• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ವಿರೋಧ ಪಕ್ಷ ಹೊರಗಿಟ್ಟು 3 ಕ್ರಿಮಿನಲ್‌ ಮಸೂದೆ ಪಾಸ್‌.. ಏನು ಇವರ ಉದ್ದೇಶ?

Any Mind by Any Mind
December 21, 2023
in ಕರ್ನಾಟಕ
0
ವಿರೋಧ ಪಕ್ಷ ಹೊರಗಿಟ್ಟು 3 ಕ್ರಿಮಿನಲ್‌ ಮಸೂದೆ ಪಾಸ್‌.. ಏನು ಇವರ ಉದ್ದೇಶ?
Share on WhatsAppShare on FacebookShare on Telegram

ಭಾರತದಲ್ಲಿ ಈಗ ಜಾರಿಯಲ್ಲಿರುವ IPC (Indian Penal Code), CrPC (Code of Criminal Procedure) Evidence Act (Indian Evidence Act, 1872) ಬದಲಾವಣೆ ಮಾಡಿ ಭಾರತೀಯ​​ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಮಸೂದೆ 2023 ಹಾಗು ಭಾರತೀಯ ಸಾಕ್ಷ್ಯ ಮಸೂದೆ ಎನ್ನುವ ಮೂರು ಕಾನೂನುಗಳಿಗೆ ಲೋಕಸಭೆ ಒಪ್ಪಿಗೆ ನೀಡಿದೆ. ಬ್ರಿಟೀಷ್‌‌ ಕಾಲದ ಕಾನೂನುಗಳನ್ನು ಬದಲಾವಣೆ ಮಾಡುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಈ ಬಗ್ಗೆ ಬಿಜೆಪಿ ಸರ್ಕಾರ ಹಿಂದಿನ ಸಂಸತ್‌ ಅಧಿವೇಶನದ ವೇಳೆಯಲ್ಲೇ ಮಾಹಿತಿಯನ್ನೂ ನೀಡಿತ್ತು. ಆದರೆ ವಿರೋಧ ಪಕ್ಷದ ಸದಸ್ಯರನ್ನು ಲೋಕಸಭೆಯಿಂದ ಅಮಾನತು ಮಾಡಿ ಒಪ್ಪಿಗೆ ಪಡೆಯುವ ಅಗತ್ಯ ಏನಿತ್ತು ಎನ್ನುವುದು ಪ್ರಶ್ನಾರ್ಥಕ ಚಿಹ್ನೆ ಆಗಿ ಉಳಿದುಕೊಳ್ತಿದೆ. ಲೋಕಸಭೆಯಲ್ಲಿ ಸಂಪೂರ್ಣ ಬಹುಮತ ಹೊಂದಿರುವ ಬಿಜೆಪಿ ಎಲ್ಲರ ಜೊತೆಗೆ ಚರ್ಚೆ ನಡೆಸಿಯೇ ಒಪ್ಪಿಗೆ ಪಡೆಯುವ ಶಕ್ತಿ ಇದ್ದಾಗಲೂ ಸದಸ್ಯರನ್ನು ಹೊರಗಿಟ್ಟಿದ್ದು ನಾಚಿಕೆಗೇಡು ಎನ್ನುವ ಚರ್ಚೆಗಳು ನಡೆಯುತ್ತಿವೆ.

ADVERTISEMENT

ಕಾಂಗ್ರೆಸ್‌ ವಿರುದ್ಧ ಅಮಿತ್‌ ಷಾ ಸೇಡಿನ ಮಾತು..!

ಸಂಸತ್‌ ಭವನದಲ್ಲಿ ಆಗಿರುವ ಭದ್ರತಾ ವೈಫಲ್ಯದ ಬಗ್ಗೆ ಮೌನಕ್ಕೆ ಶರಣಾಗಿದ್ದ ಅಮಿತ್‌ ಷಾ, ಸದನದಿಂದಲೂ ಗೈರು ಹಾಜರಾಗಿದ್ದರು. ಆದರೆ ಬುಧವಾರ ಏಕಾಏಕಿ ಸದನಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವರು ಹೊಸ ಕಾನೂನು ವಿಧೇಯಕಗಳನ್ನು ಸದನದಲ್ಲಿ ಮಂಡಿಸಿದರು. ಅದಕ್ಕೂ ಮೊದಲು ಮಾತನಾಡಿದ ಅಮಿತ್‌ ಷಾ, ಮೋದಿ ನೇತೃತ್ವದಲ್ಲಿ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಹೊಸ ಕಾನೂನು ಮಂಡಿಸಲಾಗ್ತಿದೆ. 150 ವರ್ಷಗಳ ಬಳಿಕ 3 ಹೊಸ ಮಸೂದೆಗಳನ್ನ ತರುತ್ತಿದ್ದೇವೆ. ಕೆಲವರು ನಮಗೆ ಅರ್ಥವಾಗುತ್ತಿಲ್ಲ ಎಂದು ಹೇಳುತ್ತಿದ್ದರು. ನೀವು ಭಾರತೀಯರಾಗಿ ನಿಮ್ಮ ಮನಸ್ಸನ್ನು ಇಟ್ಟುಕೊಂಡರೆ, ನಿಮಗೆ ಅರ್ಥವಾಗುತ್ತದೆ ಎಂದು ನಾನು ಅವರಿಗೆ ಹೇಳುತ್ತೇನೆ. ಆದರೆ ನಿಮ್ಮ ಮನಸ್ಸು ಇಟಲಿಯದ್ದಾಗಿದ್ರೆ ಏನೂ ಅರ್ಥ ಆಗಲ್ಲ ಎಂದು ಸೋನಿಯಾ ಹಾಗು ರಾಹುಲ್‌ ಗಾಂಧಿಗೆ ಕುಟುಕಿದರು.

ಉತ್ತರ ಕೊಡದೆ ಮೊಂಡಾಟ ಆಡುವುದು ಸರಿಯಲ್ಲ..!

ಸಂಸತ್​​​ ಕಲಾಪದಿಂದ ಲೋಕಸಭಾ ಸದಸ್ಯರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಅಮಿತ್ ​ಷಾ ಲೋಕಸಭೆಯಲ್ಲಿ ವಿಧೇಯಕ ಮಂಡಿಸಿದ್ದಾರೆ. ವಿರೋಧ ಪಕ್ಷದ ಸದಸ್ಯರು ಸೇರಿದಂತೆ ಸಮರ್ಪಕ ಚರ್ಚೆ ನಡೆಯದಂತೆ ನೋಡಿಕೊಂಡಿರುವ ಆಡಳಿತ ಪಕ್ಷ ಬಿಜೆಪಿ ಮೂರು ಹೊಸ ಕಾನೂನು ವಿಧೇಯಕಗಳನ್ನ ಮಂಡಿಸಿ ಅಂಗೀಕಾರವನ್ನೂ ಪಡೆದಿದೆ. ಈ ರೀತಿಯ ಹಿಟ್ಲರ್‌ ಸಂಸ್ಕೃತಿ ದೇಶದಲ್ಲಿ ಹೆಚ್ಚಾಗುತ್ತಿದೆ ಎನ್ನುವ ಕಳವಳವನ್ನು ಹಿರಿಯ ರಾಜಕಾರಣಿಗಳು ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೆಲ್ಲಾ ರಾದ್ದಾಂತ ಮಾಡುವ ಬದಲು ವಿರೋಧ ಪಕ್ಷಗಳ ಆಗ್ರಹದಂತೆ ಪ್ರಧಾನಿ ಹಾಗು ಗೃಹ ಸಚಿವರು ಭದ್ರತಾ ಲೋಪದ ಬಗ್ಗೆ ಮಾತನಾಡಿ, ಆಗಿರುವ ತಪ್ಪನ್ನು ತಿದ್ದಿಕೊಳ್ಳೋಣ, ಮುಂದ್ರೆ ಭದ್ರತೆಗೆ ಮತ್ತಷ್ಟು ಜಾಗ್ರತೆ ವಹಿಸಲಾಗುವುದು ಎಂದಿದ್ದರೆ ವಿರೋಧ ಪಕ್ಷಗಳಿಗೆ ಹೋರಾಟಕ್ಕೆ ಹಾದಿ ಎಲ್ಲಿರುತ್ತಿತ್ತು..? ಎನ್ನುವ ಮಾತುಗಳು ಸಾಮಾನ್ಯವಾಗಿದೆ.

Parliament Winter Session: Lok Sabha passes 3 amended criminal law bills  that will replace IPC, CrPC, Evidence Act - BusinessToday

3 ಹೊಸ ಕಾನೂನು ಜಾರಿಯಿಂದ ಲಾಭವೇನು..?

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ 3 ಹೊಸ ಕಾನೂನುಗಳಿಂದ ಜನರಿಗೆ ಏನು ಲಾಭ..? ಎನ್ನುವುದು ಎಲ್ಲರ ಎದುರಿಗೆ ಇರುವ ಪ್ರಶ್ನೆ. ಈಗಾಗಲೇ ಇದ್ದ ಕಾನೂನುಗಳನ್ನೇ ಬೇರೊಂದು ಹೆಸರಿನ ಮೂಲಕ ತರುತ್ತಿದ್ದಾರೆ. ಜೊತೆಗೆ ಸಣ್ಣಪುಟ್ಟ ಬದಲಾವಣೆಯನ್ನೂ ಮಾಡಲಾಗಿದೆ. ಈಗ ಇರುವ ಸೆಕ್ಷನ್‌ಗಳನ್ನು ಬದಲಾವಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಕೋರ್ಟ್‌ ಕಲಾಪಗಳಲ್ಲಿ ಬದಲಾವಣೆ ಆಗಲಿದೆ. ಇನ್ನು ಹಲವಾರು ಅಪರಾಧಕ್ಕೆ ಶಿಕ್ಷೆ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ. ದೇಶದ್ರೋಹ, ಪ್ರತ್ಯೇಕತಾವಾದ, ದಂಗೆ, ಸಾರ್ವಭೌಮತ್ವ, ಏಕತೆ, ಸಮಗ್ರತೆ ರಕ್ಷಣೆಗೆ ಒತ್ತು ನೀಡಲಾಗಿದೆ. ಅಪ್ರಾಪ್ತರ ಮೇಲೆ ಗ್ಯಾಂಗ್​ ರೇಪ್,​​​ ಗಲಭೆ, ದಂಗೆಗಳಾದ್ರೆ ಮರಣ ದಂಡನೆಗೆ ಅವಕಾಶವಿದೆ. ಕೋರ್ಟ್​ ವಿಚಾರಣೆ 30 ದಿನದಲ್ಲಿ ಮುಗಿಸಿ ತೀರ್ಪು ನೀಡಬೇಕು ಎನ್ನುವ ಸಮಯ ನಿಗದಿಯಾಗಿದೆ. ದೇಶಕ್ಕೆ ಅನುಕೂಲ ಆಗುವ ಕಾನೂನುಗಳನ್ನು ಸಮಗ್ರವಾಗಿ ಚರ್ಚಿಸಿ ಜಾರಿ ಮಾಡಿದ್ದರೆ ಒಳ್ಳೆಯದಿತ್ತು ಅನ್ನೋದಷ್ಟೆ ನಮ್ಮ ಪ್ರಶ್ನೆ.

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಇಂದು ಕೂಡ ಮುಂದುವರೆದ ಅಮಾನತು ಪರ್ವ : ಡಿಕೆ ಸುರೇಶ್ ಸೇರಿ ಮೂವರು ಸಂಸದರು ಅಮಾನತು

Next Post

ಜಿಲ್ಲಾ ಚುನಾವಣಾಧಿಕಾರಿ ಹಾಗೂ BBMP ಮುಖ್ಯ ಆಯುಕ್ತರಿಂದ ಮನೆ-ಮನೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆಯ ಪರಿಶೀಲನೆ

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಜಿಲ್ಲಾ ಚುನಾವಣಾಧಿಕಾರಿ ಹಾಗೂ BBMP ಮುಖ್ಯ ಆಯುಕ್ತರಿಂದ ಮನೆ-ಮನೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆಯ ಪರಿಶೀಲನೆ

ಜಿಲ್ಲಾ ಚುನಾವಣಾಧಿಕಾರಿ ಹಾಗೂ BBMP ಮುಖ್ಯ ಆಯುಕ್ತರಿಂದ ಮನೆ-ಮನೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆಯ ಪರಿಶೀಲನೆ

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada