ಇನ್ನೆರಡು-ಮೂರು ವರ್ಷಗಳಲ್ಲಿ ದೇಶದ ಬಹುತೇಕ ಭಾಗದಲ್ಲಿ 5ಜಿ ಸೇವೆಗಳು ಲಭ್ಯವಾಗಲಿದ್ದು ಕೈಗೆಟುಕುವ ದರದಲ್ಲಿ ಸಿಗುವ ನಿರೀಕ್ಷೆಯಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಟೆಲಿಕಾಂ ಮೂಲಸೌಕರ್ಯವನ್ನು ತ್ವರಿತವಾಗಿ ಹೊರತರಲು ಅನುಕೂಲವಾಗುವಂತೆ 5G ರೈಟ್-ಆಫ್-ವೇ ಅಪ್ಲಿಕೇಶನ್ ಪೋರ್ಟಲ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಸಚಿವರು,ನಮ್ಮ ಅಂದಾಜಿನ ಪ್ರಕಾರ ಮುಂದಿನ 2-3 ವರ್ಷಗಳಲ್ಲಿ ದೇಶದ ಬಹುತೇಕ ಎಲ್ಲಾ ಭಾಗಗಳಿಗೂ 5ಜಿ ತಲುಪುತ್ತದೆ. ಭಾರತದಲ್ಲಿ ಮೊಬೈಲ್ ಸೇವೆಗಳು ವಿಶ್ವದ ಅತ್ಯಂತ ಕೈಗೆಟುಕುವ ಸೇವೆಗಳಲ್ಲಿ ಒಂದಾಗಿದೆ. 3 ಲಕ್ಷ ಕೋಟಿ ರೂಪಾಯಿಗಳು ದೊಡ್ಡ ಹೂಡಿಕೆಯಾಗಿದೆ. ಇದು ಉತ್ತಮ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
5G ಸೇವೆಗಳನ್ನು ಅಕ್ಟೋಬರ್‌ನೊಳಗೆ ಪ್ರಾರಂಭಿಸಬೇಕು. ಟೆಲಿಕಾಂ ಕೇಬಲ್‌ಗಳನ್ನು ಹಾಕುವುದು, ವಿದ್ಯುತ್ ಕಂಬಗಳು, ಬೀದಿ ಪೀಠೋಪಕರಣಗಳನ್ನು ಹಾಕಲು ನಿಯಮ ತಿದ್ದುಪಡಿ ಮಾಡಲಾಗಿದ್ದು, ಇಂಡಿಯನ್ ಟೆಲಿಗ್ರಾಫ್ ರೈಟ್ ಆಫ್ ವೇ(ತಿದ್ದುಪಡಿ) ನಿಯಮಗಳು 2022ರ ಪ್ರಕಾರ, ಟೆಲಿಕಾಂ ಕಂಪನಿಗಳು ಖಾಸಗಿ ಆಸ್ತಿಗಳ ಮೇಲೆ ಕೇಬಲ್‌ಗಳನ್ನು ಹಾಕಲು, ಮೊಬೈಲ್ ಟವರ್‌ಗಳು ಅಥವಾ ಕಂಬಗಳನ್ನು ಸ್ಥಾಪಿಸಲು ಅಧಿಕಾರಿಗಳಿಂದ ಯಾವುದೇ ಅನುಮೋದನೆಯ ಅಗತ್ಯವಿರುವುದಿಲ್ಲ.

DoT ಆಯೋಜಿಸಿದ 5G ಹರಾಜಿನಲ್ಲಿ, Jio 24.7GHz ಸ್ಪೆಕ್ಟ್ರಮ್ ಅನ್ನು 88,078 ಕೋಟಿ ರೂ. ಇದು ಅತಿ ದೊಡ್ಡ ಸ್ಪೆಕ್ಟ್ರಮ್ ಪ್ಯಾನ್-ಇಂಡಿಯಾ (26.77 GHz) ಹೊಂದಿರುವ ರಿಲಯನ್ಸ್ ಜಿಯೋ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಎರಡನೇ ಸ್ಥಾನದಲ್ಲಿ ಭಾರ್ತಿ ಏರ್‌ಟೆಲ್ ಇದ್ದು, ಒಟ್ಟು 19,867MHz ಸ್ಪೆಕ್ಟ್ರಮ್‌ಗಾಗಿ 43,085 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ ವೊಡಾಫೋನ್ ಐಡಿಯಾ 2,668MHz ಸ್ಪೆಕ್ಟ್ರಮ್‌ಗಾಗಿ 18,784 ಕೋಟಿ ರೂ. ಖರ್ಚು ಮಾಡಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ದೇಶದ ಜನತೆಯ ಹುಬ್ಬೇರಿಸುವಂತೆ ಮಾಡಿದ್ದ ಅದಾನಿ ಗ್ರೂಪ್ 26GHz ಬ್ಯಾಂಡ್‌ನಲ್ಲಿ 400MHz ಸ್ಪೆಕ್ಟ್ರಮ್ ಅನ್ನು 212 ಕೋಟಿ ರೂ. ಕೋಟಿಗೆ ಬಿಡ್ ಮಾಡಿ ಸ್ವಾಧೀನಪಡಿಸಿಕೊಂಡಿದೆ. ಈ ಎಲ್ಲಾ ನಾಲ್ಕು ಕಂಪೆನಿಗಳ ಒಟ್ಟು ಹಾರಾಜಿನ ಮೊತ್ತವು 1,50,173 ಲಕ್ಷ ಕೋಟಿಯಾಗಿದ್ದರೆ, 51,236MHz ನಷ್ಟು ಸ್ಪೆಕ್ಟ್ರಮ್ ಬಿಡ್ ಮಾಡಲಾಗಿದೆ.