2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಅಸಮಾಧಾನಗಳನ್ನು ಕೇವಲ 48 ಘಂಟೆಗಳಲ್ಲಿ ಬಿ.ಎಸ್. ಯಡಿಯೂರಪ್ಪ ಶಮನಗೊಳಿಸಿದ್ದಾರೆ. ತುಮಕೂರು, ದಾವಣಗೆರೆ, ಬೆಳಗಾವಿ, ಕೊಪ್ಪಳ ಲೋಕಸಭಾ ಕ್ಷೇತ್ರಗಳ ಬಂಡಾಯ ಬಿಜೆಪಿ ಗೆಲುವಿನ ಮೇಲೆ ಪರಿಣಾಮ ಬೀರಬಹುದಾದ ಲೆಕ್ಕಾಚಾರ ಇತ್ತು. ಆದ್ರೆ ಇದೀಗ ಅದೆಲ್ಲವನ್ನೂ ಬಿ.ಎಸ್.ವೈ ಶಮನಗೊಳಿಸಿದ್ದಾರೆ. ಕಳೆದೊಂದು ವಾರದಿಂದ ಈ ನಾಲ್ಕು ಕ್ಷೇತ್ರಗಳಲ್ಲಿ ಬಂಡಾಯದ ಜ್ವಾಲೆ ಹೊತ್ತಿ ಉರಿದಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಕೇವಲ 48 ಘಂಟೆಯಲ್ಲಿ ಎಲ್ಲವೂ ಕೂಲ್-ಕೂಲ್ ಆಗಿದೆ.ಬಿ.ಎಸ್.ಯಡಿಯೂರಪ್ಪ ಬಂಡಾಯವನ್ನು ಶಮನಗೊಳಿಸಿದ್ದೇ ರೋಚಕ ಕಥೆ.

ಪ್ರತಿಧ್ವನಿ ಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಯಡಿಯೂರಪ್ಪರ ಬಂಡಾಯ ತಣ್ಣಿಗಾಗಿಸಿದ್ದು ಹೇಗೆ ಕಥೆಯನ್ನ ಬಿಚ್ಚಿಡ್ತೀವಿ ನೋಡಿ. ಮೊದಲು ತುಮಕೂರು ಅಖಾಡಕ್ಕೆ ಎಂಟ್ರಿ ಕೊಟ್ಟ ಯಡಿಯೂರಪ್ಪ , ವಿ.ಸೋಮಣ್ಣರಿಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ಬಂಡಾಯದ ಕಿಡಿ ಹೊತ್ತಿಸಿದ್ದ ಜೆ.ಸಿ.ಮಾಧುಸ್ವಾಮಿಯವರನ್ನ ತಣ್ಣಗಾಗಿಸಿದ್ದಾರೆ.ಜೆ.ಸಿ.ಮಾಧುಸ್ವಾಮಿಗೆ ಕರೆ ಮಾಡಿ, ನಡೆದ ವಿಚಾರ ತಿಳಿಸಿ ಸಮಾಧಾನಗೊಳಿಸಿ ಮುಂದಿನ ದಿನಗಳಲ್ಲಿ ನಿಮಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಭರವಸೆ ನೀಡಿ ಪಕ್ಷ ಬಿಡುವ ಹಂತ ತಲುಪಿದ್ದ ಮಾಧುಸ್ವಾಮಿಯನ್ನ ತಣ್ಣಗಾಗಿಸಿದ್ದಾರೆ.

ಎರಡನೆಯದಾಗಿ ದಾವಣಗೆರೆಗೆ ತಾವೇ ತೆರಳಿ ನಾಯಕರ ಜೊತೆಗೆ ಸಮಾಲೋಚನೆ ನಡೆಸಿದ ಯಡಿಯೂರಪ್ಪ. ಸಭೆಯಲ್ಲಿ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೆಗಲಿಗೆ ವಹಿಸಿ ನಿರಾಳರಾದ ಬಂಡಾಯಕ್ಕೆ ಬೈ ಬೈ ಹೇಳಿದ್ದಾರೆ. ಇನ್ನು ಬೆಳಗಾವಿಯಲ್ಲಿ ಆರಂಭವಾಗಿದ್ದ ಬಂಡಾಯ ಯಡಿಯೂರಪ್ಪರ ಎಂಟ್ರಿಯಿಂದಲೇ ಹೆಚ್ಚು ಹೊತ್ತು ಉರಿಯದೇ ತಣ್ಣಗಾಗಿದೆ.
ಇತ್ತ ಕೊಪ್ಪಳ ಕ್ಷೇತ್ರದ ಹಾಲಿ ಸಂಸದ ಕರಡಿ ಸಂಗಣ್ಣರನ್ನು ಪಕ್ಷದ ಕಚೇರಿಗೆ ಕರೆಸಿ, ಗಾಲಿ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಆಗಿದ್ದಾರೆ ಎಂದು ಸಬೂಬು ಹೇಳಿ ಸಮಾಧಾನಪಡಿಸಿದ ಯಡಿಯೂರಪ್ಪ, ಬೀದರ್‌ನಲ್ಲಿ ಎದ್ದಿದ್ದ ಬಂಡಾಯಕ್ಕೆ ಆರ್. ಅಶೋಕ್‌ರಿಂದ ಮದ್ದೇರಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಸದ್ಯ ಇನ್ನೊಂದಷ್ಟು ಕ್ಷೇತ್ರಗಳಿಂದ ಬಂಡಾಯದ ಜ್ವಾಲೆ ಕೊತ ಕೊತನೆ ಕುದಿಯುತ್ತಿದೆ. ಚಿಕ್ಕಬಳ್ಳಾಪುರ, ತವರು ಕ್ಷೇತ್ರ ಶಿವಮೊಗ್ಗದಲ್ಲಿ ಈವರೆಗೂ ಬಂಡಾಯ ತಣ್ಣಗಾಗದೇ ಜೋರಾಗಿ ಜ್ವಾಲೆ ಉರಿಯುತ್ತಲೇ ಇದೆ. ಈಗಾಗಲೇ 48 ಘಂಟೆಗಳ ಕಾಲದಲ್ಲಿಯೇ ಅದೇನು ಮಾಡುತ್ತಾರೆ? ಎಂದು ಮಾತನ್ನಾಡುತ್ತಿದ್ದವರಿಗೆ ಬಂಡಾಯ ಆರಿಸಿರುವ ಯಡಿಯೂರಪ್ಪ, ಮುಂದೆ ಏನು ಮಾಡುತ್ತಾರೆ ಅನ್ನೋದೆ ಸದ್ಯದ ಕುತೂಹಲ.