ಪ್ರಮುಖ ಸೆಲ್ಯುಲಾರ್ ಸೇವಾ ಪೂರೈಕೆದಾರರರಾದ ರಿಲಯನ್ಸ್ ಜೂಯೋ, ಏರ್ಟೆಲ್, ಮತ್ತು ವಿ (ವೊಡಾಫೋನ್ ಐಡಿಯಾ -Vi) ಭಾರತದಲ್ಲಿ ಶೀಘ್ರದಲ್ಲೇ 5 ಜಿ ಸೇವೆಗಳನ್ನು ನೀಡಲಾಗುವುದು ಎಂದು ಘೋಷಿಸಿಕೊಂಡಿದೆ. ಉದ್ಯಮದ ಮೂಲಗಳ ಪ್ರಕಾರ, ಅಕ್ಟೋಬರ್ನಲ್ಲೇ ವಾಣಿಜ್ಯ ಉದ್ದೇಶದ 5 ಜಿ ಸೆಲ್ಯುಲಾರ್ ಸೇವೆಯನ್ನು ಪರಿಚಯಿಸಲು ಎರಡಕ್ಕಿಂತ ಹೆಚ್ಚು ಸೆಲ್ಯುಲಾರ್ ಕಂಪೆನಿಗಳು ಉದ್ದೇಶಿಸಿವೆ.
5 ಜಿ ಸೆಲ್ಯುಲರ್ ಸೇವೆಯ ಬಗ್ಗೆ ತಿಳಿದಿರಬೇಕಾದ ಕೆಲವು ವಿಚಾರಗಳು
5 ಜಿ ಸೇವೆಯು ಪ್ರಸ್ತುತ 4 ಜಿ ನೆಟ್ವರ್ಕ್ ಸಂಪರ್ಕದ ವೇಗಕ್ಕಿಂತ 10 ಪಟ್ಟು ಹೆಚ್ಚು ವೇಗದ ಸೇವೆ ನೀಡುತ್ತದೆ ಎನ್ನಲಾಗಿದೆ. ಆದರೆ ಯುರೋಪ್ ಮತ್ತು ಅಮೆರಿಕಾಗಳಲ್ಲಿ ಒದಗಿಸಿದಂತೆ MMWave 5G ಬ್ಯಾಂಡ್ ಅನ್ನು ಭಾರತದಲ್ಲಿ ಒದಗಿಸಲಾಗುವುದಿಲ್ಲ. ಅದಕ್ಕೆ ಬದಲಾಗಿ ಮಧ್ಯಮ ಮತ್ತು ಕಡಿಮೆ ಆವರ್ತನ ಬ್ಯಾಂಡ್ಗಳಾದ 6GHz ಶ್ರೇಣಿಯಲ್ಲಿ 5G ಸೇವೆ ನೀಡಲಾಗುತ್ತದೆ. ಇದು Mmwave ಗಿಂತ ಸ್ವಲ್ಪ ನಿಧಾನವಾಗಿದ್ದರೂ, ನೆಟ್ವರ್ಕ್ ಟವರ್ ನಿಂದ ದೂರದಲ್ಲಿದ್ದರೂ ಸಹ ತಡೆರಹಿತ ಸಂಪರ್ಕವನ್ನು ನೀಡುವ ವಿಷಯದಲ್ಲಿ ಇದು ಹೆಚ್ಚು ವಿಶ್ವಾಸಾರ್ಹವಾಗಿರುತ್ತದೆ ಮತ್ತು ಇದರಲ್ಲಿ Mmwave ನಂತೆ ಕಾಂಕ್ರೀಟ್ ಛಾವಣಿಯ ಮನೆ ಅಥವಾ ಕಛೇರಿಯಲ್ಲಿ ಗೋಡೆ ಇದ್ದರೆ ಸಿಗ್ನಲ್ ಕಳೆದುಕೊಳ್ಳುವ ಯಾವುದೇ ಸಮಸ್ಯೆಗಳಿರುವುದಿಲ್ಲ ಎನ್ನಲಾಗಿದೆ.
ಮತ್ತೊಂದೆಡೆ, Mmwave ಸೂಪರ್ ಫಾಸ್ಟ್, ಆದರೆ ಬಾಗಿಲು ಅಥವಾ ಕಿಟಕಿಯ ಮರ ಸಹ ಸಂಪರ್ಕವನ್ನು ತಡೆಹಿಡಿಯಬಹುದು. ಸೆಲ್ಯುಲಾರ್ ಸೇವಾ ಟವರ್ನಿಂದ ಸ್ವಲ್ಪವೇ ದೂರದಲ್ಲಿದ್ದರೆ ಮಾತ್ರ ಸೂಪರ್-ಫಾಸ್ಟ್ ಇಂಟರ್ನೆಟ್ ಅನ್ನು ಪಡೆಯಲು ಇದರಲ್ಲಿ ಸಾಧ್ಯ.
ಭಾರತದಲ್ಲಿ ಭಾರ್ತಿ ಏರ್ಟೆಲ್ ಸಂಸ್ಥೆಯು 900 MHz (n8), 1800 MHz, 2100MHz(n1), 3300 MHz(n78), and 26 GHz (n258) ಗಳಂತೆ ಐದು ಬ್ಯಾಂಡ್ಗಳನ್ನು ಪಡೆದುಕೊಂಡರೆ, ರಿಲಯನ್ಸ್ 700MHz (n28), 800MHz(n5), 1800MHz (n3), 3300MHz(n78) and 26GHz (n258) ಪಡೆದುಕೊಂಡಿದೆ. ಆದರೆ ವೊಡಾಫೋನ್ 3300MHz (n78) and 26GHz (n258) ಎರಡು 5G ಬ್ಯಾಂಡ್ಗಳನ್ನು ಬಿಡ್ ಮೂಲಕ ಪಡೆದುಕೊಂಡಿದೆ.
ಗ್ರಾಹಕರ 5G ಫೋನ್ಗಳು ಐದು ಬ್ಯಾಂಡ್ಗಳಾದ N8, N28, N1, N78, N258 ಅನ್ನು ಬೆಂಬಲಿಸುತ್ತಿದ್ದರೆ ಹೈ-ಸ್ಪೀಡ್ ಇಂಟರ್ನೆಟ್ ಅನ್ನು ಆನಂದಿಸಲು ಸಾಧ್ಯವಾಗುತ್ತದೆ. 5 ಜಿ ಸ್ಮಾರ್ಟ್ಫೋನ್ ಬಳಕೆದಾರರು 1GBPS ಮತ್ತು 10GBPS ನಡುವಿನ ವೇಗದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಮೊದಲ ಹಂತದಲ್ಲಿ, ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಬೆಂಗಳೂರುಗಳಂತಹ ಎಲ್ಲಾ ಪ್ರಮುಖ ನಗರಗಳಲ್ಲಿ 5 ಜಿ ಸೇವೆಗಳನ್ನು ನೀಡಲಾಗುತ್ತದೆ. 2023 ಅಥವಾ 2024 ರ ಆರಂಭದಲ್ಲಿ ದೇಶದ ಇತರ ನಗರಗಳು ಮತ್ತು ಪಟ್ಟಣಗಳಿಗೆ 5 ಜಿ ಸೇವೆಯನ್ನು ವಿಸ್ತರಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಫೋನ್ನಲ್ಲಿ 5 ಜಿ ಅನ್ನು ಸಕ್ರಿಯಗೊಳಿಸಲು ಹೊಸ ಸಿಮ್ ಖರೀದಿಸಬೇಕಾಗುತ್ತದೆಯೇ?
4G-LTE ಸೇವೆ ಹೊಂದಿರುವ ಸಿಮ್ನಲ್ಲೇ 5 ಜಿ ಸೇವೆಯನ್ನು ಪಡೆಯಬಹುದು. ಆದರೆ ಫೋನ್ಗಳು, N8, N28, N1, N78, ಮತ್ತು N258 ಬ್ಯಾಂಡ್ಗಳಲ್ಲಿ ಯಾವುದಾದರೂ ಒಂದು ಬ್ಯಾಂಡನ್ನು ಬೆಂಬಲಿಸುವ ಫೋನ್ ಆಗಿರಬೇಕಾಗುತ್ತದೆ.
ಇದರ ಜೊತೆಗೆ 5G ಸಂಪರ್ಕ ಹೊಂದಿರುವ ಫೋನ್ಗಳ ಬ್ಯಾಟರಿಯ ಚಾರ್ಜ್ ಬಹುಬೇಗ ಮುಗಿಯುತ್ತದೆ ಎಂದೂ ಸಹ ಹೇಳಲಾಗುತ್ತಿದೆ. ಡೌನ್ಲೋಡ್ ಅಥವಾ ಬಫರ್-ಫ್ರೀ ಸ್ಟ್ರೀಮಿಂಗ್ ಸಹಜವಾಗಿಯೇ ಬ್ಯಾಟರಿಯ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ರಿಲಯನ್ಸ್ ಜಿಯೋ ಭಾರತಕ್ಕೆ 5 ಜಿ ಚಾಲಿತ ಏರ್ಫೈಬರ್ ವೈ-ಫೈ ರೂಟರ್ ಅನ್ನು ಪರಿಚಯಿಸುತ್ತೇವೆ ಎಂದು ಘೋಷಿಸಿಕೊಂಡಿದೆ.