ವೈಷ್ಣೋದೇವಿ ಪ್ರವಾಸದಿಂದ ಹಿಂತಿರುಗುತ್ತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ನಾಲ್ವರು ಯಾತ್ರಾರ್ಥಿಗಳು ಸಜೀವದಹನಗೊಂಡು 20 ಮಂದಿ ಗಾಯಗೊಂಡ ಘಟನೆ ಜಮ್ಮುವಿನಲ್ಲಿ ಸಂಭವಿಸಿದೆ.
ಜಮ್ಮುವಿನ ಕಾತ್ರಾದಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ವೈಷ್ಣೋದೇವಿ ಪ್ರವಾಸಕ್ಕೆ ಹೊರಟವರು ಕಾರ್ತಾದಲ್ಲಿ ತಂಗಲು ವ್ಯವಸ್ಥೆ ಇದೆ. ಪ್ರಯಾಣಿಕರು ವೈಷ್ಣೋದೇವಿ ಭೇಟಿ ನೀಡಿ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
