದರ್ ಸೋಲೊಪ್ಪಿಕೊಂಡಂತೆ. ನಮ್ಮನ್ನು ಅಮಾನತುಗೊಳಿಸಬಹುದು. ಆದರೆ, ಮೌನವಾಗಿಸಲು ಸಾಧ್ಯವಿಲ್ಲ. ಸತ್ಯಕ್ಕಾಗಿ ಹಾಗೂ ನಮ್ಮ ಜನಗಳಿಗಾಗಿ ನಡೆಸುತ್ತಿರುವ ಈ ಹೋರಾಟದಲ್ಲಿ ನಾವು ಒಂದಿಂಚೂ ಕದಲುವುದಿಲ್ಲ. ನಮ್ಮ ಕೊನೆಯುಸಿರಿನ ವರೆಗೂ ಹೊರಾಡುತ್ತೇವೆ,” ಎಂದು ಟ್ವೀಟರ್’ನಲ್ಲಿ ಬರೆದುಕೊಂಡಿದ್ದಾರೆ.

The crackdown on our MPs clearly indicates that @BJP4India's 56-inch GODFATHER has CONCEDED DEFEAT!

YOU CAN SUSPEND US BUT YOU CANNOT SILENCE US!
We will not budge an inch to fight for our people & to fight for the truth.

Until the last drop of our blood –
BRING IT ON! pic.twitter.com/7MvM6saDIH

— Abhishek Banerjee (@abhishekaitc) August 4, 2021
Tags: BJPLokSabhampPegasusSuspendsTMC Partyನರೇಂದ್ರ ಮೋದಿಬಿಜೆಪಿ
Previous Post

ಭಾರತೀಯ ಪೌರತ್ವಕ್ಕಾಗಿ ಸಲ್ಲಿಸಿದ್ದ 4,046 ಹಿಂದೂಗಳ ಅರ್ಜಿ ಇನ್ನೂ ಬಾಕಿ –ಕೇಂದ್ರ ಸರ್ಕಾರ

Next Post

ಝಮೀರ್ ಮನೆಗೆ ದಾಳಿ ಮಾಡಿದ್ದು ಐಟಿ ಇಲಾಖೆಯಲ್ಲ: ಅಧಿಕಾರಿಯಿಂದ ಸ್ಪಷ್ಟನೆ

Related Posts

Top Story

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

by ಪ್ರತಿಧ್ವನಿ
December 3, 2025
0

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣದೇವಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಚರ್ಚೆ. ನೌಕರರ ಪ್ರಮುಖರ ಜತೆ ಅನ್ನಪೂರ್ಣದೇವಿ ಅವರನ್ನು ಭೇಟಿಯಾಗಿ ಚರ್ಚಿಸಿದ ಹೆಚ್ಡಿಕೆ...

Read moreDetails

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

December 3, 2025
Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

December 3, 2025
ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

December 3, 2025
ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

December 3, 2025
Next Post
ಝಮೀರ್ ಮನೆಗೆ ದಾಳಿ ಮಾಡಿದ್ದು ಐಟಿ ಇಲಾಖೆಯಲ್ಲ: ಅಧಿಕಾರಿಯಿಂದ ಸ್ಪಷ್ಟನೆ

ಝಮೀರ್ ಮನೆಗೆ ದಾಳಿ ಮಾಡಿದ್ದು ಐಟಿ ಇಲಾಖೆಯಲ್ಲ: ಅಧಿಕಾರಿಯಿಂದ ಸ್ಪಷ್ಟನೆ

Please login to join discussion

Recent News

Top Story

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

by ಪ್ರತಿಧ್ವನಿ
December 3, 2025
Top Story

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

by ಪ್ರತಿಧ್ವನಿ
December 3, 2025
Top Story

ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್..!!

by ಪ್ರತಿಧ್ವನಿ
December 3, 2025
Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!
Top Story

Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

by ಪ್ರತಿಧ್ವನಿ
December 3, 2025
ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
Top Story

ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

by ಪ್ರತಿಧ್ವನಿ
December 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

December 3, 2025

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

December 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!