ರಾಜ್ಯದಲ್ಲಿ ಮತ್ತೆ ಹೊಸ ಆರು ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಓಮಿಕ್ರಾನ್ ಸ್ಫೋಟಗೊಂಡಿದ್ದು ಒಟ್ಟು ಐದು ಓಮಿಕ್ರಾನ್ ಸೋಂಕಿತರು ಪತ್ತೆಯಾಗಿದ್ದಾರೆ. ಇದರ ಹೊರತಾಗಿ ಯುಕೆಯಿಂದ ಬಂದ ಯುವತಿಯೊಬ್ಬರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದ ಒಟ್ಟು ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕ್ಲಸ್ಟರ್ ಒಂದರಲ್ಲಿ 14 ಕೊರೋನಾ ಪಾಸಿಟಿವ್ ಪ್ರಕರಣದ ಪೈಕಿ 4 ಮಂದಿಗೆ ಓಮಿಕ್ರಾನ್ ದೃಢವಾಗಿದ್ದರೆ, ಎರಡನೇ ಕ್ಲಸ್ಟರ್ 19 ಕೊರೋನಾ ಪಾಸಿಟಿವ್ ಸೋಂಕಿತರ ಪೈಕಿ ಒಬ್ಬರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ.
ಓಮಿಕ್ರಾನ್ ಕೇಸ್ 9 :
18 ವರ್ಷದ ಯುವತಿ ಡಿಸೆಂಬರ್ 10 ರಂದು ಯುಕೆಯಿಂದ ಆಗಮಿಸಿದ್ದರು. ಯುಕೆಯಿಂದ ನೆಗೆಟಿವ್ ವರದಿ ಪಡೆದುಕೊಂಡೇ ನಗರಕ್ಕೆ ಬಂದಿದ್ದರು. ಡಿಸೆಂಬರ್ 10ರಂದು ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದರು. ತಕ್ಷಣವೇ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಯುಕೆಯ Pfizer ಎಂಬ ಲಸಿಕೆಯ ಎರಡೂ ಡೋಸ್ ಪಡೆದುಕೊಂಡಿದ್ದರು. ಇವರಿಗೆ 3 ಪೈಮರಿ ಕಾಂಟಾಕ್ಟ್ & 16 ಸೆಕೆಂಡರಿ ಕಾಂಟಾಕ್ಟ್ ಪತ್ತೆಯಾಗಿದ್ದು, ಕೊರೋನಾ ಪರೀಕ್ಷೆಯಲ್ಲಿ ಎಲ್ಲರೂ ನೆಗೆಟಿವ್ ಆಗಿದ್ದಾರೆ.
ಓಮಿಕ್ರಾನ್ ಕೇಸ್ 10 :
19 ವರ್ಷದ ಯುವತಿಯಲ್ಲಿ ಪತ್ತೆಯಾದ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಈಕೆಯ ಟ್ರಾವೆಲ್ ಹಿಸ್ಟರಿ ಇನ್ನೂ ಟ್ರೇಸ್ ಔಟ್ ಆಗಿಲ್ಲ. ಡಿಸೆಂಬರ್ 9ರಂದು ಕೊರೋನಾ ಪಾಸಿಟಿವ್ ಆಗಿತ್ತು. ಇವರು ಕೋವಿಶೀಲ್ಡ್ ಎರಡೂ ಡೋಸ್ ಪಡೆದುಕೊಂಡಿದ್ದರು. ಇವರಿಗೆ 42 ಪ್ರೈಮರಿ ಹಾಗೂ 293 ಸೆಕೆಂಡರಿ ಕಾಂಟಾಕ್ಟ್ ಟ್ರೇಸ್ ಔಟ್ ಆಗಿದೆ. ಈ ಪೈಕಿ 18 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಒಟ್ಟು 19 ಮಂದಿಯ ಸ್ಯಾಂಪಲ್ಸ್ ಜಿನೋಮಿಕ್ ಸೀಕ್ವೆನ್ಸಿಂಗ್ ಕಳುಹಿಸಲಾಗಿದೆ.
ಓಮಿಕ್ರಾನ್ ಕೇಸ್ 11, 12, 13 & 14 :
ಓಮಿಕ್ರಾನ್ 11, 12, 13 ಮತ್ತು 14ನೇ ಪ್ರಕರಣಗಳು ಸಮವಾಗಿ, 14 ವರ್ಷದ ಬಾಲಕಿ, 13 ವರ್ಷದ ಬಾಲಕಿ, 14 ವರ್ಷದ ಬಾಲಕಿ ಹಾಗೂ 14ನೇ ಕೇಸ್ 14 ವರ್ಷದ ಬಾಲಕಿಯಲ್ಲಿ ಈ ಓಮಿಕ್ರಾನ್ ರೂಪಾಂತರಿ ಪತ್ತೆಯಾಗಿದೆ.
ಈ ಎಲ್ಲಾ ಪ್ರಕರಣಗಳಲ್ಲೂ ಕೂಡ ಬಾಲಕಿಯರ ಟ್ರಾವೆಲ್ ಹಿಸ್ಟರಿ ಇನ್ನೂ ಪತ್ತೆಯಾಗಿಲ್ಲ. ಎಲ್ಲರೂ ಕೂಡ ನವೆಂಬರ್ 22ರಂದು ಕೊರೋನಾ ಪಾಸಿಟಿವ್ ಆಗಿದ್ದರು. ಮಂಗಳೂರಿನ ಬಂಟ್ವಾಳದ ಹಾಸ್ಟೆಲ್ ಒಂದರಲ್ಲಿ ಇವರೆಲ್ಲರೂ ಜೊತೆಗಿದ್ದರು. ಈ ನಾಲ್ಕು ಸೋಂಕಿತರಿಗೆ ಗಂಭೀರವಾದ ಗುಣ ಲಕ್ಷಣಗಳಿದ್ದು, ಜ್ವರ, ನಾಲಗೆ ರುಚಿ ಹಾಗೂ ಸ್ಮೆಲ್ ಕಳೆದುಕೊಂಡಿದ್ದರು. ಈ ನಾಲ್ಕು ಸೋಂಕಿತರೂ ಒಬ್ಬರಿಗೊಬ್ಬರು ಪ್ರಾಥಮಿಕ ಸಂಪರ್ಕಿತರಾಗಿದ್ದು, ಒಟ್ಟಾರೆ ಇವರಿಗೆ 79 ಪ್ರೈಮರಿ & 203 ಸೆಕೆಂಡರಿ ಕಾಂಟಾಕ್ಟ್ ಪತ್ತೆಯಾಗಿದೆ. ಈ ಪೈಕಿ 13 ಕೊರೋನಾ ಪಾಸಿಟಿವ್ ಆಗಿದೆ. ಜೊತೆಗೆ 12 ಮಂದಿ ಸ್ಯಾಂಪಲ್ಸ್ ಅನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಕಳುಹಿಸಲಾಗಿದೆ.
ಒಟ್ಟಾರೆ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ನ್ಯೂ ಇಯರ್ ಗೆ ಹೆಚ್ಚು ಕಮ್ಮಿ ನಿರ್ಬಂಧಗಳು ವಿಧಿಸುವ ಲಕ್ಷಣಗಳು ದಟ್ಟವಾಗಿ ಗೋಚರವಾಗಿದೆ