ಇದು ವಿ.ಮನೋಹರ್ (V Manohar) ಸಂಗೀತ ಸಂಯೋಜನೆಯ 150ನೇ ಚಿತ್ರ .

N ಸ್ಟಾರ್ ಬ್ಯಾನರ್ ನಲ್ಲಿ ನಾಗವೇಣಿ. N. ಶೆಟ್ಟಿ ನಿರ್ಮಾಣದ, ರಾಜ ರವಿಕುಮಾರ್ ನಿರ್ದೇಶನದ ಹಾಗೂ “ಜಾಲಿಡೇಸ್” ಖ್ಯಾತಿಯ ನಿರಂಜನ್ ಶೆಟ್ಟಿ ಹಾಗು ಪ್ರಜ್ವಲಿ ಸುವರ್ಣ ನಾಯಕ – ನಾಯಕಿಯಾಗಿ ನಟಿಸಿರುವ ಸಂಗೀತ ಪ್ರದಾನ ಹಾಗೂ ಪ್ರೇಮ ಕಥಾನಕವನ್ನು ಹೊಂದಿರುವ “31 DAYS” ಚಿತ್ರ ಈ ವಾರ (ಸೆಪ್ಟೆಂಬರ್ 5 ರಂದು) ಬಿಡುಗಡೆಯಾಗುತ್ತಿದೆ. ಇದು ವಿ.ಮನೋಹರ್ ಸಂಗೀತ ನಿರ್ದೇಶನದ 150 ನೇ ಚಿತ್ರವಾಗಿದೆ.

ವಿನುತ್. ಕೆ. ಛಾಯಾಗ್ರಹಣ, ಧನು ಕುಮಾರ್, ತ್ರಿಭುವನ್ ನೃತ್ಯ ನಿರ್ದೇಶನ, ಸನತ್, ರವಿತೇಜ್ , ನಿಶ್ಚಿತ್ ಪೂಜಾರಿ ರವರ ಸಂಕಲನ ಹಾಗೂ ಲಕ್ಕಿ ನಾಗೇಶ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. “31 DAYS” ಸಿನಿಮಾ ಸೆಪ್ಟೆಂಬರ್ 05 ರಂದು ಬೆಂಗಳೂರಿನ ಕೆ. ಜಿ. ರಸ್ತೆಯ “ಸ್ವಪ್ನ” ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.