2025-26ನೇ ಸಾಲಿನ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ರೈತರಿಗೆ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಕೃಷಿ & ತೋಟಗಾರಿಕೆ ಇಲಾಖೆಗೆ 7 ಸಾವಿರದ 145 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದೆ.

ಸಣ್ಣ, ಅತಿ ಸಣ್ಣ ಹಿಡುವಳಿದಾರರಿಗಾಗಿ ರೈತ ಸಮೃದ್ಧಿ ಯೋಜನೆ, ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ 428 ಕೋಟಿ ರೂಪಾಯಿ ನೆರವು ನೀಡಲಾಗುತ್ತಿದೆ.

ಕೃಷಿ ಭಾಗ್ಯ ಯೋಜನೆಯಡಿ 3 ಲಕ್ಷಕ್ಕಿಂತ ಅಧಿಕ ಕೃಷಿ ಹೊಂಡ ನಿರ್ಮಾಣ ಮಾಡಲಾಗುತ್ತಿದ್ದು, ಈ ವರ್ಷ 12 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಕೃಷಿ ಕ್ಷೇತ್ರದಲ್ಲಿ ಡಿಜಿಟಲ್, ಕೃತಕ ಬುದ್ಧಿಮತ್ತೆ ಬಳಕೆಗೂ ಕ್ರಮ ಕೈಗೊಳ್ಳಲಾಗುತ್ತಿದೆ.
ಬಜೆಟ್ನಲ್ಲಿ ಕೃಷಿಗೆ ಅನುದಾನ
1. ಸಣ್ಣ, ಅತಿ ಸಣ್ಣ ಹಿಡುವಳಿದಾರರಿಗಾಗಿ ರೈತ ಸಮೃದ್ಧಿ ಯೋಜನೆ ಜಾರಿ
2.10 ಹವಾಮಾನ ವಲಯಗಳಲ್ಲಿ ಸಮಗ್ರ ಕೃಷಿ ಪದ್ಧತಿ ಮಾದರಿ ಪ್ರಾತ್ಯಕ್ಷಿಕೆ
3.ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ನೆರವು
4.ಈ ಯೋಜನೆಯ ಅಡಿ 428 ಕೋಟಿ ರೂ. ಅನುದಾನ
5.ಹನಿ, ತುಂತುರು ನೀರಾವರಿ ಘಟಕ ಅಳವಡಿಕೆಗೆ 440 ಕೋಟಿ ರೂ.
6.ತೊಗರಿ ಬೆಳೆಯಲ್ಲಿ ನೂತನ ತಾಂತ್ರಿಕತೆಗಳ ಅಳವಡಿಕೆ
7.ತೊಗರಿಯನ್ನ ಅಂತರ ಬೆಳೆಯನ್ನಾಗಿ ಪ್ರೋತ್ಸಾಹಿಸಲು ಕ್ರಮ
8.ರಾಷ್ಟ್ರದಲ್ಲೇ ಮುಂಚೂಣಿ ರಾಜ್ಯವನ್ನಾಗಿಸುವ ಉದ್ದೇಶ
9.ರೈತರ ಆದಾಯ, ಪೌಷ್ಟಿಕ ಭದ್ರತೆಯನ್ನ ಸುಧಾರಿಸಲು 88 ಕೋಟಿ ರೂ.
10ರಾಜ್ಯದಲ್ಲಿ 6 ಸಾವಿರ ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪನೆ
11.14 ಸಾಮಾನ್ಯ ಇನ್ಕ್ಯೂಬೇಷನ್ ಕೇಂದ್ರಗಳ ಸ್ಥಾಪನೆ
12.ಪ್ರಸಕ್ತ 5000 ಕಿರು ಸಂಸ್ಕರಣಾ ಘಟಕಗಳ ಸ್ಥಾಪಿಸಲು ಕ್ರಮ
13.ಕೃಷಿ ಭಾಗ್ಯ ಯೋಜನೆಯಡಿ 3 ಲಕ್ಷಕ್ಕಿಂತ ಅಧಿಕ ಕೃಷಿ ಹೊಂಡ ನಿರ್ಮಾಣ
14.ಈ ವರ್ಷ 12 ಸಾವಿರ ಕೃಷಿ ಹೊಂಡಗಳ ನಿರ್ಮಾಣದ ಗುರಿ
15.ಕೃಷಿ ಕ್ಷೇತ್ರದಲ್ಲಿ ಡಿಜಿಟಲ್, ಕೃತ ಬುದ್ಧಿಮತ್ತೆ ಬಳಕೆಗೆ ಕ್ರಮ
16.ಹವಾಮಾನ ವಲಯಗಳ ಮರುವ್ಯಾಖ್ಯಾನಕ್ಕೆ ತಜ್ಞರ ಸಮಿತಿ
17.ಸಮಗ್ರ ಮಳೆಯಾಶ್ರಿತ ಕೃಷಿ ನೀತಿ’ ಅನುಷ್ಠಾನ
18.ರಸಗೊಬ್ಬರ, ಬಿತ್ತನೆ ಬೀಜ, ಜೈವಿಕ ಗೊಬ್ಬರ ಗುಣಮಟ್ಟ ಪರೀಕ್ಷೆಗೆ 58 ಪ್ರಯೋಗಾಲಯ
19.ಉತ್ತರ ಕನ್ನಡದ ಜೋಯಿಡಾ ರಾಜ್ಯದ ಪ್ರಥಮ ಸಾವಯವ ತಾಲೂಕು
20.3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಮಗ್ರ ಮಣ್ಣು, ನೀರಿನ ನಿರ್ವಹಣೆ
21.ಜೈವಿಕ ಕೃಷಿ ಪರಿಕರ ಸ್ಟಾರ್ಟ್ಅಪ್ಗಳ ಮೂಲಕ ಮಾರಾಟಕ್ಕೆ ಉತ್ತೇಜನ
22.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭೂಸಂಪನ್ಮೂಲ ಪೂರ್ಣಕ್ಕೆ ಕ್ರಮ
23.ಮಂಡ್ಯ ಕೃಷಿ ವಿವಿ ಸ್ಥಾಪನೆಗೆ 25 ಕೋಟಿ ರೂ. ನೀಡಿಕೆ
24.ಪ್ರಸಕ್ತ ಸಾಲಿನಲ್ಲಿ ಕೃಷಿ ವಿವಿ ತರಗತಿ ಆರಂಭ
25.ಬೆಂಗಳೂರಿನ ಜಿಕೆವಿಕೆಯಲ್ಲಿ ಸಸ್ಯ ಫೀನೋಟೈಪಿಂಗ್ ಸೌಲಭ್ಯ
26.20 ಕೋಟಿ ರೂ. ವೆಚ್ಚದಲ್ಲಿ ಸಾವಯವ, ಸಿರಿಧಾನ್ಯ ಹಬ್ ಸ್ಥಾಪನೆ
27.ವಿಜಯಪುರದ ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ
28.ಅಥಣಿ ತಾಲೂಕಿನಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆಗೆ ಕಾರ್ಯಸಾಧ್ಯತಾ ವರದಿ