ಪ್ಲಾಸ್ಟಿಕ್ ಮಾಲಿನ್ಯವು ಅತ್ಯಂತ ಪ್ರಮುಖ ಜಾಗತಿಕ ಸವಾಲಾಗಿದೆ. ಪಳೆಯುಳಿಕೆ ಆಧಾರಿತ ಪ್ಲಾಸ್ಟಿಕ್‌ಗಳ ಉತ್ಪಾದನೆಯು ಹಸಿರುಮನೆ ಅನಿಲ ಹೊರಸೂಸುವಿಕೆಯ ಮೂಲಕ ಜಾಗತಿಕ ಹವಾಮಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಲೇ ಬಂದಿದೆ. ಪ್ಲಾಸ್ಟಿಕ್ ಬಳಕೆ ಹೀಗೆಯೇ ಮುಂದುವರಿದರೆ, 2050 ರ ಹೊತ್ತಿಗೆ ಪ್ಲಾಸ್ಟಿಕ್ ಉದ್ಯಮದಿಂದ ಹೊರಸೂಸುವ ಮಾಲಿನ್ಯವು 615 ಕಲ್ಲಿದ್ದಲು ಸ್ಥಾವರಗಳಿಗೆ ಸಮನಾಗಿರುತ್ತದೆ ಮತ್ತು ಇದು ಒಟ್ಟು 2.75 ಶತಕೋಟಿ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಸಮಾನವಾಗಿರುತ್ತದೆ (CO2e) ಎಂದು ಅಂತರರಾಷ್ಟ್ರೀಯ ಪರಿಸರ ಕಾನೂನು ಕೇಂದ್ರದ (Center on International Environmental Law) ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ. ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಅಮೆರಿಕ ಮೂಲದ 3M ಕಂಪೆನಿಯು ನಿರ್ಧರಿಸಿದೆ. ಅಂತಿಮವಾಗಿ 2050ರ ವೇಳೆಗೆ ಇಂಗಾಲದ ತಟಸ್ಥತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಪೆಟ್ರೋಲಿಯಂ ಆಧಾರಿತ ಪ್ಲಾಸ್ಟಿಕ್‌ಗಳಿಂದ ದೂರವಾಗುವ ಜಾಗತಿಕ ಸ್ಥಿತ್ಯಂತರವನ್ನು ಮತ್ತು ನಿರ್ಧಾರವನ್ನು ಬೆಂಬಲಿಸುವ ವಸ್ತುಗಳು ಮತ್ತು ಮೂಲಸೌಕರ್ಯಗಳು ಶೀಘ್ರವಾಗಿ ಪರಿವರ್ತನೆಗೊಳ್ಳುತ್ತಿವೆ ಮತ್ತು ಬದಲಾವಣೆಗೆ ಸ್ಪಷ್ಟವಾದ ಆವೇಗವಿದೆ “ಎಂದು 3M ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಸುಸ್ಥಿರ ಅಧಿಕಾರಿ ಗೇಲ್ ಶುಯೆಲ್ಲರ್ ಹೇಳಿದ್ದಾರೆ. “3M ಗೆ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಸುಸ್ಥಿರ ಮತ್ತು ಬಾಳಿಕೆ ಬರುವ ಉತ್ಪನ್ನವನ್ನು ಉತ್ಪಾದಿಸಲು ವೈಜ್ಞಾನಿಕ ಜ್ಞಾನವನ್ನು ಅನ್ವಯಿಸಿದ ಇತಿಹಾಸ ಮೊದಲೇ ಇದೆ” ಎಂದು ಅವರು ಹೇಳಿದ್ದಾರೆ.
ಈ ಹೊಸ ಗುರಿಯನ್ನು ಸಾಧಿಸಲು, 3M ತನ್ನ ಗ್ರಾಹಕ ವ್ಯವಹಾರ ಗುಂಪಿನಲ್ಲಿ ಉತ್ಪನ್ನಗಳನ್ನು ಮತ್ತು ಪ್ಯಾಕೇಜಿಂಗ್ ಅನ್ನು ನವೀಕರಿಸುತ್ತಿದೆ. ಒಟ್ಟಾರೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಮರುಬಳಕೆಯ ಮತ್ತು ಜೈವಿಕ ಆಧಾರಿತ ಪ್ಲಾಸ್ಟಿಕ್ ಮತ್ತು ವಿನ್ಯಾಸಗಳ ಬಳಕೆಯ ಪ್ರಗತಿ ಈ ಹೊಸ ಗುರಿಯಲ್ಲಿ ಒಳಗೊಂಡಿರುತ್ತವೆ. 75% ಸ್ಕಾಚ್-ಬ್ರೈಟ್ ಗ್ರೀನರ್ ಕ್ಲೀನ್ ಸ್ಕ್ರ್ಯಾಚ್ ಅಲ್ಲದ ಸ್ಕ್ರಬ್ಬರ್‌ಗಳನ್ನು ಮರುಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತಿದೆ ಮತ್ತು 100% ಮರುಬಳಕೆಯಿಂದ ತಯಾರಿಸಿದ ಮತ್ತು ಮರುಬಳಕೆ ಮಾಡಬಹುದಾದ ಪ್ಯಾಕೇಟ್‌ನಲ್ಲಿ ಪ್ಯಾಕ್ ಮಾಡಲಾಗಿದೆ. 3M ಮಾಡುತ್ತಿರುವ ಸುಧಾರಣೆಗಳಿಗೆ ಒಂದು ಪ್ರಮುಖ ಉದಾಹರಣೆಯಾಗಿ ಸ್ಕ್ರಬ್ಬರ್‌ಗಳನ್ನು ತೆಗೆದುಕೊಳ್ಳಬಹುದಾಗಿಧ. 3M ಹೊಸ ಪ್ಲಾಸ್ಟಿಕ್‌ನೆಡೆಗಿನ ತನ್ನ ಸ್ಥಿತ್ಯಂತರವನ್ನು ತ್ವರಿತವಾಗಿ ಕಾರ್ಯಗತಗೊಳಿಸುತ್ತಿದೆ ಮತ್ತು 2025 ರ ಅಂತ್ಯದ ವೇಳೆಗೆ 125 ಮಿಲಿಯನ್-ಪೌಂಡ್ ಕಡಿತವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಇದು ಐಫೆಲ್ ಟವರ್‌ನ ತೂಕಕ್ಕಿಂತ ಐದು ಪಟ್ಟು ಹೆಚ್ಚು.
World Business Council for Sustainable Development (WBCSD)ನ ಸರ್ಕ್ಯುಲಾರ್ ಇಕಾನಮಿಯ ನಿರ್ದೇಶಕ ಬ್ರೆಂಡನ್ ಎಡ್ಜೆರ್ಟನ್, “ಹೆಚ್ಚು ಸರ್ಕ್ಯುಲಾರ್ ಇಕಾನಮಿ ಸಾಧಿಸಲು ಬೇಕಿರುವ ಅತ್ಯಗತ್ಯ ಅಂಶವೆಂದರೆ ನಮ್ಮ ಉತ್ಪನ್ನಗಳಲ್ಲಿ ಹೆಚ್ಚು ಮರುಬಳಕೆಯ ವಸ್ತುಗಳನ್ನು ಮತ್ತು ಜೈವಿಕ ಉತ್ಪನ್ನಗಳನ್ನು ಸೇರಿಸುವುದು” ಎಂದು ಹೇಳುತ್ತಾರೆ. ಈ ದಿಸೆಯಲ್ಲಿ 3M ಕಾರ್ಯ ಶ್ಲಾಘನೀಯ ಎಂದು ಬಣ್ಣಿಸುತ್ತಾರೆ ಬ್ರೆಂಡನ್.
3M ಇಂಡಿಯಾದ ಎಂಡಿ ರಮೇಶ್ ರಾಮದುರೈ ಮತ್ತು ಗ್ರಾಹಕ ವ್ಯವಹಾರದ ಮುಖ್ಯಸ್ಥ ಸಿದ್ಧೇಶ್ ಬೊರ್ಕರ್ “ ಭವಿಷ್ಯದ ಪೀಳಿಗೆಗೆ ಭೂಮಿಯ ಆರೋಗ್ಯವನ್ನು ಖಾತರಿಪಡಿಸುವ ನಮ್ಮ ಸಂಸ್ಥೆಯ ಜಾಗತಿಕ ಬದ್ಧತೆಯ ಬಗ್ಗೆ 3M ಇಂಡಿಯಾಗೆ ಹೆಮ್ಮೆ ಮತ್ತು ಉತ್ಸಾಹವಿದೆ. ಪರಿಸರ ಸುಸ್ಥಿರತೆಯನ್ನು ಖಾತರಿಪಡಿಸುವಲ್ಲಿ ನಮ್ಮಲ್ಲಿ ಪ್ರತಿಯೊಬ್ಬರೂ ನಿರ್ಣಾಯಕ ಪಾತ್ರಗಳನ್ನು ಹೊಂದಿದ್ದೇವೆ ಮತ್ತು ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸಲು ನಾವು ಪ್ರೋತ್ಸಾಹಿಸುತ್ತೇವೆ. ಈ ಹಿನ್ನೆಲೆಯಲ್ಲಿ ಪಳೆಯುಳಿಕೆ ಆಧಾರಿತ ಪ್ಲಾಸ್ಟಿಕ್‌ಗಳನ್ನು ಕಡಿಮೆ ಮಾಡುವುದು ಒಂದು ದೊಡ್ಡ ಹೆಜ್ಜೆಯಾಗಿದೆ. ನಮ್ಮ ಜಗತ್ತನ್ನು ಆರೋಗ್ಯಕರವಾಗಿ ಮಾಡಿಕೊಳ್ಳೋಣ” ಎಂದು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.