ಚಲಿಸುತ್ತಿದ್ದ ಬಸ್ ಪಲ್ಟಿಯಾಗಿ ಐವರು ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ಗಡಿ ಭಾಗವಾದ ಅಲ್ಲುರಿ ಸೀತರಾಮರಾಜು ಜಿಲ್ಲೆಯ ಮಲ್ಕನಗಿರಿಯಲ್ಲಿ ನಡೆದಿದೆ.
ಬಸ್ಸಿನಲ್ಲಿ ಒಟ್ಟು 60 ಮಂದಿ ಪ್ರಯಾಣಿಕರು ಒಡಿಶಾದ ಚಿನ್ನಪಲ್ಲಿಯಿಂದ ವಿಜಯವಾಡದ ಕಡೆ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.
ತಿರುವಿನ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು ಐವರು ಸಾವನಪ್ಪಿದ್ದು ಮೂವತ್ತಕ್ಕು ಹೆಚ್ಚು ಮಂದಿಗೆ ಗಂಭೀರ ಗಾಯಾಗಳಾಗಿವೆ ಎಂದು ತಿಳಿದು ಬಂದಿದೆ.

ಮೃತರನ್ನು ದಾನೇಶ್ವರ್ ದಳಪತಿ(24), ಜೀತು ಹರಿಜನ್(5), ನುನೆನ ಹರಿಜನ(2) ಎಂದು ತಿಳಿದು ಬಂದಿದೆ. ಮೃತರು ದಿನಗೂಲಿ ನೌಕರರಾಗಿದ್ದು ಕೆಲಸ ಅರಸಿ ವಿಜಯವಾಡಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗಿದೆ.
ಇನ್ನಿಬ್ಬರು ಗಾಯಾಳುಗಳನ್ನು ತೆಲಂಗಾಣದ ಭದ್ರಾಚಲಂನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ.