ಇಂದು ದೇಶದಾದ್ಯಂತ 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು , ಕರ್ನಾಟಕದಲ್ಲಿ (Karnataka) ಬಿಜೆಪಿ (BJP) ಮೇಲುಗೈ ಸಾಧಿಸಿದೆ. 17 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಹೆಚ್ಚು ಕ್ಷೇತ್ರಗಳನ್ನ ತನ್ನದಾಗಿಸಿಕೊಂಡಿದ್ದರೆ , ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ (Jds) ಗೆದ್ದಿದೆ . ಉಳಿದಂತೆ ಕಾಂಗ್ರೆಸ್ (Congress) ಒಂಬತ್ತು ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
ಈ ಬಾರಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲಬೇಕು ಎಂಬ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್ ಸಚಿವರ ಮಕ್ಕಳಿಗೆ ಕುಟುಂಬದವರಿಗೆ ಹೆಚ್ಚಿನ ಟಿಕೆಟ್ ನೀಡಿತ್ತು. ಈ ಪೈಕಿ ಕೆಲವರು ಗೆದ್ದಿದ್ದರೆ ಮತ್ತು ಕೆಲ ಸಚಿವರ ಮಕ್ಕಳು ಸೋತು ಸುಣ್ಣಾಗಿದ್ದರೆ.

ಬೆಳಗಾವಿಯಲ್ಲಿ (Belagavi) ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಪುತ್ರ ಮೃಣಾಲ್ ಹೆಬ್ಬಾಳ್ಕರ್ (mrunal hebbalkar) ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadeesh shettar) ವಿರುದ್ಧ ಸೋತರೆ, ಇತ್ತ ಬಾಗಲಕೋಟೆಯಲ್ಲಿ ಸಚಿವ ಶಿವಾನಂದ ಪಾಟೀಲ್ (Shivananda Patil) ಅವರ ಪುತ್ರಿ ಸಂಯುಕ್ತ ಪಾಟೀಲ್ (Samyuktha Patil) ಸೋಲನುಭವಿಸಿದ್ದಾರೆ .

ಅಷ್ಟೇ ಅಲ್ಲ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga reddy) ಅವರ ಪುತ್ರಿ ಸೌಮ್ಯ ರೆಡ್ಡಿ (Sowmya reddy) ಕೂಡ ಚುನಾವಣೆಯಲ್ಲಿ ಸೋಲನ್ನು ಭವಿಸಿದ್ದಾರೆ. ಆ ಮೂಲಕ ಈ ಮೂವರು ಸಚಿವರ ಮಕ್ಕಳು ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.

ಈ ಸೋಲಿಗೆ ಸಚಿವರನ್ನ ಹೊಣೆಗಾರರನ್ನಾಗಿಸಿ ಕಾಂಗ್ರೆಸ್ ಹೈಕಮಾಂಡ್ ಸಚಿವರ ತಲೆದಂಡ ಮಾಡಲಿದಿಯಾ ?ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಈ ಸಚಿವರನ್ನ ಸಂಪುಟದಿಂದ ಕೈ ಬಿಡಲಿದಿಯಾ ಎಂಬ ಚರ್ಚೆ ವ್ಯಾಪಕವಾಗಿ ಗರಿಗೆದರಿದೆ.