ಜಮ್ಮು ಕಾಶ್ಮೀರದ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದು, ಪ್ರತಿದಾಳಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ.
ರಾಜೌರಿ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ನಡೆದ ದಾಳಿಯಲ್ಲಿ ಸುಬೇದಾರ್ ರಾಜೇಂದ್ರ ಪ್ರಸಾದ್, ರೈಫಲ್ ಮ್ಯಾನ್ ಮನೋಜ್ ಕುಮಾರ್ ಮತ್ತು ರೈಫಲ್ ಮ್ಯಾನ್ ಲಕ್ಷ್ಮಣನ್ ಹುತಾತ್ಮರಾಗಿದ್ದಾರೆ.
ಉಗ್ರರು ಬೇಲಿಯನ್ನು ತುಂಡರಿಸಿ ಸೇನಾ ಶಿಬಿರದ ಒಳಗೆ ಪ್ರವೇಶಿಸಿದ್ದು, ಆತ್ಮಾಹುತಿ ದಾಳಿಯಲ್ಲಿ ಮೂವರು ಯೋಧರನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗಿದೆ. ಇದೇ ವೇಳೆ ಪ್ರತಿದಾಳಿ ನಡೆಸಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ರಜೌರಿ ಜಿಲ್ಲೆಯಲ್ಲಿ ಉಗ್ರರು ಮೊದಲಿನಿಂದಲೂ ದಾಳಿ ಮಾಡುತ್ತಿದ್ದಾರೆ. ಆದರೆ ಕಳೆದ ೬ ತಿಂಗಳಲ್ಲಿ ಉಗ್ರರ ದಾಳಿ ಪ್ರಮಾಣ ಹೆಚ್ಚಾಗಿದ್ದು, ಸೇನಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.