• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜ್ಯದಲ್ಲೇ 3ನೇ ಅತಿ ದೊಡ್ಡ ಕೆರೆಯ ವ್ಯಾಪ್ತಿಯಲ್ಲಿ ಬೆಳೆಯುತ್ತಿವೆ 56,000 ಗಿಡಗಳು

ಪ್ರತಿಧ್ವನಿ by ಪ್ರತಿಧ್ವನಿ
July 27, 2023
in ಕರ್ನಾಟಕ, ರಾಜಕೀಯ, ವಿಶೇಷ
0
ರಾಜ್ಯದಲ್ಲೇ 3ನೇ ಅತಿ ದೊಡ್ಡ ಕೆರೆಯ ವ್ಯಾಪ್ತಿಯಲ್ಲಿ ಬೆಳೆಯುತ್ತಿವೆ 56,000 ಗಿಡಗಳು
Share on WhatsAppShare on FacebookShare on Telegram

ಪರಿಸರ ( Nature ) ನಾಶವಾಗುತ್ತಿರುವ ( destroying ) ಈ ಸಂದರ್ಭದಲ್ಲಿ ಅರಣ್ಯಗಳ ( Forest ) ಉಳಿವು ( saving ) ಬಹಳ ಮುಖ್ಯವಾಗಿದೆ ಹೀಗಾಗಿ ಹಲವು ಮಂದಿ ಪರಿಸರ ಪ್ರೇಮಿಗಳು( Nature lovers ) ಹಾಗೂ ಪರಿಸರವಾದಿಗಳು ಆಗಾಗ ಗಿಡಮರಗಳ ( Plants ) ಉಳಿವಿನ ಬಗ್ಗೆ ಜಾಗೃತಿಯನ್ನು ( Awareness ) ಮೂಡಿಸುತ್ತದೆ ಆದರೆ ಇದು ಕೇವಲ ಜಾಗೃತಿಗೆ ಮಾತ್ರ ಸೀಮಿತವಾಗಿರುವುದಿಲ್ಲ ಬದಲಾಗಿ ಸಾಕಷ್ಟು ಮಂದಿ ಪರಸ್ಪರ ಪ್ರೇಮಿಗಳು ತಾವೇ ಸ್ವತಹ ಗಿಡಗಳನ್ನು ( planting trees ) ನೆಡುತ್ತಾರೆ ಆದರೆ ಈ ಒಂದು ಮನೋಭಾವ ಸಾಮಾನ್ಯ ನಾಗರಿಕನಲ್ಲಿ ( citizen ) ಬರೋದು ಬಹಳ ಕಷ್ಟದ ವಿಚಾರ

ADVERTISEMENT

ಆದರೆ ಇತ್ತೀಚಿನ ದಿನಗಳಲ್ಲಿ ನಗರೀಕರಣ ಹಾಗೂ ಪಟ್ಟಣಗಳ ಬೆಳವಣಿಗೆಯಿಂದಾಗಿ ಪರಿಸರಗಳು ತೀವ್ರ ಸ್ವರೂಪದಲ್ಲಿ ಹಾಳಾಗುತ್ತಿವೆ. ಹಾಗಾಗಿ ಅರಣ್ಯ ಕೃಷಿ ಎಂಬುದು ಈಗ ಅಗತ್ಯಯಾಗಿದೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ರಾಜ್ಯ ಸರ್ಕಾರದ ಪ್ರಮುಖ ಮತ್ತು ಪ್ರಭಾವಿ ಸಚಿವರು ಅರಣ್ಯದ ಉಳಿವಿಗಾಗಿ ಮಹತ್ತರವಾದ ಹೆಜ್ಜೆಯನ್ನು ಇಟ್ಟಿದ್ದಾರೆ ಈ ಮೂಲಕ ಅವರನ್ನು ಜನರು ಆಧುನಿಕ ಭಗೀರಥ ಅಂತಲೇ ಕರೆಯಲು ಮುಂದಾಗ್ತಾ ಇದ್ದಾರೆ

ಹೌದು ಆ ಸಚಿವ ಬೇರೆ ಯಾರು ಅಲ್ಲ ಕೈಗಾರಿಕೆ ಸಚಿವರಾಗಿರುವ ಎಂಬಿ ಪಾಟೀಲ್ ಅವರೇ ಈ 56 ಸಾವಿರ ಗಿಡಗಳ ಬೆಳೆಯುವುದಕ್ಕೆ ಮುಂದಾಗಿರುವಂತಹ ಪ್ರಮುಖ ನಾಯಕರು, ಸರ್ಕಾರದಿಂದ ವಿವಿಧ ಯೋಜನೆಗಳು ಅರಣ್ಯದ ಉಳಿವಿಗಾಗಿ ಆಗಾಗ ಜಾರಿಯಾಗುತ್ತದೆ ಆದರೆ ಅವುಗಳ ಕುರಿತು ಮುನ್ನೆಚ್ಚರಿಕೆ ಹಾಗೂ ಜಾಗೃತ ವಹಿಸಿ ಪರಿಸರವನ್ನ ಉಳಿಸುವಂತಹ ಕೆಲಸವನ್ನು ಮಾಡುವ ಶಾಸಕರು ಮತ್ತು ಸಚಿವರುಗಳು ತೀರಾ ವಿರಳ, ಆದರೆ ಎಂ. ಬಿ ಪಾಟೀಲ್ ಅವರು ಅವರೆಲ್ಲರಿಗಿಂತಲೂ ಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ, ಇಲ್ಲಿ ಎಂಬಿ ಪಾಟೀಲ್ ಅವರ ರಾಜಕೀಯದ ನಡೆ ನಿಲುವುಗಳು ಏನೇ ಇರಬಹುದು ಆದರೆ ಪರಿಸರದ ಉಳಿವಿಗಾಗಿ ಅವರು ಇಟ್ಟಿರುವಂತಹ ಬೃಹತ್ ಹೆಜ್ಜೆ ಮಾತ್ರ ಪಕ್ಷಾತೀತವಾಗಿ ಬಾರಿ ಮೆಚ್ಚುಗೆಗೆ ಪಾತ್ರವಾಗುತ್ತದೆ

ಬೀಜಪುರ ಜಿಲ್ಲೆಯಲ್ಲಿರುವ ರಾಜ್ಯದ ಮೂರನೇ ಅತಿದೊಡ್ಡ  ಕೆರೆ ಎಂದು ಕರೆಸಿಕೊಳ್ಳುವ ಮಮದಾಪುರ ಕೆರೆ ವ್ಯಾಪ್ತಿಯಲ್ಲಿ ಸುಮಾರು 56 ಸಾವಿರ ಗಿಡಗಳನ್ನ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಸಚಿವರಾದಂತಹ ಎಂ ಬಿ ಪಾಟೀಲ್ ಅವರು ಇಟ್ಟಿದ್ದಾರೆ ಈ ಕುರಿತಾಗಿ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕೂಡ ಬರೆದುಕೊಂಡಿದ್ದಾರೆ.

ʼʼರಾಜ್ಯದಲ್ಲೇ 3ನೇ ಅತಿ ದೊಡ್ಡ ಕೆರೆ ಎಂದೇ ಹೆಸರಾಗಿರುವ #ಮಮದಾಪುರಕೆರೆ ವ್ಯಾಪ್ತಿಯಲ್ಲಿ ಸುಮಾರು 56,000 ಗಿಡಗಳು ಅರಳುತ್ತಿವೆ. ಹಂತ ಹಂತವಾಗಿ 2ಲಕ್ಷ ಗಿಡಗಳನ್ನು ಬೆಳೆಸುವ ಗುರಿ ನಮ್ಮದು.

ಬಿಜಾಪುರವನ್ನು ಆಳಿದ ಅದಿಲ್ ಶಾಹಿ ಅರಸರಿಗೆ ಮಲೆನಾಡಿನ ವೈಭವನ್ನು ತರುವ ಕನಸಿತ್ತು. ಮಲೆನಾಡಿನಲ್ಲಿ ಬೆಳೆಯುವ ಅಕ್ಕಿ ಸೇರಿದಂತೆ ಎಲ್ಲ ಬಗೆಯ ಬೇಸಾಯ ಬಿಜಾಪುರದಲ್ಲೂ ಆಗಬೇಕೆಂದು ಬಯಸಿದ್ದರು. ಇಂದಿನ ಮಮದಾಪುರ ಕೆರೆಯ ಜಾಗವನ್ನು ಗುರುತಿಸಿ ಅಲ್ಲಿದ್ದ 7 ಹಳ್ಳಿಗಳ ಜನರಿಗೆ ಪುನರ್ವಸತಿ ಕಲ್ಪಿಸಿ ಬೃಹತ್ ಕೆರೆ ನಿರ್ಮಿಸಿದರು. ಜಿಲ್ಲೆಯನ್ನು ಜಲಸಂಪನ್ನವಾಗಿಸಿ ಹಸಿರು ಬಿಜಾಪುರ ಕಟ್ಟಿದರು. ಕೆರೆ ಅಚ್ಚುಕಟ್ಟು ಪ್ರದೇಶದ ಕೆಳಭಾಗದಲ್ಲಿ ಬಾಸುಮತಿ ಅಕ್ಕಿ ಸಹಿತ ಎಲ್ಲ ಬೆಳೆಗಳನ್ನು ಬೆಳೆಯಲು ಅನುಕೂಲ ಕಲ್ಪಿಸಿ ಸಸ್ಯಶಾಮಲೆಯಿಂದ ಕಂಗೊಳಿಸುವಂತೆ ಮಾಡಿದ್ದು ಇತಿಹಾಸವಾಗಿದೆ.

ಕಾಲಾಂತರದಲ್ಲಿ ಕೆರೆ ಸಂಪೂರ್ಣವಾಗಿ ಬತ್ತಿ ಹೋಯಿತು. ಜಾಲಿಗಿಡಗಳು ಬೆಳೆದು ನಿಂತವು. ಜಲಸಂಪನ್ಮೂಲ ಇಲಾಖೆ ಸಚಿವನಾದ ನಂತರ ಈ ಕೆರೆಗೆ ಕಾಯಕಲ್ಪ ನೀಡುವ ಕಾರ್ಯ ಆರಂಭವಾಯಿತು. ಅದಿಲ್ ಶಾಹಿ ಅರಸರಕಾಲದ ಗತ ವೈಭವವನ್ನು ಮತ್ತೆ ತರಬೇಕೆಂಬ ಕನಸು ಹೊತ್ತು, ಕೆರೆಯ ಹೂಳು ತೆಗೆಸಿ, ಕೃಷ್ಣಾನದಿ ನೀರಿನಿಂದ ನೀರು ಹರಿಸುವ ಕಾರ್ಯಮಾಡಿದೆ. ಕೆರೆ ಸುತ್ತಲಿನ ಸುಮಾರು 1,560 ಎಕರೆ (624 ಹೆಕ್ಟೇರ್) ಪ್ರದೇಶದಲ್ಲಿ ರಾಜ್ಯಕ್ಕೆ ಮಾದರಿ ಎನಿಸುವ ಅರಣ್ಯ ನಿರ್ಮಿಸುವ ಯೋಜನೆ ಅನುಷ್ಠಾನಗೊಳಿಸಿದೆ. ನಮ್ಮೆಲ್ಲ ಜನತೆಯ ಸಹಕಾರದಿಂದಾಗಿ ಇಲ್ಲಿ ಅರಣ್ಯ ಅರಳುತ್ತಿದೆ..ʼʼ

ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಇದೀಗ ಎಂಬಿ ಪಾಟೀಲ್‌ ಅವರ ಈ ನಡೆಗೆ ವ್ಯಾಪಾಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ರೀತಿ ಅತ್ಯಧಿಕ ಗಿಡಗಳನ್ನ ನೆಡುವ ಕಾರ್ಯ ರಾಜ್ಯಕ್ಕೆ ವಿಸ್ತರಣೆ ಆಗಬೇಕು ಎಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ.

Tags: bijapurCMSiddaramaiahMB Patil
Previous Post

ಸಚಿವರ ವಿರುದ್ಧ ಶಾಸಕರ ಆಕ್ರೋಶ, ಕಾಂಗ್ರೆಸ್‌ನೊಳಗೆ ತಲ್ಲಣ..!

Next Post

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ

Related Posts

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜಕೀಯ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

by ಪ್ರತಿಧ್ವನಿ
April 28, 2026
0

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಆಡಳಿತ ವಿರೋಧಿ ಅಲೆ ಹೊಸ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ All India Trinamool Congress ಸರ್ಕಾರದ...

Read moreDetails
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
Next Post
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada