ಬೆಂಗಳೂರು ಜನರ ಜೀವನಾಡಿ ಬಿಎಂಟಿಸಿಯಲ್ಲಿ ಪರಿಸರ ಸ್ನೇಹಿ ಬಸ್ ಗಳ ಸಂಖ್ಯೆ ಹೆಚ್ಚಾಗ್ತಿದೆ. ಈಗಾಗಲೇ ಮೊದಲ ಹಂತದಲ್ಲಿ ಎಲೆಕ್ಟ್ರಿಕ್ ಬಸ್ ಕಾರ್ಯಾರಂಭ ಮಾಡುತ್ತಿವೆ. ಇದೀಗ ಮತ್ತೆ 300 ಬಸ್ ಗಳು ಸ್ವಾತಂತ್ರ್ಯ ದಿನದಿಂದ ರಸ್ತೆಗಿಳಿಯಲಿವೆ.
ಆಗಸ್ಟ್ 14ರಂದು ಚಾಲನೆ ನೀಡಲಿರುವ ಸಿಎಂ ಬೊಮ್ಮಾಯಿ
ಬೆಂಗಳೂರು ಮಹಾನಗರದ ಜನರ ಜೀವನಾಡಿ ಬಿಎಂಟಿಸಿ ನಿಗಮ ತನ್ನ 25ನೇ ವರ್ಷ ಪೂರೈಕೆ ಹಿನ್ನೆಲೆ ತನ್ನ ಪ್ರಯಾಣಿಕರಿಗೆ ಉಚಿತ ಸೇವೆ ನೀಡ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಧರ್ಭದಲ್ಲೇ ಕೇಂದ್ರ ಸರ್ಕಾರದ ಫೇಮ್ 2 ಅಡಿ 300 ಎಲೆಕ್ಟ್ರಿಕ್ ಬಸ್ ಗಳನ್ನ ರಸ್ತೆಗಿಳಿಸುತ್ತಿದೆ. ಇದೇ ಆಗಸ್ಟ್ 14 ರಂದು 75 ಬಸ್ ಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಇನ್ನೊಂದು ತಿಂಗಳಲ್ಲಿ ಉಳಿದ 230 ಬಸ್ ಗಳ ಸೇವೆ ಲಭ್ಯವಾಗಲಿದೆ.
ಸ್ವಾತಂತ್ರ್ಯ ದಿನದಿಂದ 300 BMTC ಎಲೆಕ್ಟ್ರಿಕ್ ಬಸ್ ಗಳು ರಸ್ತೆಗೆ
ಇನ್ನು ಹೊಸ ಮಾದರಿಯ ಎಲೆಕ್ಟ್ರಿಕ್ ಬಸ್ ಗಳು ಪ್ರತಿ ಕಿ.ಮೀ. ಗೆ 48.95 ರೂ ನಂತೆ ಸ್ವಿಚ್ ಕಂಪನಿ ಟೆಂಡರ್ ಪಡೆದಿದೆ. ಗುತ್ತಿಗೆ ಆಧಾರದ ಮೇಲೆ 300 E ಬಸ್ಸುಗಳನ್ನು ಬಿಎಂಟಿಸಿಗೆ ಒದಗಿಸಲಿದೆ. ಈ ಬಸ್ಸುಗಳಿಗೆ ಟೆಂಡರ್ ಪಡೆದ ಕಂಪನಿಯೇ ಚಾಲಕರನ್ನ ಒದಗಿಸಲಿದೆ. ನಿರ್ವಹಣೆ ಮತ್ತು ಚಾರ್ಜ್ ಮಾಡಲು ಬೇಕಾದ ಮೂಲ ಸೌಕರ್ಯವನ್ನು ಇದೆ ಸಂಸ್ಥೆ ಮಾಡಲಿದೆ. ಸಾಮಾನ್ಯ ಬಿಎಂಟಿಸಿ ಬಸ್ಸುಗಳಲ್ಲಿನ ದರವೇ ಈ ಬಸ್ಸುಗಳಲ್ಲಿ ಇರಲಿವೆ. ಪಾಸ್ ಗಳಿಗೂ ಅನುಮತಿ ಇರಲಿದೆ. ಬಸ್ ಗಳ ಕಲರ್ ಕೂಡ ಪ್ರಯಾಣಿಕರನ್ನ ಆಕರ್ಷಣೆ ಗೊಳಿಸಲಿದೆ.
![](https://pratidhvani.com/wp-content/uploads/2022/08/maxresdefault-1-1024x576.jpg)
BMTC ಹೊಸ E ಬಸ್ನ ವಿಶೇಷತೆ ಏನು.!?
- 12 ಮೀಟರ್ ಉದ್ದದ Non-AC ಬಸ್
- ಈ ಹೊಸ ಬಸ್ಸುಗಳು 41 ಆಸನ ಹೊಂದಿರಲಿದೆ
- ಒಂದು ಬಾರಿ ಚಾರ್ಜ್ ಮಾಡಿದರೆ 150km ಸಂಚಾರ
- ಮತ್ತೆ ಚಾರ್ಜ್ ಮಾಡಿದರೆ 75 km ಸಂಚಾರ
- ಒಟ್ಟು 225 ಕಿ.ಮೀ ಪ್ರಯಾಣ ಈ ಬಸ್ ನಲ್ಲಿ ಮಾಡಬಹುದು
ಒಟ್ಟಾರೆ ಪ್ರಯಾಣಿಕರ ಅನೂಕೂಲಕ್ಕಾಗಿ ಬಿಎಂಟಿಸಿ ಮತ್ತಷ್ಟು ಎಲೆಕ್ಟ್ರಿಕ್ ಬಸ್ ಗಳನ್ನ ರಸ್ತೆಗಿಳಿಸುತ್ತಿದೆ. ಇನ್ಮುಂದೆ ನಗರದ ಬಹುತೇಕ ಕಡೆ ಎಲೆಕ್ಟ್ರಿಕ್ ಬಸ್ ಗಳ ಸಂಚಾರ ಆರಂಭವಾಗಲಿದ್ದು, ವಾಯುಮಾಲಿನ್ಯ ತಡೆಗೂ ಎಲೆಕ್ಟ್ರಿಕ್ ಬಸ್ ಗಳು ಸಹಕಾರಿಯಾಗಲಿವೆ.