ಭಾರತ-ಚೀನಾ ಸೈನಿಕರ ಮುಖಾಮುಖಿ ಘರ್ಷಣೆಯಲ್ಲಿ 3 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಚೀನಾ ಸೈನಿಕರು ಮೃತಪಟ್ಟಿರುವುದಾಗಿ ಹೇಳಿದ್ದರೂ ಯಾವುದೇ ಅಧಿಕೃತ ವರದಿ ಇನ್ನೂ ಬಂದಿಲ್ಲ. ಅದಾಗ್ಯೂ ಚೀನಾ ಯೋಧರಿಗೂ ತೀವ್ರ ಗಾಯಗಳು ಉಂಟಾಗಿರುವುದು ವರದಿಯಾಗಿದೆ.
ಕಳೆದ 45 ವರ್ಷಗಳಲ್ಲೇ ಚೀನಾ-ಭಾರತ ಗಡಿಯಲ್ಲಿ ಸಾವು ನೋವಾಗಿರುವುದು ಇದೇ ಮೊದಲು. 1975 ರಿಂದ ಇದುವರೆಗೂ ಒಮ್ಮೆಯೂ ಭಾರತದ ಯೋಧರು ಭಾರತ-ಚೀನಾ ಗಡಿಯಲ್ಲಿ ಮರಣಹೊಂದಿರಲಿಲ್ಲ.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಕಾಲದಲ್ಲಿ ಭಾರತ- ಚೀನಾ ಗಡಿಯಲ್ಲಿ ಯೋಧರ ನಡುವೆ ಸಂಘರ್ಷ ನಡೆದಿತ್ತು. ಅದರಲ್ಲಿ 80 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಚೀನಾದ ಕಡೆಯಿಂದ ಸುಮಾರು 400 ಯೋಧರನ್ನು ಭಾರತದ ಪಡೆ ಬಲಿ ಪಡೆದುಕೊಂಡಿತ್ತು. ಭಾರತದ ಯೋಧರ ಪರಾಕ್ರಮಕ್ಕೆ ಚೀನಾ ಪಡೆ ಅಲ್ಲಿಂದ ಕಾಲ್ಕಿತ್ತಿತ್ತು. ನಂತರ 1975 ರಲ್ಲಿ ಚೀನಾ ಸೈನಿಕರು ಹೊಂಚು ಹಾಕಿ ಭಾರತದ ಸೈನ್ಯದ ಮೇಲೆ ದಾಳಿ ಮಾಡಿದ್ದರಿಂದ ನಾಲ್ವರು ಯೋಧರು ಹುತಾತ್ಮರಾಗಿದ್ದರು. 1975 ರಲ್ಲಿ ಚೀನಾ ಸೈನಿಕರು ಹೊಂಚು ಹಾಕಿ ದಾಳಿ ಮಾಡಿದ್ದರಿಂದ ನಾಲ್ಕು ಯೋಧರು ಹುತಾತ್ಮರಾಗಿದ್ದರು. 1975 ರ ಬಳಿಕ ಇದುವರೆಗೂ ಚೀನಾ ಭಾರತ ಗಡಿಯಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ.
ಇಂದು ನಡೆದ ಸಂಘರ್ಷದಲ್ಲಿ ಭಾರತವೇ ಮೊದಲು ದಾಳಿ ಆರಂಭಿಸಿದೆ ಎಂದು ಚೀನಾ ಆರೋಪಿಸಿದೆ. ಭಾರತದ ಪಡೆಗಳೇ ಸೋಮವಾರ ರಾತ್ರಿ ಎರಡು ಬಾರಿ ಗಡಿ ದಾಟಿ ನಮ್ಮ ಸೇನಾ ಪಡೆಗಳನ್ನು ಪ್ರಚೋದಿಸಿ ದಾಳಿ ಮಾಡಿದೆ. ಪರಿಣಾಮವಾಗಿ ಎರಡೂ ದೇಶಗಳ ಯೋಧರ ನಡುವೆ ಚಕಮಕಿ ಉಂಟಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಆರೋಪಿಸಿದ್ದಾರೆ ತನ್ನ ಸೈನಿಕರು ಮೃತಪಟ್ಟಿರುವುದಾಗಿ ಚೀನಾ ಹೇಳಿಕೊಳ್ಳದಿದ್ದರೂ ಗ್ಲೋಬಲ್ ಟೈಮ್ಸ್ ಸಂಪಾದಕ ಹು ಕ್ಸಿಜಿನ್ ಚೀನಾದ ಯೋಧರೂ ಮೃತ ಪಟ್ಟಿರುವುದಾಗಿ ಟ್ವೀಟ್ ಮಾಡಿದ್ದಾರೆ. ಭಾರತದ ಪಡೆಗಳೇ ಸೋಮವಾರ ರಾತ್ರಿ ಎರಡು ಬಾರಿ ಗಡಿ ದಾಟಿ ನಮ್ಮ ಸೇನಾ ಪಡೆಗಳನ್ನು ಪ್ರಚೋದಿಸಿ ದಾಳಿ ಮಾಡಿದೆ. ಪರಿಣಾಮವಾಗಿ ಎರಡೂ ದೇಶಗಳ ಯೋಧರ ನಡುವೆ ಚಕಮಕಿ ಉಂಟಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಆರೋಪಿಸಿದ್ದಾರೆ