ದೇಶದಲ್ಲಿ ಜನಧನ ಯೋಜನೆಯಡಿ ತೆರೆಯಲಾದ ಜನಧನ್ ಬ್ಯಾಂಕ್ ಖಾತೆಗಳ ಸಂಖ್ಯೆ 50 ಕೋಟಿ ದಾಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಆಗಸ್ಟ್ 19) ಹರ್ಷ ವ್ಯಕ್ತಪಡಿಸಿದ್ದಾರೆ.
ಇದೊಂದು ಮಹತ್ವದ ಮೈಲಿಗಲ್ಲು ಎಂದು ಅವರು ಬಣ್ಣಿಸಿದ್ದಾರೆ.
ಜನಧನ್ ಬ್ಯಾಂಕ್ ಖಾತೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರಿಗೆ ಸೇರಿರುವುದು ಖುಷಿ ತಂದಿದೆ ಎಂದು ಪ್ರಧಾನಿ ಮೋದಿ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಂದ್ರಯಾನ 3 | ಚಂದ್ರನ ಮೇಲ್ಮೈ ಫೊಟೊ, ವಿಡಿಯೊ ಹಂಚಿಕೊಂಡ ಇಸ್ರೊ
ಜನಧನ ಯೋಜನೆಯಡಿ ತೆರೆಯಲಾದ ಜನಧನ್ ಬ್ಯಾಂಕ್ ಖಾತೆಗಳ ಸಂಖ್ಯೆ 50 ಕೋಟಿ ದಾಟಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ (ಆಗಸ್ಟ್ 18) ಮಾಹಿತಿ ನೀಡಿತ್ತು. ಅಲ್ಲದೆ ಈ ಪೈಕಿ ಶೇ 56ರಷ್ಟು ಖಾತೆಗಳು ಮಹಿಳೆಯರಿಗೆ ಸೇರಿದ್ದಾಗಿವೆ ಎಂದು ಇಲಾಖೆ ಹೇಳಿತ್ತು.
ಶೇ 67ರಷ್ಟು ಜನಧನ್ ಬ್ಯಾಂಕ್ ಖಾತೆಗಳು ಗ್ರಾಮೀಣ ಹಾಗೂ ಅರೆನಗರ ಪ್ರದೇಶದಲ್ಲಿ ತೆರೆಯಲಾಗಿದೆ. ಜನಧನ್ ಖಾತೆಗಳಲ್ಲಿ 72.03 ಲಕ್ಷ ಕೋಟಿ ಠೇವಣಿ ಇದ್ದು. ಒಟ್ಟು 34 ಕೋಟಿ ರೂಪೇ ಡೆಬಿಟ್ ಕಾರ್ಡ್‌ಗಳನ್ನು ವಿತರಿಸಲಾಗಿದೆ.
 
			
 
                                 
                                 
                                